ಬಸವಕಲ್ಯಾಣ : ವರ್ಗರಹಿತವಾಗಿ, ವರ್ಣರಹಿತವಾಗಿ, ಲಿಂಗರಹಿತವಾಗಿ ಸೌಶೀಲ್ಯವಾದ ಬಾಳು ಮನುಕುಲಕ್ಕೆ ಸದಾ ಪ್ರಾಪ್ತವಾಗಬೇಕೆಂಬ ಸದಾಶಯದೊಂದಿಗೆ ಉನ್ನತ ವಿಚಾರಧಾರೆಗಳನ್ನು ಆಡುಭಾಷೆಯಲ್ಲಿ ಸರಳವಾಗಿ, ಜನಸಾಮಾನ್ಯರ ಎದೆಗೆ ನಾಟುವಂತೆ ಕಟ್ಟಿಕೊಟ್ಟಂತಹ ಸಾಹಿತ್ಯ ಪ್ರಕಾರ ಜಾಗತಿಕಾವಾಗಿ ಯಾವುದಾದರೂ ಇದ್ದರೆ ಅದು ಕನ್ನಡದ ವಚನ ಸಾಹಿತ್ಯ ಮಾತ್ರ. ಹನ್ನೆರಡನೇ ಶತಮಾನದಲ್ಲಿ ಕಲ್ಯಾಣ ನಗರದಲ್ಲಿ ನಡೆದ ವಚನ ಚಳವಳಿಯು ಅನೇಕ ಮೊದಲುಗಳನ್ನು ನೀಡಿದೆ. ಸಮ ಸಮಾಜವನ್ನು ಕಟ್ಟಿ ಕೊಟ್ಟಿದ್ದು ಶರಣರ ವಚನ ಸಾಹಿತ್ಯ, ಅಕ್ಕಮಹಾದೇವಿ ಲೋಕದ ಪ್ರಪ್ರಥಮ ಮಹಿಳಾ ಕವಯಿತ್ರಿ. ಮಹಿಳಾ ಸಾಹಿತ್ಯ ಬೆಳೆದು ಬಂದುದ್ದು ಮೊಟ್ಟ ಮೊದಲಿಗೆ ಕಲ್ಯಾಣ ನಾಡಿನಲ್ಲಿ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಅವರು ಅಭಿಪ್ರಾಯಪಟ್ಟರು.
ಅವರು ಬೀದರ ಜಿಲ್ಲೆಯ ಬಸವ ಕಲ್ಯಾಣ ನಗರದ ಪಂಚಾಯತ ರಾಜ್ ಪದವಿ ಮಹಾ ವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಮತ್ತು ಬೀದರ್ ಜಿಲ್ಲಾ ಘಟಕದ ನೂತನದ ಅಧ್ಯಕ್ಷರ ಪದಗ್ರಹಣ ಜಿಲ್ಲಾಮಟ್ಟದ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿ ಶರಣರು ಕಾಯಕ ಸಿದ್ಧಾಂತವನ್ನು ಕಟ್ಟಿಕೊಟ್ಟರು. ಜೊತೆಗೆ ಮಹಿಳೆಯರ ಬಗ್ಗೆ ಅವರಿಗೆ ಸಂವೇದನೆಯಿತ್ತು. ಅಂತಲೇ ಅಂದಿನ ದಿನಗಳಲ್ಲಿಯೇ ಮಹಿಳೆಯರಿಗೆ ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟರು. ವಚನ ಸಾಹಿತ್ಯದಲ್ಲಿ ಆದರ್ಶ ದಾಂಪತ್ಯಕ್ಕೆ ಬಹುದೊಡ್ಡ ಉದಾಹರಣೆ ಇದೆ. ಗಂಗಾಂಬಿಕೆ, ನೀಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮ ಇವರೆಲ್ಲರೂ ಆದರ್ಶವಾಗಿ ಬಾಳಿದರು, ಆಸೆ ಇಲ್ಲದೆ ಜೀವನ ಮಾಡಿದರು ಎಂದರು. ನಿಜಕ್ಕು ಶರಣರ ಮಾರ್ಗದಲ್ಲಿ ನಾವೆಲ್ಕ ನಡೆಯಬೇಕು.ಇಂತಹ ನಾಡಿನಲ್ಲಿ ಇವತ್ತು ಈ ವೇದಿಕೆಯಲ್ಲಿ ಮಹಿಳೆಯರಿಗೆ ಗುರುತಿಸುವ ಕಾರ್ಯ ಆಗುತ್ತಿರುವುದು ಕಾಕತಾಳೀಯ ಎಂದು ನುಡಿದರು.
ಈ ಸಂದರ್ಭದಲ್ಲಿ ಗವಿ ಮಠದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯರಿಗೆ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ಸ್ವಾಗತ. ಹೆಣ್ಣು ಅಬಲೆಯಲ್ಲ ಸಬಲೆ. ಅಮ್ಮ ಎಂದರೆ ಅದೊಂದು ಪದವಲ್ಲ ಅದು ಭಾವನಾತ್ಮಕ ಸಂಬಂಧಕ್ಕೆ ಕಾರಣವಾಗುತ್ತದೆ ಎಂದರು. ಶರಣರು ಕೊಟ್ಟಿರುವ ವಚನಗಳು ನಾವೆಲ್ಲ ನಿತ್ಯ ಅನುಸರಿಸಬೇಕು ಮತ್ತು ಬಾಳಬೇಕು ಇದು ನಿಜವಾದ ನಮ್ಮ ಆದರ್ಶ ಜೀವನಕ್ಕೆ ಸಾಕ್ಷಿಯಾಗಬಹುದು ಎಂದರು. ಸತ್ಯ ಶುದ್ಧ ಕಾಯಕ ಮಾಡಬೇಕು ಎಂದು ತಮ್ಮ ಆಶೀರ್ವಚನ ನುಡಿಗಳಲ್ಲಿ ಹೇಳಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷರಾದ ಕಲ್ಯಾಣರಾವ ಮದರಗಾಂವಕರ್ ಪ್ರಸ್ತಾವಿಕ ಮಾತನಾಡಿದರು, ತಹಸೀಲ್ದಾರ ಶಿವಾನಂದ ಮೇತ್ರೆ, ಸುರೇಖಾ ರಾಜು ಹೊಸಮನಿ, ಸುಮಿತ್ರಾ ದಾವಣಗಾವೆ ಮಹಿಳೆಯರ ಕುರಿತು ಮಾತನಾಡಿದರು. ವೇಧಿಕೆಯಲ್ಲಿ ಹಿರಿಯ ಸಾಹಿತಿ ಡಾ . ಎಂ. ಜಿ. ದೇಶಪಾಂಡೆ, ಶೀತಲ ಎಮ್ ಖೂಬಾ, ಸಾಹಿತಿ ವಿಶ್ವನಾಥ ಮುಕ್ತಾ, ನಿವೃತ್ತದ ಶಿಕ್ಷಕ್ಷರಾದ ಬಸವಣಪ್ಪ ನೆಲೋಗಿ, ಪಾರ್ವತಿ ಮಹಿಳಾ ಮಂಡಳ ಸಂಸ್ಥೆ ಅಧ್ಯಕ್ಷ ಆಶಾರಾಣಿ ಬಾವಿದೋಡ್ಡಿ ಉಪಸ್ಥಿತರಿದ್ದರು.
ಇದೆ ವೇಳೆ ಅಂತರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ವಿವಿಧ ಇಲಾಖೆ ಅಲ್ಲದೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಿಜಯಲಕ್ಷ್ಮಿ ಗುರುನಾಥ ಗಡ್ಡೆ, ರೆಖಾ ರಾಜು ಹೊಸಮನಿ, ಕು. ಆಶಾರಾಣಿ ಸಂಗಶಟ್ಟಿ ಬಾವಿದೋಡ್ಡಿ, ಸರೋಜಾ ಕಾಶಿನಾಥ ಚಂದಾಪುರೆ, ಜ್ಯೋತಿ ಅಲಶೆಟ್ಟಿ, ಜನಾಬಾಯಿ, ಸರಸ್ವತಿ ಕಾಂಬಳೆ, ಭಾರತಬಾಯಿ ಖರ್ಗೆ, ಮನುಸಾ ರೋಳಾ, ಜ್ಯೋತಿ ಧನ್ನೂರೆ, ವೈಜಯಂತ್ತಿ , ಸುಮಿತ್ರಾ ದಾವಣಗಾವೆ, ಅಶ್ವಿನಿ ಶರಣಪ್ಪ, ಆನಂದಾ ಜಮಾದಾರ, ರೇಖಾ ತಾನಾಜಿರಾವ ಕಾಂಬಳೆ, ಮಹಿಳಾ ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು, ಎಂ. ಶ್ರೀಕಾಂತ ನಿರೂಪಿಸಿದರು. ಕವಿತಾ ಮಾಲಿ ಪಾಟೀಲ್ ಒಂದಿಸಿದರು. ಲಕ್ಷ್ಮೀ ಮದರಗಾಂವಕರ್, ಈಶ್ವರ ತಡೋಳಾ ಮುಂತ್ತಾದವರು ಪಾಲ್ಗೋಂಡಿದರು.
