ಹಾಸನ, ಏಪ್ರಿಲ್ 8: ಜೈ ಮಾರುತಿ ಕೃಪಾ ಪೋಷಿತ ನಾಟಕ ಮಂಡಳಿ, ದೊಡ್ಡಮಂಡಿಗನಹಳ್ಳಿ ಕಲಾವಿದರು ಇತ್ತೀಚೆಗೆ ನಗರದ ವಿಜಯನಗರ ಬಡಾವಣೆಯಲ್ಲಿ ಶ್ರೀ ಸಿದ್ಧಲಿಂಗೇಶ್ವರ ಡ್ರಾಮಾ ಸೀನರಿ, ಬಂದೂರು ಅವರ ಭವ್ಯ ರಂಗಸಜ್ಜಿಕೆಯಲ್ಲಿ ‘ಸಂಪೂರ್ಣ ರಾಮಾಯಣ’ ಪೌರಾಣಿಕ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶಿಸಿದರು.
ಈ ನಾಟಕದಲ್ಲಿ ಅಭಿನಯಿಸಿದ ಕಲಾವಿದರನ್ನು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ರಾವಣನ ಪಾತ್ರಧಾರಿ ಜವರೇಗೌಡ ಅವರ ನಿವಾಸದಲ್ಲಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಾಟಕದಲ್ಲಿ ಭಾಗವಹಿಸಿದ ನಟರ ಅಭಿನಯ ಕೌಶಲ್ಯ ಕುರಿತು ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದರು.

ತಂಡದ ನೇತೃತ್ವ ವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದ್ದಲ್ಲದೆ, ನಾಟಕದಲ್ಲಿ ಭರತನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ ಕಲಾವಿದ ಎಂ.ಸಿ. ಶ್ರೀನಿವಾಸ್ (ಡಿ.ಎಂ. ಹಳ್ಳಿ) ಅವರನ್ನು ಸಹ ಕಲಾವಿದರು ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಗೊರೂರು ಅನಂತರಾಜು, ತೇಜೂರು ಸೋಮಣ್ಣ, ಹನುಮೇಗೌಡ (ಬಾರೆ ಹೊಸೂರು), ಜವರೇಗೌಡ, ಸಾಣೇನಹಳ್ಳಿ ಸೋಮಣ್ಣ, ಎಲ್ಐಸಿ ರಂಗಸ್ವಾಮಿ, ಯೋಗೇಶ್, ಶ್ರೀಕಂಠಪ್ಪ, ಆಲೂಗೆಡ್ಡೆ ಶಶಿ, ನಾಗಮೋಹನ್, ಬೆಂಡೆ ಮಂಜಣ್ಣ, ಬ್ಯಾಟಾಚಾರ್, ದೇವರಾಜು, ಅಭಿಷೇಕ್ ರಂಗಸ್ವಾಮಿ, ಶಿವಣ್ಣ, ವೆಂಕಟೇಶ್, ಜೀವನ್, ಪರಮೇಶ್, ಹರ್ಷ, ಮಂಜುನಾಥ್, ಅಭಿಷೇಕ್ ಹಾಗೂ ನಾಟಕ ನಿರ್ದೇಶಕರಾದ ಹೇಮಂತ್ ದೇವರಾಜ್ ಆಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ – ಗೊರೂರು ಅನಂತರಾವ್
