Via.com ಕಂಪನಿಯು ಬುಕಿಂಗ್ಗಳಲ್ಲಿ ವರ್ಷದಿಂದ ವರ್ಷಕ್ಕೆ (YOY) 14% ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಜುಲೈ ಮತ್ತು ಜನವರಿ ತಿಂಗಳುಗಳು ವಿರಾಮ ಮತ್ತು ಆಧ್ಮಾತ್ಮಿಕ ಪ್ರಯಾಣದಲ್ಲಿ ಅತ್ಯಧಿಕ ಬೇಡಿಕೆಯ ತಿಂಗಳುಗಳಾಗಿ ಹೊರಹೊಮ್ಮಿವೆ.
Via.com (Ebix ಟ್ರಾವೆಲ್ಸ್ನ ಅಂಗಸಂಸ್ಥೆ) ಪ್ರಸಕ್ತ ಹಣಕಾಸು ವರ್ಷದ ಆರಂಭದಲ್ಲಿ ಒಟ್ಟಾರೆ ಬುಕಿಂಗ್ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ 14% ರಷ್ಟು ಬಲವಾದ ಬೆಳವಣಿಗೆಯನ್ನು ದಾಖಲಿಸಿದ್ದು, ಇದು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಭಾಗಗಳಲ್ಲಿ ಸಕಾರಾತ್ಮಕ ಪ್ರಯಾಣದ ಭಾವನೆಯನ್ನು ಎತ್ತಿ ತೋರಿಸುತ್ತದೆ.
ಕಳೆದ ವರ್ಷದ ಸ್ಥಿರ ಆವೇಗವನ್ನು ಆಧಾರದ ಮೇಲೆ ಕಂಪನಿಯು ವರ್ಷವಿಡೀ ಎರಡಂಕಿಯ ಬೆಳವಣಿಗೆಯನ್ನು ಮುಂದುವರಿಸುವ ನಿರೀಕ್ಷೆಯಿದ್ದು, ಇದಕ್ಕೆ ಗರಿಷ್ಠ ಋತುಮಾನದ ಬೇಡಿಕೆ, ಪ್ರಾದೇಶಿಕ ಮಾರುಕಟ್ಟೆಗಳಲ್ಲಿನ ವಿಸ್ತರಣೆ ಮತ್ತು ಹೆಚ್ಚುತ್ತಿರುವ ಆಧ್ಯಾತ್ಮಿಕ ಪ್ರವಾಸೋದ್ಯಮದ ಹರಿವುಗಳು ಬೆಂಬಲವನ್ನು ನೀಡುತ್ತವೆ.
ಜುಲೈ ಮತ್ತು ಜನವರಿ ತಿಂಗಳುಗಳು ನಿರಂತರವಾಗಿ ಪ್ಲಾಟ್ಫಾರ್ಮ್ಗೆ ಅತ್ಯಧಿಕ ಪ್ರಮಾಣದ ತಿಂಗಳುಗಳಾಗಿ ಹೊರಹೊಮ್ಮಿವೆ ಎಂಬುದಾಗಿ ಐತಿಹಾಸಿಕ ಬುಕಿಂಗ್ ಡೇಟಾ ತೋರಿಸುತ್ತಿದ್ದು, ಪ್ರತಿಯೊಂದೂ ಸರಾಸರಿ ಮಾಸಿಕ ಮಾನದಂಡಗಳಿಗಿಂತ ಗಮನಾರ್ಹವಾಗಿ ಉತ್ತಮ ಪ್ರದರ್ಶನವನ್ನು ನೀಡಿದೆ. ಅಂತರರಾಷ್ಟ್ರೀಯ ಅಲ್ಪಾವಧಿಯ ವಿಹಾರಗಳು, ಮಾನ್ಸೂನ್ ವಿರಾಮ ಪ್ರಯಾಣ ಮತ್ತು ದೇಶೀಯ ಕ್ಷೇಮ ಪ್ರವಾಸಗಳು ಹಾಗೂ ಗಿರಿಧಾಮ ತಾಣಗಳಿಗೆ ಹೆಚ್ಚಿದ ಬೇಡಿಕೆಯಿಂದಾಗಿ ಜುಲೈನಲ್ಲಿ ಏರಿಕೆಯು ಕಂಡುಬಂದಿದೆ.
ಡಿಸೆಂಬರ್-ಜನವರಿ ಅವಧಿಯು ಮತ್ತೊಂದು ಏರಿಕೆಯನ್ನು ಸೂಚಿಸುತ್ತಿದ್ದು, ಜನವರಿ ತಿಂಗಳು ರಜಾ ದಿನಗಳ ಬೇಡಿಕೆಯಿಂದ ಮತ್ತು ಪ್ರಮುಖ ಯಾತ್ರಾ ಸ್ಥಳಗಳಲ್ಲಿನ ಗರಿಷ್ಠ ಆಧ್ಮಾತ್ಮಿಕ ಪ್ರಯಾಣದ ಆರಂಭದಿಂದ ಪ್ರಯೋಜನವನ್ನು ಪಡೆಯುತ್ತಿದೆ.
ಭೌಗೋಳಿಕ ಪ್ರವೃತ್ತಿಗಳು ಬೇಡಿಕೆಯ ಮಾದರಿಗಳಲ್ಲಿ ವಿಶಿಷ್ಟವಾದ ಋತುಮಾನದ ಬದಲಾವಣೆಯನ್ನು ಬಹಿರಂಗಪಡಿಸುತ್ತವೆ. ಏಪ್ರಿಲ್ ನಿಂದ ಜೂನ್ ವರೆಗಿನ ಬೇಸಿಗೆಯ ತಿಂಗಳುಗಳಲ್ಲಿ, ಕಾಂಗ್ರಾ, ಋಷಿಕೇಶ್ ಮತ್ತು ಮೈಸೂರಿನಂತಹ ವಿರಾಮ ತಾಣಗಳಲ್ಲಿ ಸಮೂಹಗಳು ಕೇಂದ್ರೀಕೃತವಾಗಿರುತ್ತದೆ.
ಕ್ಯಾಲೆಂಡರ್ ಅಕ್ಟೋಬರ್-ಜನವರಿ ತಿಂಗಳಿಗೆ ಬದಲಾದಂತೆ, ಬುಕಿಂಗ್ ಚಟುವಟಿಕೆಯು ವಾರಣಾಸಿ (ಬನಾರಸ್), ಹರಿದ್ವಾರ ಮತ್ತು ಆಗ್ರಾ ಸೇರಿದಂತೆ ಆಧ್ಯಾತ್ಮಿಕ ಮತ್ತು ಪರಂಪರೆಯ ಕೇಂದ್ರಗಳ ಕಡೆಗೆ ಗಮನಾರ್ಹವಾಗಿ ಬದಲಾಗುವುದು ನಂಬಿಕೆ ಆಧಾರಿತ ಪ್ರವಾಸೋದ್ಯಮದ ವಿಸ್ತರಿಸಲ್ಪಡುತ್ತಿರುವ ಆರ್ಥಿಕ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ.
ತನ್ನ ಪ್ರಾದೇಶಿಕ ಹೆಜ್ಜೆಗುರುತನ್ನು ಬಲಪಡಿಸುತ್ತಾ, Via.com ತನ್ನ ಬಿಸಿನೆಸ್ ಅಸೋಸಿಯೇಟ್ ಸೆಂಟರ್ (BAC) ಮಾದರಿಯನ್ನು ಪ್ರಮುಖ ಬೆಳವಣಿಗೆಯ ಲಿವರ್ ಆಗಿ ವಿಸ್ತರಿಸುವುದನ್ನು ಮುಂದುವರೆಸಿದ್ದು, ಇದು ವರ್ಷದಿಂದ ವರ್ಷಕ್ಕೆ ಸ್ಥಿರವಾದ 30% ರಷ್ಟು ವಿಸ್ತರಣೆಯನ್ನು ನೀಡುತ್ತದೆ.
ಈ ನೆಟ್ವರ್ಕ್ ಪ್ರಸ್ತುತ ದೇಶಾದ್ಯಂತ 20 ಕೇಂದ್ರಗಳನ್ನು ನಿರ್ವಹಿಸುತ್ತಿದೆ ಮತ್ತು 2026 ರ ಅಂತ್ಯದ ವೇಳೆಗೆ ಈ ಸಂಖ್ಯೆಯನ್ನು ದ್ವಿಗುಣಗೊಳಿಸಿ 40 ಕ್ಕೆ ಏರಿಸುವ ನಿರೀಕ್ಷೆಯಿದ್ದು, ಇದು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಕಂಪನಿಯ ವ್ಯಾಪ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಜೈಪುರ, ಪಾಟ್ನಾ, ಗುವಾಹಟಿ ಮತ್ತು ಶ್ರೀನಗರದಲ್ಲಿ ಯೋಜಿಸಲಾಗಿರುವ ಹೊಸ ಕೇಂದ್ರಗಳು ರಚನಾತ್ಮಕ, ತಂತ್ರಜ್ಞಾನದಿಂದ ಸಕ್ರಿಯಗೊಳಿಸಿದ ಪ್ರಯಾಣ ಸೇವೆಗಳನ್ನು ಹೆಚ್ಚಿನ ಸಾಮರ್ಥ್ಯದ ಪ್ರಾದೇಶಿಕ ಕಾರಿಡಾರ್ಗಳಿಗೆ ತರುವುದರ ಮೂಲಕ ಹೆಚ್ಚುವರಿ ಪ್ರವಾಸೋದ್ಯಮ ಬೇಡಿಕೆಯನ್ನು ಅನ್ಲಾಕ್ ಮಾಡುವ ನಿರೀಕ್ಷೆಯಿದೆ.
ಕಂಪನಿಯ ಏಜೆಂಟ್ ನೇತೃತ್ವದ ಪರಿಸರ ವ್ಯವಸ್ಥೆಯು ಸಮೂಹಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುವುದನ್ನು ಮುಂದುವರೆಸಿದೆ.
Via.com ನ ಸಂಯೋಜಿತ ಡಿಜಿಟಲ್ ಪ್ಲಾಟ್ಫಾರ್ಮ್ ಅನ್ನು ಬಳಸಿಕೊಳ್ಳುವ ಏಜೆಂಟರು ಬುಕಿಂಗ್ ಸಾಮರ್ಥ್ಯದಲ್ಲಿ 25–30% ರಷ್ಟು ಹೆಚ್ಚಳವನ್ನು ವರದಿ ಮಾಡಿದ್ದು, ಇದು ವಹಿವಾಟು ದಕ್ಷತೆ ಮತ್ತು ಗ್ರಾಹಕರ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ, ಸಿಂಗಾಪುರ ಮತ್ತು ಯುಎಇ ಯಲ್ಲಿ ಕಂಪನಿಯ ಅಂತರರಾಷ್ಟ್ರೀಯ ವಿಸ್ತರಣೆಯು ಹೆಚ್ಚಿನ ಬಳಕೆಯ ಸಾರಿಗೆ ಮತ್ತು ಅಲ್ಪಾವಧಿಯ ಅಂತರರಾಷ್ಟ್ರೀಯ ಬುಕಿಂಗ್ಗಳಿಗೆ ಕೊಡುಗೆಯನ್ನು ನೀಡುವುದರ ಮೂಲಕ ದೇಶೀಯ ಋತುಮಾನದ ಚಕ್ರಗಳನ್ನು ಮೀರಿ ಆದಾಯದ ಹರಿವುಗಳನ್ನು ವಿಸ್ತರಿಸಲು ಸಹಾಯ ಮಾಡುತ್ತಿದೆ.
ಕಾರ್ಯಕ್ಷಮತೆಯ ಕುರಿತು ಪ್ರತಿಕ್ರಿಯಿಸುತ್ತಾ, Via.com (Ebix ಟ್ರಾವೆಲ್ಸ್) ನ ಮುಖ್ಯ ವ್ಯವಹಾರ ಅಧಿಕಾರಿಯಾದ ಅಂಕುರ್ ಶರ್ಮಾ ಅವರು, “ನಮ್ಮ ಬೆಳವಣಿಗೆಯ ಪಥವು ನಮ್ಮ ಫೈಜಿಟಲ್ ಕಾರ್ಯತಂತ್ರದಲ್ಲಿ ನೆಲೆಗೊಂಡಿದ್ದು, ಇದು ವಿಸ್ತರಿಸುತ್ತಿರುವ ಪ್ರಾದೇಶಿಕ ಜಾಲದೊಂದಿಗೆ ದೃಢವಾದ ಡಿಜಿಟಲ್ ವೇದಿಕೆಯನ್ನು ಸಂಯೋಜಿಸುತ್ತದೆ.
ನಾವು ನಮ್ಮ ಏಜೆಂಟ್ ಮತ್ತು BAC ಪರಿಸರ ವ್ಯವಸ್ಥೆಯನ್ನು ವಿಸ್ತರಿಸುತ್ತಿದ್ದಂತೆ, ಪ್ರಮುಖ ವಿರಾಮ ಮತ್ತು ಆಧ್ಯಾತ್ಮಿಕ ಕೇಂದ್ರಗಳಲ್ಲಿ ಅಳೆಯಬಹುದಾದ ಉತ್ಪಾದಕತೆಯ ಲಾಭಗಳನ್ನು ಮತ್ತು ಬಲವಾದ ಮುಂದುವರಿಕೆಯನ್ನು ನಾವು ನೋಡುತ್ತಿದ್ದೇವೆ. ಪಾಲುದಾರರು ಮತ್ತು ಗ್ರಾಹಕರಿಗೆ ಸ್ಥಿರವಾದ ಮೌಲ್ಯವನ್ನು ನೀಡುವಂತಹ, ವಿಸ್ತರಿಸಬಲ್ಲ ಮತ್ತು ಡೇಟಾ-ಚಾಲಿತ ವೇದಿಕೆಯನ್ನು ನಿರ್ಮಿಸುವುದರ ಮೇಲೆ ನಮ್ಮ ಗಮನವಿದೆ” ಎಂದು ಹೇಳಿದರು.
ಇದಕ್ಕೆ ಸೇರಿಸುತ್ತಾ, Ebix ಗ್ರಾಪ್ನ ಅಧ್ಯಕ್ಷರಾದ ವಿಕಾಸ್ ಗಾರ್ಗ್ ಅವರು, “ವಿರಾಮ, ಆಧ್ಯಾತ್ಮಿಕ ಪ್ರವಾಸೋದ್ಯಮ ಮತ್ತು ಅಂತರರಾಷ್ಟ್ರೀಯ ಸಾರಿಗೆಯನ್ನು ಒಳಗೊಂಡಿರುವ ನಮ್ಮ ಮಾದರಿಯು ಸ್ಥಿರವಾದ ವಿಸ್ತರಣೆಯನ್ನು ಉಳಿಸಿಕೊಳ್ಳುತ್ತಲೇ ಋತುಮಾನವನ್ನು ಸಮತೋಲನಗೊಳಿಸಲು ನಮಗೆ ಅನುವು ಮಾಡಿಕೊಡುತ್ತದೆ, ವರ್ಷವಿಡೀ ಬಲವಾದ ಬೆಳವಣಿಗೆಯ ಆವೇಗವನ್ನು ಕಾಯ್ದುಕೊಳ್ಳುವ ವಿಶ್ವಾಸ ನಮಗಿದೆ” ಎಂದು ಹೇಳಿದರು.
ಕಳೆದ ವರ್ಷಕ್ಕಿಂತ ಮೊದಲೇ ಬುಕಿಂಗ್ ಪ್ರಮಾಣಗಳು ಈಗಾಗಲೇ ಟ್ರ್ಯಾಕ್ ಆಗುತ್ತಿವೆ ಮತ್ತು ಪ್ರಮುಖವಾದ ಹೆಚ್ಚು ಬೇಡಿಕೆಯ ತಿಂಗಳುಗಳು ಸಮೀಪಿಸುತ್ತಿರುವುದರಿಂದ, Via.com ಹಬ್ಬದ ಮತ್ತು ಆಧ್ಯಾತ್ಮಿಕ ಪ್ರಯಾಣದ ಋತುವಿನಲ್ಲಿ ನಿರಂತರ ಕಾರ್ಯಕ್ಷಮತೆಯನ್ನು ನಿರೀಕ್ಷಿಸುತ್ತಿದ್ದು, ಇದು ಭಾರತದ ವಿಕಸನಗೊಳ್ಳುತ್ತಿರುವ ಪ್ರಯಾಣ ಪರಿಸರ ವ್ಯವಸ್ಥೆಯಲ್ಲಿ ತನ್ನ ಸ್ಥಾನವನ್ನು ಎತ್ತಿ ತೋರಿಸುತ್ತದೆ.
Via.com ಬಗ್ಗೆ: Via.com ಭಾರತದ ನೋಯ್ಡಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಪ್ರಮುಖ ಪ್ರಯಾಣ ವಿತರಣಾ ವೇದಿಕೆಯಾಗಿದ್ದು, ವಿಮಾನ ಬುಕಿಂಗ್ಗಳು, ಹೋಟೆಲ್ ಕಾಯ್ದಿರಿಸುವಿಕೆಗಳು, ಬಸ್ ಟಿಕೆಟ್ಗಳು, ರಜಾ ಪ್ಯಾಕೇಜ್ಗಳು ಮತ್ತು ಪೂರಕ ಪ್ರಯಾಣ ಉತ್ಪನ್ನಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಪ್ರಯಾಣ ಸೇವೆಗಳನ್ನು ನೀಡುತ್ತಿದೆ.
2006 ರಲ್ಲಿ FlightRaja.com ಎಂದು ಸ್ಥಾಪನೆಯಾಗಿ, ನಂತರ Via.com ಎಂದು ಮರುನಾಮಕರಣಗೊಂಡ ಈ ಕಂಪನಿಯು ಹೈಬ್ರಿಡ್ B2B ಮತ್ತು B2C ಮಾದರಿಯನ್ನು ನಿರ್ವಹಿಸುತ್ತಿದ್ದು, ಇದು ಪ್ರಯಾಣ ಪಾಲುದಾರರು ಮತ್ತು ನೆರೆಹೊರೆಯ ರಿಟೇಲ್ ಮಾರಾಟ ಮಳಿಗೆಗಳ ವ್ಯಾಪಕ ಜಾಲದ ಮೂಲಕ ಗ್ರಾಹಕರೊಂದಿಗೆ ಪ್ರಯಾಣ ಪೂರೈಕೆದಾರರನ್ನು ಸಂಪರ್ಕಿಸುತ್ತದೆ. Via.com ಜಾಗತಿಕವಾಗಿ ಸಾವಿರಾರು ಪ್ರಯಾಣ ಪೂರೈಕೆದಾರರೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತದಾದ್ಯಂತ ಪ್ರಯಾಣ ಏಜೆಂಟ್ಗಳ ಬಲವಾದ ವಿತರಣಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದೆ.
ಈ ವೇದಿಕೆಯು ತನ್ನ ವೆಬ್ಸೈಟ್, ಮೊಬೈಲ್ ಅಪ್ಲಿಕೇಶನ್ಗಳು ಮತ್ತು ಏಜೆಂಟ್-ನೆರವಿರುವ ಔಟ್ಲೆಟ್ಗಳ ಮೂಲಕ ಕೈಗೆಟುಕುವ ಮತ್ತು ಪಡೆದುಕೊಳ್ಳಬಹುದಾದ ಪ್ರಯಾಣದ ಬುಕಿಂಗ್ಗಳನ್ನು ಸಕ್ರಿಯಗೊಳಿಸುತ್ತಿದ್ದು, ಇದಕ್ಕೆ 24/7 ಗ್ರಾಹಕ ಸೇವಾ ಮೂಲಸೌಕರ್ಯದ ಬೆಂಬಲವನ್ನು ಒದಗಿಸಲಾಗುತ್ತಿದೆ.
ಭಾರತದ ಹಲವಾರು ಪಟ್ಟಣಗಳು ಮತ್ತು ನಗರಗಳಲ್ಲಿನ ಉಪಸ್ಥಿತಿ ಮತ್ತು ಆಗ್ನೇಯ ಏಷ್ಯಾಕ್ಕೆ ವಿಸ್ತರಿಸಲ್ಪಟಿರುವ ಕಾರ್ಯಾಚರಣೆಗಳೊಂದಿಗೆ, Via.com ತನ್ನ ತಂತ್ರಜ್ಞಾನ-ಚಾಲಿತ ಮಾರುಕಟ್ಟೆಯ ಮೂಲಕ ಸಣ್ಣ ಪ್ರಯಾಣ ಉದ್ಯಮಿಗಳನ್ನು ಸಬಲಕರಣಗೊಳಿಸುತ್ತಲೇ ದೈನಂದಿನ ಗ್ರಾಹಕರಿಗೆ ಪ್ರಯಾಣದ ಲಭ್ಯತೆಯನ್ನು ಸರಳಗೊಳಿಸುವತ್ತ ಗಮನ ಹರಿಸುತ್ತದೆ.
Eraaya ಲೈಫ್ಸ್ಪೇಸಸ್ ಬಗ್ಗೆ: Eraaya ಲೈಫ್ಸ್ಪೇಸಸ್ ಲಿಮಿಟೆಡ್ (EBIX | 531035 | INE432F01032) Ebix Inc. ಮತ್ತು ಅದರ ವಿಶ್ವಾದ್ಯಂತ ಅಂಗಸಂಸ್ಥೆಗಳ ಜಾಗತಿಕ ಹಿಡುವಳಿ ಕಂಪನಿಯಾಗಿದೆ.
2024 ರಲ್ಲಿ ಕಾರ್ಯತಂತ್ರದ ಪರಿವರ್ತನೆಯ ನಂತರ, Eraaya ಜೀವನಶೈಲಿ ಮತ್ತು ಆತಿಥ್ಯದಲ್ಲಿ ತನ್ನ ಸಾಂಪ್ರದಾಯಿಕ ಬೇರುಗಳಿಂದ ವೈವಿಧ್ಯಮಯ ಮತ್ತು ತಂತ್ರಜ್ಞಾನ-ನೇತೃತ್ವದ ಹೋಲ್ಡಿಂಗ್ ಪ್ಲಾಟ್ಫಾರ್ಮ್ ಆಗಿ ವಿಕಸನಗೊಂಡಿದ್ದು, ಇದು 13 ದೇಶಗಳಲ್ಲಿ ಕಾರ್ಯಾಚರಣೆಗಳನ್ನು ಹೊಂದಿದೆ ಮತ್ತು ವಿಶ್ವಾದ್ಯಂತ ಉದ್ಯಮ ಮತ್ತು ಗ್ರಾಹಕ ಮಾರುಕಟ್ಟೆಗಳಿಗೆ ಸೇವೆಯನ್ನು ಸಲ್ಲಿಸುತ್ತಿದೆ.
Ebix Inc. ಮತ್ತು ಅದರ ಜಾಗತಿಕವಾಗಿ ಕಾರ್ಯ ನಿರ್ವಹಿಸುವ ಅಂಗಸಂಸ್ಥೆಗಳ ಮೂಲಕ, Eraaya ನಾಲ್ಕು ಪ್ರಮುಖ ವ್ಯವಹಾರ ವಿಭಾಗಗಳಾದ ತಂತ್ರಜ್ಞಾನ, ಪಾವತಿಗಳು, ಪ್ರಯಾಣ ಮತ್ತು ಉದಯೋನ್ಮುಖ ವ್ಯವಹಾರಗಳಲ್ಲಿ ಬಲವಾದ ಜಾಗತಿಕ ಉಪಸ್ಥಿತಿಯನ್ನು ನಿರ್ಮಿಸಿದೆ. ವಿಮೆ, ಮರುವಿಮೆ, ಹಣಕಾಸು ಸೇವೆಗಳು, ಆರೋಗ್ಯ ರಕ್ಷಣೆ, ಅಪಾಯ ಮತ್ತು ಅನುಸರಣೆ ಹಾಗೂ ವಿವಿಧ ಸೇವಾ ವಿಭಾಗಗಳಿಗೆ ಸೇವೆಯನ್ನು ಸಲ್ಲಿಸುವಂತಹ ಇನ್ನೂ ಅನೇಕ ಸಾಫ್ಟ್ವೇರ್ ಉತ್ಪನ್ನಗಳನ್ನು ಬೆಂಬಲಿಸುವ ತಂತ್ರಜ್ಞಾನ ವೇದಿಕೆಗಳ ವ್ಯವಹಾರವು ಬೇಡಿಕೆಯ ಮೇರೆಗೆ ಸಾಫ್ಟ್ ವೇರ್, SaaS ಪರಿಹಾರಗಳು ಮತ್ತು ಡಿಜಿಟಲ್ ವಿನಿಮಯಗಳನ್ನು ಒದಗಿಸುತ್ತದೆ.
ನಗದು ಪಾವತಿ ವಿಭಾಗವು ಭೌಗೋಳಿಕ ಪ್ರದೇಶಗಳಾದ್ಯಂತ ವೈವಿಧ್ಯಮಯ ಬಳಕೆಯ ಸಂಸರ್ಭಗಳನ್ನು ಪೂರೈಸುವ ತಂತ್ರಜ್ಞಾನದಿಂದ ಸಕ್ರಿಯಗೊಳಿಸಿದ ಪಾವತಿಯ ಪರಿಹಾರಗಳು ಮತ್ತು ಹಣಕಾಸು ವಹಿವಾಟು ವೇದಿಕೆಗಳನ್ನು ಒದಗಿಸುತ್ತದೆ. Ebix ಟ್ರಾವೆಲ್ ಗ್ರೂಪ್ನ ಪ್ರಮುಖ ಲಂಬಸಾಲುಗಳಲ್ಲಿ ಒಂದಾಗಿದ್ದು, ಬುಕಿಂಗ್ ಪ್ಲಾಟ್ಫಾರ್ಮ್ಗಳು, ಪಾವತಿ ಏಕೀಕರಣ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಿಮಾನಯಾನ ಸಂಸ್ಥೆಗಳು, ಪ್ರಯಾಣ ಏಜೆನ್ಸಿಗಳು, ಕಾರ್ಪೊರೇಟ್ಗಳು ಮತ್ತು ಗ್ರಾಹಕರಿಗೆ ಸೇವೆಯನ್ನು ಸಲ್ಲಿಸುವ ಡಿಜಿಟಲ್ ಮಾರುಕಟ್ಟೆಗಳು ಸೇರಿದಂತೆ ಪ್ರಯಾಣ ವಿತರಣಾ ಪರಿಹಾರಗಳೊಂದಿಗೆ ಸಮಗ್ರ ಪ್ರಯಾಣವನ್ನು ನೀಡುತ್ತದೆ. ಸಮಾನಾಂತರವಾಗಿ, ಕಂಪನಿಯ ಉದಯೋನ್ಮುಖ ವ್ಯವಹಾರಗಳು ಇ-ಲರ್ನಿಂಗ್ ಅನ್ನು ಒಳಗೊಂಡಿದ್ದು, ಇದು ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ಕಲಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಲು ವಿನ್ಯಾಸಗೊಳಿಸಲಾದ ಡಿಜಿಟಲ್ ಶಿಕ್ಷಣ ಮತ್ತು ತರಬೇತಿ ಪರಿಹಾರಗಳನ್ನು ತಲುಪಿಸುವುದರ ಕಡೆಗೆ ಗಮನ ಹರಿಸಿದೆ.
ಈ ವ್ಯವಹಾರಗಳು ಜಾಗತಿಕ ವಿತರಣಾ ಸಾಮರ್ಥ್ಯಗಳು, ದೀರ್ಘಕಾಲೀನ ಗ್ರಾಹಕ ಸಂಬಂಧಗಳು ಮತ್ತು ಪ್ರಕ್ರಿಯೆ-ಚಾಲಿತ ವೇದಿಕೆಗಳಿಂದ ಬೆಂಬಲಿಸಲ್ಪಟ್ಟ ಉದ್ಯಮ ಮತ್ತು ಗ್ರಾಹಕ ಮಾರುಕಟ್ಟೆಗಳಲ್ಲಿ ಕಾರ್ಯ ನಿರ್ವಹಿಸಲು Eraaya ಗೆ ಅನುವು ಮಾಡಿಕೊಡುತ್ತವೆ.
