ಗ್ಲ್ಯಾಸ್ಗೋ (ಸ್ಕಾಟ್ಲ್ಯಾಂಡ್): ಸ್ಕಕಾಟ್ಲ್ಯಾಂಡ್ ನ ಗ್ಲ್ಯಾಸ್ಗೋ ನಗರದಲ್ಲಿ ಜುಲೈ 23, 2026 ರಿಂದ ಆರಂಭವಾಗಿರುವ ‘ಕಾಮನ್ವೆಲ್ತ್ ಗೇಮ್ಸ್ 2026’ ಕ್ರೀಡಾಕೂಟದ ಅಧಿಕೃತ ಉದ್ಘಾಟನಾ ಸಮಾರಂಭಕ್ಕೂ ಮುನ್ನವೇ ಭಾರತದ ಖ್ಯಾತ ಬಾಕ್ಸಿಂಗ್ ಪಟು, ಒಲಿಂಪಿಕ್ಸ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ (Lovlina Borgohain) ದೇಶಕ್ಕೆ ಮೊದಲ ಪದಕವನ್ನು ಖಚಿತಪಡಿಸಿದ್ದಾರೆ.
ನೇರ ಸೆಮಿಫೈನಲ್ ಪ್ರವೇಶ: ಮಹಿಳೆಯರ 75 ಕೆಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಿರುವ ಲವ್ಲಿನಾ ಅವರಿಗೆ ‘ಬೈ’ (Bye) ಸಿಕ್ಕಿದ್ದರಿಂದ ಅವರು ನೇರವಾಗಿ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನ ಬಾಕ್ಸಿಂಗ್ ನಿಯಮಗಳ ಪ್ರಕಾರ, ಸೆಮಿಫೈನಲ್ನಲ್ಲಿ ಸೋಲುವ ಇಬ್ಬರೂ ಬಾಕ್ಸರ್ಗಳಿಗೂ ‘ಕಂಚಿನ ಪದಕ’ (Bronze Medal) ನೀಡುವುದು ಕಡ್ಡಾಯವಾಗಿದೆ. ಹೀಗಾಗಿ, ಜುಲೈ 31 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯಕ್ಕೂ ಮುನ್ನವೇ ಲವ್ಲಿನಾಗೆ ಕನಿಷ್ಠ ಕಂಚಿನ ಪದಕ ಪಕ್ಕಾ ಆಗಿದೆ.
ಗ್ಲ್ಯಾಸ್ಗೋ ಕ್ರೀಡಾಕೂಟದ ವಿಶೇಷತೆಗಳು:
-
ಧ್ವಜಧಾರಿ: ಗ್ಲ್ಯಾಸ್ಗೋಯ ‘OVO ಹೈಡ್ರೋ’ ಆವರಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ತಾರಾ ವೇಟ್ಲಿಫ್ಟರ್ ಮೀರಾಬಾಯಿ ಚಾನು ಭಾರತೀಯ ತುಕಡಿಯ ಧ್ವಜಧಾರಿಯಾಗಿ ಮುನ್ನಡೆಸಿದರು.
-
ಭಾರತೀಯ ತುಕಡಿ: ಈ ಬಾರಿಯ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತವು 10 ವಿಭಿನ್ನ ಕ್ರೀಡೆಗಳಲ್ಲಿ ಸ್ಪರ್ಧಿಸಲು ಒಟ್ಟು 124 ಅಥ್ಲೀಟ್ಗಳ ನಿಯೋಗವನ್ನು ಕಳುಹಿಸಿಕೊಟ್ಟಿದೆ.
-
ಅವಧಿ: 2026 ರ ಕಾಮನ್ವೆಲ್ತ್ ಗೇಮ್ಸ್ ಜುಲೈ 23 ರಿಂದ ಆಗಸ್ಟ್ 2 ರವರೆಗೆ ಸ್ಕಾಟ್ಲ್ಯಾಂಡ್ನ ಗ್ಲ್ಯಾಸ್ಗೋದಲ್ಲಿ ನಡೆಯಲಿದೆ.
