ರಾಮನಾಥಪುರ, ಮಾ.23:
ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ರಾಮನಾಥಪುರದ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಮಾರ್ಚ್ 27ರಿಂದ ಏಪ್ರಿಲ್ 5ರವರೆಗೆ 10 ದಿನಗಳ ಕಾಲ ಶ್ರೀರಾಮನವಮಿ ಅಂಗವಾಗಿ ಭವ್ಯ ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀರಾಮ ಸೇವಾ ಸಮಿತಿ ಕಾರ್ಯದರ್ಶಿ ಆರ್.ಆರ್. ಶ್ರೀನಿವಾಸ್ ತಿಳಿಸಿದ್ದಾರೆ.
ಕಾವೇರಿ ನದಿ ದಂಡೆಯಲ್ಲಿರುವ ಐತಿಹಾಸಿಕ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಭಕ್ತರ ಮತ್ತು ಕಲಾಭಿಮಾನಿಗಳಿಗಾಗಿ ಸಂಗೀತ, ನೃತ್ಯ ಹಾಗೂ ಭಕ್ತಿಪರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಾ.27ರಂದು ಸಂಗೀತೋತ್ಸವಕ್ಕೆ ಚಾಲನೆ
ಮಾರ್ಚ್ 27ರಂದು ಶುಕ್ರವಾರ ಸಂಜೆ 7 ಗಂಟೆಗೆ ಪ್ರಥಮ ದಿನದ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ವಿದುಷಿ ಮಾಧುರಿ ಕೌಶಿಕ್ ಅವರ ಹಾಡುಗಾರಿಕೆ ನಡೆಯಲಿದೆ. ಇವರಿಗೆ ವಿ. ಕೃತಿಕ್ ಕೌಶಿಕ್ (ಪಿಟೀಲು), ವಿ. ಕೌಶಿಕ್ ಶ್ರೀಧರ್ (ಮೃದಂಗ) ಹಾಗೂ ವಿ. ಶಮಿತ್ ಜಿ. (ಘಟಂ) ಸಹಕಾರ ನೀಡಲಿದ್ದಾರೆ.

ಪ್ರತಿದಿನ ವೈವಿಧ್ಯಮಯ ಕಾರ್ಯಕ್ರಮಗಳು
ಮಾರ್ಚ್ 28ರಂದು ವಿ. ಡಿ. ಬಾಲಕೃಷ್ಣ ಮತ್ತು ವಿ. ವಂಶಿಧರ್ ಅವರ ವೀಣಾ-ವೇಣು ವಾದನ,
ಮಾರ್ಚ್ 29ರಂದು ವಿ. ಯೋಗ ಕೀರ್ತನ ಅವರ ಗಾಯನ,
ಮಾರ್ಚ್ 30ರಂದು ಬೆಂಗಳೂರಿನ ನೃತ್ಯ ಶಾಲೆಯ ವಿದುಷಿ ಭಾರ್ಗವಿ ಹಾಗೂ ವೃಂದ ಅವರ ಭರತನಾಟ್ಯ ಕಾರ್ಯಕ್ರಮ,
ಮಾರ್ಚ್ 31ರಂದು ಬಿ.ಎಸ್. ಉರುಳಿ ಬಸವಪಟ್ಟಣ ಅವರ ‘ತ್ಯಾಗರಾಜ ದರ್ಶನ’ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಏಪ್ರಿಲ್ 1ರಂದು ನೃತ್ಯಾನ್ವೇಷಣ ತಂಡದ ವಿದುಷಿ ಸುಪ್ರಜಾ ಎನ್.ಎಸ್. ಹಾಗೂ ವೃಂದ ಅವರ ಭರತನಾಟ್ಯ,
ಏಪ್ರಿಲ್ 2ರಂದು ವಿ. ವಿವೇಕ್ ಮೋಜೀಕುಳಂ ಅವರ ಹಾಡುಗಾರಿಕೆ,
ಏಪ್ರಿಲ್ 3ರಂದು ಖ್ಯಾತ ಕಲಾವಿದ ವಿ. ಸಿಕ್ಕಿಲ್ ಗುರುಚರಣ್ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಏ.4ರಂದು ಸೀತಾರಾಮ ಕಲ್ಯಾಣೋತ್ಸವ
ಏಪ್ರಿಲ್ 4ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಸೀತಾರಾಮ ಕಲ್ಯಾಣೋತ್ಸವ ಜರುಗಲಿದ್ದು, ಸಂಜೆ ಡಾ. ಎನ್.ಜೆ. ನಂದಿನಿ ಅವರ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಏ.5ರಂದು ಸಮಾರೋಪ
ಏಪ್ರಿಲ್ 5ರಂದು ಭಾನುವಾರ ಸಂಜೆ ವಿ. ಕಲ್ಯಾಣಪುರಂ ಅರವಿಂದ್ ಅವರ ಹಾಡುಗಾರಿಕೆಯಿಂದ 10 ದಿನಗಳ ಸಂಗೀತೋತ್ಸವಕ್ಕೆ ಸಮಾರೋಪ ನಡೆಯಲಿದೆ.
ಭಕ್ತರು, ಕಲಾಭಿಮಾನಿಗಳಿಗೆ ಆಹ್ವಾನ
ಈ 10 ದಿನಗಳ ಶ್ರೀರಾಮನವಮಿ ಸಂಗೀತೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಕಲಾಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಆರ್.ಆರ್. ಶ್ರೀನಿವಾಸ್ ಮನವಿ ಮಾಡಿದ್ದಾರೆ.
ವರದಿ: ಕುಮಾರಸ್ವಾಮಿ, ರಾಮನಾಥಪುರ.
