ಹಾಸನ, ಮಾ.26: ನಗರ ಹಾಗೂ ಜಿಲ್ಲೆಯ ಸಾರ್ವಜನಿಕರಿಗೆ ಆರೋಗ್ಯ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ವೇದಭಾರತೀ ಹೊಯ್ಸಳ ನಗರ, ಹಾಸನ ಸಂಸ್ಥೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ, ಆಪ್ತಸಲಹೆ ಹಾಗೂ ಸಮಗ್ರ ಚಿಕಿತ್ಸಾ ಶಿಬಿರವನ್ನು ಮಾರ್ಚ್ 28 ಮತ್ತು 29ರಂದು ಹಮ್ಮಿಕೊಳ್ಳಲಾಗಿದೆ ಎಂದು ಹರಿಹರಪುರ ಶ್ರೀಧರ್ ತಿಳಿಸಿದ್ದಾರೆ.
ಶಿಬಿರವು ಮಾರ್ಚ್ 28ರಂದು (ಶನಿವಾರ) ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಹಾಗೂ ಮಾರ್ಚ್ 29ರಂದು (ಭಾನುವಾರ) ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಈ ಕುರಿತು ಮಾತನಾಡಿದ ಉಮಾ ಮಹೇಶ್ವರ್ ಗುರೂಜಿ, ಶಿಬಿರದಲ್ಲಿ ದೈಹಿಕ, ಮಾನಸಿಕ ಹಾಗೂ ಕೌಟುಂಬಿಕ ಆರೋಗ್ಯ ಸಮಸ್ಯೆಗಳಿಗೆ ಉಚಿತ ವೈಯಕ್ತಿಕ ಆಪ್ತಸಮಾಲೋಚನೆ ಮತ್ತು ಆರೋಗ್ಯ ಮಾರ್ಗದರ್ಶನ ನೀಡಲಾಗುತ್ತದೆ ಎಂದು ತಿಳಿಸಿದರು.
ಶಿಬಿರದಲ್ಲಿ ವಿಶೇಷವಾಗಿ ಸಾಂಪ್ರದಾಯಿಕ ಕಣ್ಣಿನ ಔಷಧಿ ಚಿಕಿತ್ಸೆಯೂ ಲಭ್ಯವಿದ್ದು, ಕಣ್ಣಿನ ದೃಷ್ಟಿದೋಷ, ತಲೆನೋವು, ಅರ್ಧತಲೆನೋವು, ಮೂಗು ಹಾಗೂ ಗಂಟಲಿನ ಸಮಸ್ಯೆಗಳು, ಥೈರಾಯ್ಡ್ ಸಮಸ್ಯೆಗಳು, ಮಹಿಳೆಯರ ಮುಟ್ಟಿನ ಹೊಟ್ಟೆನೋವು ಹಾಗೂ ಗರ್ಭಕೋಶದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಈ ಚಿಕಿತ್ಸೆಗೆ ಪ್ರತಿ ವ್ಯಕ್ತಿಗೆ ರೂ.50 ಶುಲ್ಕ ನಿಗದಿಪಡಿಸಲಾಗಿದೆ.
ಆಸಕ್ತರು ಉಚಿತ ಅಪಾಯಿಂಟ್ಮೆಂಟ್ ಪಡೆಯಲು (+91) 9916073504 ಸಂಖ್ಯೆಗೆ ಸಂಪರ್ಕಿಸಬಹುದು.
ಸ್ವಸ್ಥ ಅಂತಾರಾಷ್ಟ್ರೀಯ ವಾಸ್ಕ್ ಯೋಗ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಹಾಗೂ ಸಾಂಪ್ರದಾಯಿಕ-ಸಾಂಸ್ಕೃತಿಕ ಆಧ್ಯಾತ್ಮಿಕ ಸಂಶೋಧನಾ ಸಂಸ್ಥೆ ಈ ಶಿಬಿರವನ್ನು ಆಯೋಜಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಯೋಜಕರಾದ ಶ್ರೀ ಹರಿಹರಪುರ ಶ್ರೀಧರ ಅವರನ್ನು 7892940096 / 9663572406 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.
