ಹಾಸನ – ರಾಮ ಮಂದಿರ ಎದರುರಿನ ಮೈದಾನದಲ್ಲಿ ಅಕ್ರಮ ಶೇಡ್ ನಿರ್ಮಾಣವಾಗಿದ್ದು, ಅನೈತಿಕ ಚಟುವಟಿಕೆ ತಾಣವಾಗಿದೆ ಎಂಬ ಸುದ್ದಿಯನ್ನು ಶನಿವಾರ ನಮ್ಮ ವಿಚಾರ-ವಿಸ್ತಾರದಲ್ಲಿ ಮೊದಲು ಪ್ರಕಟಿಸಲಾಗಿತ್ತು.
ಅಲ್ಲದೇ ನಮ್ಮ ಮಾಧ್ಯಮ ಮಿತ್ರರು ಸಹ ಈ ವಿಚಾರವನ್ನು ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಗೊಳ್ಳಲು ಸಹಕರಿಸಿದ್ದರು.
ಈ ಸಂಬಂಧ ಎಚ್ಚೆತ್ತ ಪಿಡಬ್ಲೂಡಿ ಅಧಿಕಾರಿಗಳು, ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಇಂದು ಅಕ್ರಮ ಶೆಡ್ ನ್ನು ತೆರವುಗೊಳಿಸಿದ್ದಾರೆ.
ಸಮಾಜದ ನೈತಿಕತೆ ಮತ್ತು ಸಾಮಾಜಿಕ ಕಳಕಳಿಯನ್ನು ಗಮನದಲ್ಲಿಟ್ಟುಕೊಂಡು, ಪತ್ರಕರ್ತರಾದ ನಾವು ಕೈಗೊಂಡ ಈ ಕಾರ್ಯಕ್ಕೆ ಸಿಕ್ಕ ಫಲಶೃತಿ ಇದಾಗಿದೆ. ಸಾಮಾಜಿಕ ಕಳಕಳಿಯಾ ವಿಚಾರವನ್ನು, ವಿಸ್ತಾರವಾಗಿ, ನಿಮ್ಮ ಮುಂದೆ ತರುವುದು ನಮ್ಮ ಜವಾಬ್ದಾರಿ.
- ಮಾಲಾ ಹಾಸನ

