ಕೊರಟಗೆರೆ :- ತಾಲೂಕಿನ ಮಾವತ್ತೂರು ಮತ್ತು ದೊಡ್ಡಸಾಗ್ಗೆರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಯ ಸುಮಾರು 30 ರಿಂದ 40 ಗ್ರಾಮದ ರೈತರುಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕದ ಪರಿಹಾರ ನೀಡಿದ ಡಾ. ಜಿ ಪರಮೇಶ್ವರ್ .
ಸರ್ಕಾರದ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಕೊರಟಗೆರೆ ತಾಲೂಕಿನ ರೈತರಗಳ ಸಮಸ್ಯೆಗಳಾದ ಹೈ ವೋಲ್ಟೇಜ್ ಸಮಸ್ಯೆ ಯಿಂದಾಗಿ ಪಂಪು ಮೋಟಾರ್ ಗಳು ಸುಟ್ಟು ಹೋಗುತ್ತಿದ್ದವುಗಳನ್ನ ಮನಗಂಡು ಸಚಿವ ಡಾ. ಜಿ ಪರಮೇಶ್ವರ್ ಬೆಸ್ಕಾಂ ಮೇಲಾಧಿಕಾರಿಗಳಿಗೆ ಒತ್ತಡ ಏರಿ ಕೂಡಲೇ ಈ ತಾಲೂಕಿನ ಮಾವತ್ತೂರು ಭಾಗಕ್ಕೆ ನೂತನ ವಿದ್ಯುತ್ ಉಪಸ್ಥಾವರ ನಿರ್ಮಾಣ ಮಾಡಿದ್ದಾರೆ.
ಈ ಸ್ಥಾವರದಿಂದ ಸುಮಾರು 30 ರಿಂದ 40 ಹಳ್ಳಿಗಳ ರೈತರುಗಳಿಗೆ ವಿದ್ಯುತ್ ಸಮಸ್ಯೆ ಪರಿಹಾರವಾದಂತಾಗಿದೆ.
ಮಾವತ್ತೂರು ಉಪ ವಿದ್ಯುತ್ ಸ್ಥಾವರದ 7 ವೀಡರ್ ಗಳಿಗೆ ವಿದ್ಯುತ್ ಉಪಸ್ಥಾವರ ಕೇಂದ್ರದಲ್ಲಿ ಚಾರ್ಜ್ ನೀಡಲಾಗಿದೆ ಎಂದು ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ ಮಹಾಲಿಂಗಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ನಂತರ ಅವರು ತಾಲೂಕಿನ ರೈತರಗಳ ಹೊಲ ಗದ್ದೆ ತೋಟ ತಡಿಕೆಗಳು ಒಣಗಿ ಹೋಗುತ್ತಿರುವ ಕಾರಣ ರೈತರು ಕಂಗಲಾಗಿ ಸಾಕಷ್ಟು ಬಾರಿ ಶಾಸಕರಿಗೆ ಮನವಿ ನೀಡಿದ ಹಿನ್ನೆಲೆಯಲ್ಲಿ ಸರ್ಕಾರದ ಹಂತದಲ್ಲಿ ಚರ್ಚಿಸಿ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಉಪಸ್ಥಾವರಗಳನ್ನು ಮುಂದಿನ ದಿನಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳನ್ನಾಗಿ ಲೋಕಾರ್ಪಣೆ ಮಾಡಲಾಗುವುದು. ಸರ್ಕಾರಿ ಕಾರ್ಯಕ್ರಮದ ದಿನಾಂಕ ನಿಗದಿ ಪಡಿಸುವವರೆಗೂ ರೈತರುಗಳು ವೋಲ್ಟೇಜ್ ಸಮಸ್ಯೆಗಳಿಂದಾಗಿ ಬಳಲಬಾರದೆಂದು ಹಾಗೂ ಅಲ್ಲಿಯ ವರೆಗೂ ಕಾಯಬಾರದು ಎಂದು ಈ ಭಾಗದ 7 ವಿದ್ಯುತ್ ವೀಡರ್ ಗಳಿಗೆ ಇಂದು ಜಾರ್ಜ್ ಮಾಡಿಸಿ ಸುಮಾರು 30 ರಿಂದ 40 ಗ್ರಾಮಗಳ ರೈತರುಗಳಿಗೆ ಶಾಶ್ವತ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲಾಗಿದೆ.
ಈಗ ಬೇಸಿಗೆ ಪ್ರಾರಂಭವಾಗಿದ್ದು ಅತೀ ಹೆಚ್ಚು ಅವಶ್ಯಕವಾಗಿ ಜಮೀನುಗಳಿಗೆ ನೀರು ಹಾಯಿಸಲು ವಿದ್ಯುತ್ ಅತೀ ಅವಶ್ಯಕವಾಗಿದೆ ಇನ್ನೂ ಹೆಚ್ಚಿನ ಗ್ರಾಮಗಳ ರೈತರುಗಳಿಗೆ ವಿದ್ಯುತ್ ಸಮರ್ಪಕವಾಗಿ ಪೂರೈಸಲು ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ ಎಂದು ತಿಳಿಸಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಎಲ್ಲರೂ ಡಾ ಜಿ ಪರಮೇಶ್ವರ ರವರಿಗೆ ಸಹಕರಿಸಬೇಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಮಹಾಲಿಂಗಪ್ಪ , ಪ.ಪಂ ಮಾಜಿ ಉಪಾಧ್ಯಕ್ಷ ಕೆ.ವಿ ಮಂಜುನಾಥ್ , ಮುಖಂಡರಾದ ಮಹೇಶ್ , ಗಿರೀಶ್ ರಾವ್ ಉಪಸ್ಥಿತರಿದ್ದರು.
-ಶ್ರೀನಿವಾಸ್ ಕೊರಟಗೆರೆ.
