ಕೆ.ಆರ್.ಪೇಟೆ,ಮಾ.20: ಪಟ್ಟಣದ ಕೆಪಿಟಿಸಿಎಲ್ ಮತ್ತು ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಉಪವಿಭಾಗದ ವತಿಯಿಂದ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವಿ.ಪುಟ್ಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಸುಲೋಚನಮ್ಮ-ರಾಮದಾಸ್ ಸಭಾಂಗಣದಲ್ಲಿ “ಪವರ್ ಮ್ಯಾನ್ ದಿನ” ಹಾಗೂ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಆರ್.ಪೇಟೆ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪುಟ್ಟಸ್ವಾಮಿ ಅವರು ನಮ್ಮ ಮನೆಗಳನ್ನು ಬೆಳಗಲು ಜೀವದ ಹಂಗು ತೊರೆದು ಕೆಲಸ ಮಾಡುವ ಪವರ್ ಮ್ಯಾನ್ಗಳ ಹಿತರಕ್ಷಣೆಗಾಗಿ ‘ಪವರ್ ಮ್ಯಾನ್ ದಿನಾಚರಣೆ ಮಾಡುವ ಮೂಲಕ ಸುರಕ್ಷಿತ ಸಮಾಜ ನಿರ್ಮಾಣದಲ್ಲಿ ಪವರ್ ಮ್ಯಾನ್ಗಳ ಪರಿಶ್ರಮವನ್ನು ಸ್ಮರಿಸಲಾಯಿತು. ಅದೇ ರೀತಿ ಇಡೀ ಸಮಾಜದ ಬೆಳಕಾಗಿರುವ ಮಹಿಳೆಯರಿಗಾಗಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸುವ ಮೂಲಕ ತಾಯಿಯೇ ಎಲ್ಲಕ್ಕಿಂತಲೂ ಸರ್ವ ಶ್ರೇಷ್ಠ ಎಂಬ ಸಂದೇಶವನ್ನು ಸಾರಲಾಗಿದೆ.
ಎರಡೂ ದಿನಾಚರಣೆಗಳನ್ನು ಒಂದೇ ದಿನ ಆಚರಿಸುವ ಮೂಲಕ ನಮ್ಮ ಇಲಾಖೆಯಲ್ಲಿ ಮಹಿಳೆ-ಪುರುಷರು ಸರಿ ಸಮಾನರು ಎಂಬ ಸಂದೇಶವನ್ನು ನೀಡಲಾಯಿತು. ಇದಕ್ಕೆ ಸಹಕಾರ ನೀಡಿದ ಚೆಸ್ಕಾಂ ಮತ್ತು ಕೆಪಿಟಿಸಿಎಲ್ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಸಕ್ರಿಯವಾಗಿ ಎರಡೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಎಲ್ಲಾ ನೌಕಕರಿಗೆ ಇಲಾಖೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಇ.ಇ.ಪುಟ್ಟಸ್ವಾಮಿ ತಿಳಿಸಿದರು.

ಗ್ರಾಹಕರ ಸೇವೆ ಎಷ್ಟು ಮುಖ್ಯವೋ, ಅಷ್ಟೇ ಪವರ್ ಮ್ಯಾನ್ಗಳ ಆರೋಗ್ಯ ಮತ್ತು ಸುರಕ್ಷತೆಯೂ ಮುಖ್ಯ ಎಂದು ಪುಟ್ಟಸ್ವಾಮಿ ಪ್ರತಿಪಾದಿಸಿದರು.
ಕೆಲಸದ ಅವಧಿಯಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿ, ನೌಕರರಿಗೆ ‘ಸುರಕ್ಷತಾ ಮಂತ್ರ’ವನ್ನು ಬೋಧಿಸಲಾಯಿತು.
ಸಾಮಾಜಿಕ ಚಿಂತಕಿ, ನಗರಸಭಾ ಮಾಜಿ ಉಪಾಧ್ಯಕ್ಷೆ ಇಂದಿರಾಸತೀಶ್ಬಾಬು ಮತ್ತು ಪಟ್ಟಣದ ಪಲ್ಗುಣಿ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಕಾವ್ಯ ಮಹಿಳಾ ಮತ್ತು ಪವರ್ಮ್ಯಾನ್ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.
ಬೆಂಗಳೂರಿನ ಬೆಸ್ಕಾಂ ಹಿರಿಯ ಪವರ್ ಮ್ಯಾನ್ ಕಗ್ಗೆರೆ ಮಂಜುನಾಥ್ ಪವರ್ ಮ್ಯಾನ್ ಅಥವಾ ಲೈನ್ಮ್ಯಾನ್ಗಳ ಸುರಕ್ಷತಾ ಕ್ರಮಗಳನ್ನು ಏಕಪಾತ್ರಾಭಿನಯದ ಮೂಲಕ ಅತ್ಯಂತ ಮನಮುಟ್ಟುವಂತೆ ತಿಳಿಸಿಕೊಡುವ ಮೂಲಕ ಇಡೀ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಹೊರಹೊಮ್ಮಿದರು.

ಕಾರ್ಯಕ್ರಮದಲ್ಲಿ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಂಕರ್ , ಲೆಕ್ಕಾಧಿಕಾರಿ ನಯಾಜ್, ಎಇಇ ಪ್ರದೀಪ್, ಸಹಾಯಕ ಲೆಕ್ಕಾಧಿಕಾರಿ ಶಿವಕುಮಾರ್ ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ಗಳಾದ ಭಾಸ್ಕರ್, ಟಿ.ಜಿ.ತಿಮ್ಮಪ್ಪ, ಸುನಿಲ್ಕುಮಾರ್, ನಾಗರಾಜು, ನವೀನ್, ಸತೀಶ್, ಶ್ರೀಕಾಂತ್, ರವೀಂದ್ರ, ಹರೀಶ್ ಕುಮಾರ್, ಎ.ಜೆ.ನಾಗರಾಜು, ಕೆ.ರಘು, ವಿನಯ್, ಜಗದೀಶ್, ನಿತಿನ್, ಅಶೋಕ್, ಕೆಪಿಟಿಸಿಎಲ್ ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯರಾದ ಕೆ.ಮಧುಸೂಧರ್, ಕೆಪಿಟಿಸಿಎಲ್ ನೌಕರರ ಸಂಘ-659 ಸ್ಥಳೀಯ ಸಮಿತಿಯ ಅಧ್ಯಕ್ಷರಾದ ಹೆಚ್.ಸಿ.ಶಿವಶಂಕರ್ಮೂರ್ತಿ, ಕಾರ್ಯದರ್ಶಿ ಪಿ.ಅನಿಲ್, ಸಹ ಕಾರ್ಯದರ್ಶಿ ಅರುಣ್.ಹೆಚ್.ಎನ್, ಉಪಾಧ್ಯಕ್ಷ ಹರ್ಷಿತ್.ಆರ್, ಖಜಾಂಚಿ ಪರಮೇಶ್, ನಿರ್ದೇಶಕರಾದ ಸ್ವಾಮೀಗೌಡ, ಮಹೇಶ್, ಕಿರಣ್, ಡಿ.ಎಂ.ಹರೀಶ್, ರಮ್ಯ, ಲಕ್ಷ್ಮೀ, ರುಕ್ಮಿಣಿ, ಮಹಿಳಾ ನೌಕರರ ಕುಂದುಕೊರತೆ ಸಮಿತಿ ಅಧ್ಯಕ್ಷೆ ರುಕ್ಮಿಣಿ, ವಿದ್ಯುತ್ ಗುತ್ತಿಗೆದಾರ ಸಂಘದ ಕಾರ್ಯದರ್ಶಿ ಕುಮಾರ್, ಎಸ್.ಪಿ.ಸಿದ್ದೇಶ್, ಆರ್.ಕೆ.ಕುಮಾರ್, ನಾಗೇಂದ್ರ ಸೇರಿದಂತೆ ಎಲ್ಲಾ ಸಹಾಯಕ ಇಂಜಿನಿಯರ್, ಎಲ್ಲಾ ಶಾಖಾಧಿಕಾರಿಗಳು, ಸೆಸ್ಕ್ ಮತ್ತು ಕೆಪಿಟಿಸಿಎಲ್ ಎಲ್ಲಾ ನೌಕರರು ಮತ್ತು ಅಧಿಕಾರಿಗಳು, ಹೊರಗುತ್ತಿಗೆ ನೌಕರರು, ಗ್ರಾಮ ವಿದ್ಯುತ್ ಪ್ರತಿನಿಧಿಗಳು, ಎಲ್ಲಾ ಪವರ್ ಮ್ಯಾನ್ ಮತ್ತು ಮಹಿಳಾ ನೌಕರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಇದೇ ಸಂದರ್ಭದಲ್ಲಿ ಮಹಿಳಾ ದಿನಾಚರಣೆ ಮತ್ತು ಪವರ್ ಮ್ಯಾನ್ ದಿನದ ಅಂಗವಾಗಿ ನಡೆಸಿದ ಕ್ರೀಡಾ ಕೂಟದಲ್ಲಿ ವಿಜೇತರಾದ ನೌಕರರಿಗೆ ಬಹುಮಾನತಗಳನ್ನು ವಿತರಣೆ ಮಾಡಲಾಯಿತು.
– ಶ್ರೀನಿವಾಸ್ ಆರ್.
