ಕೊರಟಗೆರೆ:- ರಾಜ್ಯದ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ನಾಯಕರಾದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ತಯಾರಿಸಿದ ಪ್ರನಾಳಿಕೆಯಲ್ಲಿ ಒಳ ಮೀಸಲಾತಿ ಚಾರಿಗೊಳಿಸುತ್ತೇವೆ ಎಂದು ಕೊಟ್ಟ ಮಾತನ್ನ ಉಳಿಸಿಕೊಂಡಿದ್ದಾರೆ ಎಂದು ದಲಿತ ಮುಖಂಡ ವಾಲೆ ಚಂದ್ರಯ್ಯ ರಾಜ್ಯ ಸರ್ಕಾರಕ್ಕೆ ಧನ್ಯವಾದವನ್ನ ತಿಳಿಸಿದರು.
ಪಟ್ಟಣದ ರಾಜೀವ್ ಭವನದಲ್ಲಿ ದಲಿತ ಮುಖಂಡರು ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಬಂದ 78 ವರ್ಷಗಳಾದರು ನಮ್ಮ ಸಮುದಾಯಕ್ಕೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅನ್ಯಾಯಕ್ಕೆ ಒಳಗಾಗುತ್ತಿದ್ದ ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸುವಂತೆ ಅನೇಕ ಹೋರಾಟ ಮಾಡಿಕೊಂಡು ಬರುತ್ತಿದ್ದ ಸಾವಿರಾರು ದಲಿತ ಮುಖಂಡರುಗಳು ಹಾಗೂ ಅನೇಕ ನಮ್ಮ ಜನಾಂಗದ ತ್ಯಾಗ ಬಲಿದಾನವನ್ನ ಅರಿತ ನಮ್ಮ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಸುರೇಶ್, ಸಚಿವರಾದ ಡಾ.ಜಿ.ಪರಮೇಶ್ವರ್, ಮಹದೇವಪ್ಪ, ಮುನಿಯಪ್ಪ, ತಿಮ್ಮಪೂರ್, ಪ್ರಿಯಾಂಕ ಖರ್ಗೆ, ಸೇರಿದಂತೆೆ ಎಲ್ಲಾ ಸಚಿವರ ಒಮ್ಮತದಿಂದ ಕಳೆದ ಸಚಿವ ಸಂಪುಟದಲ್ಲಿ ಒಳ ಮೀಸಲಾತಿಯನ್ನ ಜಾರಿಗೊಳಿಸಿರುವುದು ಸಂತಸ ತಂದಿದೆ ಎಂದರು.
ಪರಿಶಿಷ್ಟ ಜಾತಿಗಳಲ್ಲಿ 101 ಜಾತಿಗಳು ಸೇರಿದ್ದು, ಎಲ್ಲಾ ಜಾತಿ ಜನಾಂಗದ ಹಿತದೃಷ್ಠಿಯಿಂದ ಒಳ ಮೀಸಲಾತಿಯನ್ನ ಜಾರಿಗೊಳಿಸಿದ್ದ, ಅತಿಹೆಚ್ಚು ತುಳಿತಕ್ಕೆ ಒಳಗಾದ ಮಾದಿಗ ಮತ್ತು ಹೊಲೆಯ ಸಮುದಾಯದವರ ಬಹುದಿನದ ಬೇಡಿಕೆಯಾದ ಒಳ ಮೀಸಲಾತಿ ವರ್ಗಿಕರಣಕ್ಕೆ ರಾಜ್ಯ ಸರ್ಕಾರ ಅಂತ್ಯ ಹಾಡಿದ್ದು, ಇದರಿಂದ ಶೋಷಿತ ಸಮುದಾಯಗಳಿಗೆ ಬದುಕು ಕಟ್ಟಿಕೊಡುವಂತೆ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದಗಳನ್ನ ತಿಳಿಸಿದರು.
*ಗೃಹ ಸಚಿವರಿಗೆ ಕಪ್ಪು ಮಸಿ ಬಳಿಯುವ ಹುನ್ನಾರ;-*
ತುಮಕೂರಿನಲ್ಲಿ ನೆಡದ ಕ್ರೀಡಾಕೂಟದಲ್ಲಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ತಮಾಷೆಗಾಗಿ ಡಿಸಿ ಅವರ ಬಳಿ 500 ರೂಪಾಯಿಯನ್ನ ಇಂತಹ ತಂಡ ಗೆಲ್ಲುತ್ತದೆ ಎಂದು ಹೇಳಿದ ಮಾತನ್ನ ನಮ್ಮ ದಲಿತ ಸಮುದಾಯದ ಯುವಕನಾದ ಹಾಂದ್ರಾಳ ನಾಗಭೂಷಣ್ ಅವರ ಮೂಲಕ ಈ ರಾಜ್ಯ ಕಂಡ ಪ್ರಮಾಣಿಕ ರಾಜಕಾರಣಿ, ಸವ್ಯಸಾಚಿ, ಯಾವುದೇ ಕಳಂಕ ಇಲ್ಲದೆ ಸ್ವಚ್ಛ ರಾಜಕಾರಣ ಮಾಡುತ್ತಿರುವ ಗೃಹ ಸಚಿವ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ, ಕೊರಟಗೆರೆ ಜನಪ್ರಿಯ ಶಾಸಕ ಡಾ.ಜಿ.ಪರಮೇಶ್ವರ್ ಅವರು ತುಮಕೂರು ಸೇರಿದಂತೆ ಜಿಲ್ಲೆಯ ಸಮಗೃ ಅಭಿವೃದ್ಧಿ ಮಾಡುತ್ತಿರುವ ನಮ್ಮ ನಾಯಕರನ್ನ ಕುಗ್ಗಿಸುವ ತಯಾರಿ ನಡೆಯುತ್ತಿದೆ ಎಂದರು.
ಇದರ ಜೊತೆಗೆ ಕೆಆರ್ಎಸ್ ಪಕ್ಷದ ಮುಖಂಡರು ತುಮಕೂರಿನ ಗ್ರಂಥಾಲಯ ಸಭಾಂಗಣದಲ್ಲಿ ಜನಸಂಪರ್ಕ ಸಭೆ ಮುಗಿದ ಮೇಲೆ ಬಂದು ಉದ್ದೇಶಪೂರಕವಾಗಿ ಅವರ ಮೇಲೆ ಕೂಗಾಡಿ ಅದನ್ನ ನಮ್ಮ ನಾಯಕರೇ ತಪ್ಪು ಮಾಡಿದ್ದಾರೆ ಎಂದು ಬಿಂಬಿಸಿ ಸೋಶಿಯಲ್ ಮೀಡಿಯಾದಲ್ಲಿ ತೋರಿಸುತ್ತಿರುವುದು ಮತ್ತೆ ಕೆಆರ್ಎಸ್ ಪಕ್ಷ ಮುಖಂಡರು ಗೃಹ ಸಚಿವರು ನೆಡೆಸುವಂತ ಕಾರ್ಯಕ್ರಮದಲ್ಲಿ ಬಂದ ಅಡ್ಡಿಪಡಿಸಲಾಗವುದು ಎಂದು ಹೇಳುತ್ತಿರುವುದು ಸರಿ ಇಲ್ಲ. ರಾಜ್ಯದ ನಮ್ಮ ದಲಿತರ ಗೃಹ ಸಚಿವರ ಪರವಾಗಿ ನಿಲ್ಲುತ್ತೇನೆ ಎಂತ ಹೋರಾಟ ಮಾಡಲು ಸಿದ್ದ ಎಂದು ಏಚ್ಚರಿಕೆ ನೀಡಿದರು.
ಇದೆ ಸಂದರ್ಭದಲ್ಲಿ ಹೊಳವನಹಳ್ಳಿ ಜಯರಾಮ್, ಬಿ ಡಿ ಪುರ ಸುರೇಶ್, ನರಸಿಂಹಮೂರ್ತಿ, ಗೋಪಿ, ಜಯಮ್ಮ ಸೇರಿದಂತೆ ಇತರರು ಇದ್ದರು.
– ಶ್ರೀನಿವಾಸ್ ಕೊರಟಗೆರೆ.
