ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿಯ ವಜ್ಜನಕುರಿಕೆ ಗ್ರಾಮ ಪಂಚಾಯತಿಯ ಗ್ರಾಮಗಳಲ್ಲಿನ ಗ್ರಾಮೀಣ ಪ್ರತಿಭೆಗಳಿಂದ ಅದ್ದೂರಿಯಾಗಿ ನಡೆದ ಕ್ರಿಕೆಟ್ ಪಂದ್ಯಗಳು.ಯುವ ಪ್ರತಿಭೆಗಳಿಗೆ ಅವಕಾಶ ಸಿಗುತ್ತದೆ, ಇದು ಗ್ರಾಮೀಣ ಭಾಗದ ಕ್ರಿಕೆಟ್ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ.
ಪಿ. ಎನ್ ಕೃಷ್ಣಮೂರ್ತಿ ರವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಮೇಶ್ ವಿ.ಸಿ ಅವರು ನೆರವೇರಿಸಿದರು ಇವರ ಉಪಸ್ಥಿತಿಯಲ್ಲಿ ಚಾಂಪಿಯನ್ಸ್ ಕ್ರಿಕೆಟ್ ಪಂದ್ಯಗಳು ನೆಡೆದವು. ಎಂ.ಜಿ ಗುಣಿ ಮೈದಾನದಲ್ಲಿ ವಜ್ಜನಕುರಿಕೆಯ ನಿಸರ್ಗ ಕ್ರಿಕೆಟರ್ಸ್ ಆಯೋಜನೆ ಮಾಡಿದ್ದ ಈ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲು ಕ್ರಿಕೆಟ್ ಪಂದ್ಯವಳಿಯನ್ನು ಮಾಡಿದ್ದು. ಪಂದ್ಯಗಳು ಹೆಚ್ಚು ರೋಚಕತೆಯಿಂದ ಕೂಡಿದ್ದು ಎಲ್ಲರ ಗಮನಸೆಳೆದವು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕರು ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪಿ.ಎನ್ ಕೃಷ್ಣಮೂರ್ತಿಯವರು ಕ್ರಿಕೆಟ್ 11 ಆಟಗಾರರ ಎರಡು ತಂಡಗಳ ನಡುವೆ ಆಡುವ ಜನಪ್ರಿಯ ಬ್ಯಾಟ್ ಮತ್ತು ಬಾಲ್ ಆಟವಾಗಿದೆ. ಈ ಟೂರ್ನಿಮೆಂಟಿನಲ್ಲಿ ಭಾಗವಹಿಸಿದ ಯುವಕರು ಎಲ್ಲಾ ಪಂದ್ಯಗಳು ರೋಚಕವಾಗಿದ್ದು ಉತ್ತಮ ಪ್ರದರ್ಶನವನ್ನು ನೀಡಿದವರು ಇದರಿಂದ ಎರಡು ತಂಡಗಳ ನಡುವೆ ಸ್ನೇಹ ಪ್ರೀತಿ ಬಾಂಧವ್ಯ ಬೆಳೆದು ಉತ್ತಮ ಕ್ರೀಡಾ ರೂಪಿಸಿಕೊಳ್ಳುತ್ತಾರೆ ಎಂದರು. ಕ್ರಿಕೆಟ್ ಕೇವಲ ಆಟವಲ್ಲ ಇದು ಸಾವಿರಾರು ಲಕ್ಷಾಂತರ ಅಭಿಮಾನಿಗಳ ಜೀವ ಭಾವನೆಯಾಗಿದೆ ಎಂದು ಕ್ರೀಡಾಪಟುಗಳಿಗೆ ತಿಳಿಸಿದರು. ಪ್ರಥಮ ಬಹುಮಾನವು 10,000 ನಗದು ಆಕರ್ಷಕ ಟ್ರೋಪಿ ಎಂಜಿ ಗುಣಿ ತಂಡ, ದ್ವಿತೀಯ ಬಹುಮಾನ ಬೇಡರ ಅಗ್ರಹಾರ ತಂಡ,
ಮೂರನೇ ಬಹುಮಾನ ವಜ್ಜನ ಕುರಿಕೆ ತಂಡ ಪಡೆದವು.
ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ಮಂಜುನಾಥ್ ವಿ.ಎನ್, ನರಸಿಂಹಯ್ಯ, ಸುರೇಶ್ ವಿ ಹಾಗೂ ಮುಖಂಡರುಗಳಾದ ಹನುಮಂತು ಮೆಡಿಕಲ್ ಸಂಜಯ್ ಎಂ ಜಿ.ಗುಣಿ ಮಂಜಣ್ಣ ರಮೇಶ್ ನರಸಿಂಹರಾಜು ನಾಗಣ್ಣ ರುದ್ರೇಶ್ . ರಂಗಣ್ಣ.ಇನ್ನು ಅನೇಕರು ಉಪಸ್ಥಿತರಿದ್ದರು
ವರದಿ – ನರಸಿಂಹಯ್ಯ ಹೊಸಕೋಟೆ.
