ರಾಮನಾಥಪುರ, ಏ.2: ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಅಸಮಾನತೆಯನ್ನು ತೊಡೆದುಹಾಕಲು ಶ್ರಮಿಸಿದ ಮಹಾನ್ ಶಿವಶರಣೆ ಅಕ್ಕಮಹದೇವಿ ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ನಮನ ಸಲ್ಲಿಸಿದಂತಾಗುತ್ತದೆ ಎಂದು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣ ಎಂ.ಎನ್. ಕುಮಾರಸ್ವಾಮಿ ಹೇಳಿದರು.

ರಾಮನಾಥಪುರ ಹೋಬಳಿಯ ಬಸವಪಟ್ಟಣ ಗ್ರಾಮದ ಅಕ್ಕಮಹದೇವಿ ದೇವಾಲಯದಲ್ಲಿ ಗುರುವಾರ ನಡೆದ ಅಕ್ಕಮಹದೇವಿ ಜಯಂತಿ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ವಚನಗಳ ಪುಸ್ತಕ ವಿತರಿಸಿ ಮಾತನಾಡಿದ ಅವರು, ಅಕ್ಕಮಹದೇವಿ ಎಲ್ಲ ಶಿವಶರಣರಂತೆ ನಿಸ್ವಾರ್ಥ, ಸ್ವಾವಲಂಬಿ ಹಾಗೂ ಶ್ರೀಸಮಾಜದ ನಿರ್ಮಾಣಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿತ್ವ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಲಯದ ಪುರೋಹಿತರಾದ ವೇ. ಸಿ.ಎಂ. ನಾಗರಾಜಶಾಸ್ತ್ರಿ ಪೂಜಾ ಕೈಂಕರ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ಅಕ್ಕನ ಬಳಗದ ಅಧ್ಯಕ್ಷರು ಶರಣೆ ಲೋಕಮಾತಾ ಮಲ್ಲಪ್ಪ, ಕಾರ್ಯದರ್ಶಿ ದ್ರಾಕ್ಷಯಣಿಮಹದೇವ್, ಖಜಾಂಚಿ ಅಂಬಿಕಾವಾಗೀಶ್, ಸದಸ್ಯರಾದ ಪ್ರಭಾವತಿ ನಂಜುಂಡಸ್ವಾಮಿ, ಸ್ಮಿತಾ ಬಾಬು, ಅನೀತಾ ಶ್ರೀಧರ್, ವಾಣಿ ಪ್ರಭು, ಹರ್ಷ ಬಸವಣ್ಣ, ಶುಭ ವಿರೂಪಾಕ್ಷ, ನಂದಿನಿ ಪರಮೇಶ್, ಉಷಾ ಸುಧಾಕರ್, ಲತಾ ಜಯಶಂಕರ್, ರಕ್ಷಿತಾ ಸುಕೇಶ್, ಜ್ಯೋತಿ ನಾಗರಾಜ್, ಶೋಭಾ ನಂದಕುಮಾರ್, ಸುಮನಾ ಅಂಭರೀಶ್, ಆಶಾ ಸತೀಶ್, ಮಾದವಿ ಲೋಕೇಶ್, ರೂಪಾ ದಿನೇಶ್, ಶುಭಾ ರುದ್ರಶೆಟ್ಟಿ, ಶಶಿಕಲಾ ಪ್ರಕಾಶ್, ಪೂರ್ಣಿಮಾ ವೀರೇಶ್, ಶುಭಾ ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ- ಕುಮಾರಸ್ವಾಮಿ ಎಂ.ಎನ್.
