ತುಮಕೂರು : ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ತುಮಕೂರು ವಿಭಾಗದ ವತಿಯಿಂದ ತುಮಕೂರು ಜ್ಹೋನಲ್ ತಂಡದ ಆಯ್ಕೆಗೆ ಸಂಬಂಧಿಸಿದಂತೆ ಮಾರ್ಚ್ 31, ಏಪ್ರಿಲ್ 07 ಮತ್ತು ಏಪ್ರಿಲ್ 08 ರಂದು ಅಯ್ಕೆ ಟ್ರಯಲ್ ನಡೆಯಲಿದೆ ಎಂದು ಕೆ.ಎಸ್.ಸಿ.ಐ ಆಡಳಿತ ಮಂಡಳಿ ಸದಸ್ಯ ಸಿ.ಆರ್.ಹರೀಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ತುಮಕೂರು ಜ್ಹೋನ್ಗೆ ದಾವಣಗೆರೆ, ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳು ಸೇರಲಿದ್ದು,14 ವರ್ಷದ ಒಳಗಿನ ಬಾಲಕರ ಕ್ರಿಕೆಟ್ ಆಟಗಾರರ ಆಯ್ಕೆ ಮಾರ್ಚ್ 31 ರಂದು ಬೆಳಗ್ಗೆ 9:30 ಗಂಟೆಗೆ ದಾವಣಗೆರೆಯ ಎಂ.ಬಿ.ಎ ಟ್ರುಫ್ ಮೈದಾನದಲ್ಲಿ, ಬಳ್ಳಾರಿಯ ಜಿ.ಜೆ.ಆರ್ ಟ್ರುಫ್ ಮೈದಾನದಲ್ಲಿ, ತುಮಕೂರಿನ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ, ಹಾಗೂ ಚಿತ್ರದುರ್ಗದ ಸಿಸಿಸಿ ಟ್ರುಫ್ ಮೈದಾನದಲ್ಲಿ ನಡೆಯಲಿದೆ.ಕ್ರಿಕೆಟ್ ಆಟದ ಬಗ್ಗೆ ಆಸಕ್ತಿ ಇರುವ ಮತ್ತು ಕ್ರಿಕೆಟ್ ಆಡಿ ಅನುಭವ ಇರುವ ಮಕ್ಕಳು ತಮ್ಮ ಕ್ರಿಕೆಟ್ ಕಿಟ್ನೊಂದಿಗೆ ಹೆಸರು ನೊಂದಾಯಿಸಿ, ಆಟವಾಡಲು ಅವಕಾಶವಿದೆ.ಅಯ್ಕೆ ಟ್ರಯಲ್ನಲ್ಲಿ ಒಳ್ಳೆಯ ಪ್ರದರ್ಶನ ನೀಡಿದ ತಲಾ 15 ಜನರ ಜಿಲ್ಲಾ ತಂಡವನ್ನು ರಚಿಸಿ, ಏಪ್ರಿಲ್ 6ರಿಂದ 8ರವರೆಗೆ ತುಮಕೂರು ಜ್ಹೋನಲ್ ಅಂತರ ಜಿಲ್ಲಾ ಸ್ಪರ್ಧೆ ನಡೆಸಲಾಗುವುದು. ಇಲ್ಲಿ ಉತ್ತಮ ಪ್ರದರ್ಶನ ತೋರುವ 15 ಜನರನ್ನು ಆಯ್ಕೆ ಮಾಡಿ, ಇತರೆ ಜ್ಹೋನಲ್ ಮ್ಯಾಚ್ ಆಡಲು ಅವಕಾಶ ಕಲ್ಪಿಸಲಾಗುವುದು ಎಂದರು.
ಹದಿನಾರು ವರ್ಷದ ಬಾಲಕರ ಅಯ್ಕೆ ಟ್ರಯಲ್ ಏಪ್ರಿಲ್ 7 ರಂದು ಏಕಕಾಲಕ್ಕೆ ತುಮಕೂರು ವಿಭಾಗಕ್ಕೆ ಒಳಪಡುವ ದಾವಣಗೆರೆ, ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬೆಳಗ್ಗೆ 9:30ಕ್ಕೆ ನಡೆಯಲಿದೆ. ಇಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರನ್ನು ಒಟ್ಟು ಗೂಡಿಸಿ, ಆಯಾಯ ಜಿಲ್ಲಾ ತಂಡ ಮಾಡಿ, ಏಪ್ರಿಲ್.13 ರಿಂದ 15 ರವರೆಗೆ ಚಿತ್ರದುರ್ಗದ ಸಿಸಿಸಿ ಟ್ರುಫ್ ಮೈದಾನದಲ್ಲಿ ಅಂತರ ಜಿಲ್ಲಾ ಅಯ್ಕೆ ಟ್ರಯಲ್ ನಡೆಯಲಿದೆ. ಅಂತರ ಜಿಲ್ಲಾ ಆಯ್ಕೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಒಟ್ಟುಗೂಡಿಸಿ ಏಪ್ರಿಲ್ 15 ರಂದು ತುಮಕೂರು ವಿಭಾಗೀಯ ತಂಡವನ್ನು ಘೋಷಣೆ ಮಾಡಲಾಗುವುದು ಎಂದರು.
ಏಪ್ರಿಲ್ 08 ರಂದು ತುಮಕೂರು ಜ್ಹೋನಲ್ 19 ವರ್ಷದೊಳಗಿನ ಕ್ರಿಕೆಟ್ ಆಟಗಾರರ ಆಯ್ಕೆ ಟ್ರಯಲ್ ನಡೆಯಲಿದೆ.ಇಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರ ಜಿಲ್ಲಾ ತಂಡ ರಚಿಸಿ, ಏಪ್ರಿಲ್ 13 ರಿಂದ 15ರವರೆಗೆ ಬಳ್ಳಾರಿಯಲ್ಲಿ ಅಂತರಜಿಲ್ಲಾ ಮ್ಯಾಚ್ ನಡೆಸಲಾಗುವುದು. ಅಂತರ ಜಿಲ್ಲಾ ಟೂರ್ನಿಯಲ್ಲಿ ಒಳ್ಳೆಯ ಪ್ರದರ್ಶನ ನೀಡಿದ ಆಟಗಾರರನ್ನು ಒಟ್ಟುಗೂಡಿಸಿ ಏಪ್ರಿಲ್ 15 ರಂದು ಅಂತಿಮ 19 ವರ್ಷದೊಳಗಿನ ತಂಡವನ್ನು ಘೋಷಿಸಲಾಗುವುದು.ಅಲ್ಲದೆ ಬಾಲಕಿಯರಿಗಾಗಿ ಏಪ್ರಿಲ್.10 ರಂದು 15 ವರ್ಷದೊಳಗಿನ ಮತ್ತು 13 ರಂದು 19 ವರ್ಷದೊಳಗಿನ ಬಾಲಕಿಯರಿಗೆ ದಾವಣಗೆರೆಯ ಎಂಬಿಎ ಟರ್ಪ ನಲ್ಲಿ ಆಯ್ಕೆ ಟ್ರಯಲ್ ನಡೆಯಲಿದೆ ಎಂದು ಕೆಎಸ್ಸಿಎ ಆಡಳಿತ ಮಂಡಳಿ ಸದಸ್ಯ ಸಿ.ಆರ್.ಹರೀಶ್ ತಿಳಿಸಿದರು.
ಆಯ್ಕೆ ಟ್ರಯಲ್ಗೆ ಬರುವ ಪ್ರತಿ ಹಂತದ ಬಾಲಕ, ಬಾಲಕಿಯರು ವಯಸ್ಸಿನ ಧೃಡಿಕರಣಕ್ಕಾಗಿ ಆಧಾರ್,ಹುಟ್ಟಿದ ದಿನಾಕದ ಸರ್ಟಿಫಿಕೇಟ್, ಎರಡು ವರ್ಷಗಳ ಸ್ಟೇಡಿ ಸರ್ಟಿಫಿಕೇಟ್ ತರುವುದು ಕಡ್ಡಾಯ.ಕ್ರಿಕೆಟ್ ಕಿಟ್ ಜೊತೆಗೆ, ಬಿಳಿಯ ಸಮವಸ್ತçದಲ್ಲಿ ಮೈದಾನಕ್ಕೆ ಬರಬೇಕು. ಬೆಂಗಳೂರು ಜ್ಹೋನೆಲ್ ವಿರುದ್ಧ ಒಂದು ಗಟ್ಟಿಯಾದ ತುಮಕೂರು ವಿಭಾಗೀಯ ತಂಡ ಕಟ್ಟುವ ನಿಟ್ಟಿನಲ್ಲಿ ಯುವ ಕ್ರಿಕೆಟ್ ಆಟಗಾರರು ಆಯ್ಕೆ ಟ್ರಯಲ್ನಲ್ಲಿ ಪಾಲ್ಗೊಳ್ಳುವಂತೆ ಸಿ.ಆರ್.ಹರೀಶ್ ಕೋರಿದರು.
ವರದಿ : ಕೆ ಬಿ ಚಂದ್ರಚೂಡ್
