ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ, ಜಂಪೇನಹಳ್ಳಿ ಕೆರೆಯಲ್ಲಿ 40 ರಿಂದ 50 ವರ್ಷ ವಯಸ್ಸುಳ್ಳ ದುಡಕಾಯ ಶರೀರವಿರುವ ಮೃತದೇಹ ತಡರಾತ್ರಿ ಪತ್ತೆಯಾಗಿದ್ದು, ಕೊರಟಗೆರೆ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಮೃತದೇಹವನ ಹೊರತೆಗೆಲಾಗಿದೆ.
ಅಮೃತನು ಕೆಂಪು ನೀಲಿ ಬಿಳಿ ಬಣ್ಣದ ಗಿರುಗಳಿರುವ ಅರ್ಧ ಶರ್ಟ್ ಹಾಗೂ ಕಾಪಿ ಕಲರ್ ಪ್ಯಾಂಟ್ ಧರಿಸಿರುತ್ತಾನೆ , ಈ ವ್ಯಕ್ತಿ ನೀರು ಮುಟ್ಟಲು ಅಥವಾ ಯಾವುದೋ ಕಾರಣದಿಂದ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಮೇಲ್ಕಂಡ ಚಹರೆವುಳ್ಳ ಅಪರಿಚಿತ ಗಂಡಸಿನ ಬಗ್ಗೆ ಯಾವುದಾದರೂ ಮಾಹಿತಿ ಸಿಕ್ಕರೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಅಥವಾ ಕೊರಟಗೆರೆ ಸಬ್ ಇನ್ಸ್ಪೆಕ್ಟರ್ 9480802988, ಸಿಪಿಐ 948080 2954 ದೂರವಾಣಿ ಕರೆ ಮಾಡಿ ಮಾಹಿತಿ ನೀಡಲು ಕೋರಿದೆ.
– ಶ್ರೀನಿವಾಸ್ ಕೊರಟಗೆರೆ.
