ತುಮಕೂರು: ಸಿದ್ದಗಂಗಾ ಮಠವನ್ನು ಹನ್ನೇರಡನೇ ಶತಮಾಜದ ಬಸವಾದಿ ಶರಣರ ತತ್ವ, ಆದರ್ಶಗಳಾದ ಅರಿವು ಮತ್ತು ದಾಸೋಹದ ಪ್ರಯೋಗಾಲಯ ವಾಗಿಸಿದವರು ಡಾ.ಶ್ರೀಶಿವಕುಮಾರಸ್ವಾಮಿಜಿಗಳು ಎಂದು ಶ್ರೀಸಿದ್ದಗಂಗಾ ಪದವಿ ಕಾಲೇಜುಗಳ ಸಂಯೋಜಕರಾದ ಡಾ.ಡಿ.ಎನ್.ಯೋಗೀಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಗರದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆ ಹಾಗೂ ಸ್ಪೂರ್ತಿ ಕಾರ್ಯಕ್ರಮದಲ್ಲಿ ಶ್ರೀಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನ ಸಂಸ್ಥಾಪಕರಾದ ಡಾ.ಶ್ರೀಶಿವಕುಮಾರ ಸ್ವಾಮಿಜಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು,ತಮ್ಮ ಜೀವಿತಾವಧಿಯ 111 ವರ್ಷಗಳ ಕಾಲವೂ ಸಮಾಜದ ಏಳಿಗೆಗಾಗಿ ದುಡಿದವರು. ಅನಿರೀಕ್ಷಿತವಾಗಿ ಒದಗಿ ಬಂದ ಸಿದ್ದಗಂಗಾ ಮಠದ ಉತ್ತಾರಾಧಿಕಾರವನ್ನು ಜನ ಸಾಮಾನ್ಯರ ಅಬ್ಯುದಯಕ್ಕೆ ಬಳಸಿದ ಕೀರ್ತಿ ಡಾ.ಶ್ರೀಶಿವಕುಮಾರಸ್ವಾಮಿಜಿಗಳಿಗೆ ಸಲ್ಲುತ್ತದೆ ಎಂದರು.
ಚಲನಚಿತ್ರ, ಕಿರುತೆರೆ ನಟ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಡಾ.ಸಂಗಮೇಶ್ ಉಪಾಸೆ ಮಾತನಾಡಿ,ಬಸವಣ್ಣನವರ ತತ್ವಾದರ್ಶಗಳ ಪರಿಪಾಲನೆಯ ಮೂಲಕ ಸಿದ್ದಗಂಗಾ ಮಠದ ಸಾರ್ಥಕತೆ ಯನ್ನು ಪಡೆದಿದೆ.ಶ್ರೀ ಶಿವಕುಮಾರಸ್ವಾಮೀಜಿಗಳು ಗ್ರಾಮೀಣ ಭಾಗದ ಹೆಣ್ಣುಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಇಷ್ಟು ದೊಡ್ಡ ಸಂಸ್ಥೆಯನ್ನು ಕಟ್ಟಿದ್ದಾರೆ. ಇಲ್ಲಿ ಕಲಿಯುತ್ತಿರುವ ಮಕ್ಕಳು ತಮ್ಮ ತಂದೆ, ತಾಯಿಗಳು, ಹಿರಿಯರನ್ನು ಆದರ್ಶವಾಗಿಟ್ಟುಕೊಂಡು, ಅವರ ಕನಸನ್ನು ನನಸಾಗಿಲು ಶ್ರಮಿಸಬೇಕಿದೆ ಎಂದರು.
ಚಲನಚಿತ್ರ ಹಿನ್ನೆಲೆ ಗಾಯಕ ಚೇತನ್ ನಾಯಕ್ ಮಾತನಾಡಿ, ಸಿದ್ದಗಂಗೆ ಎಂಬ ಪುಣ್ಯ ಕ್ಷೇತ್ರ ಲಕ್ಷಾಂತರ ಜನರು ಬದುಕು ಕಟ್ಟಿಕೊಳ್ಳಲು ಆಶ್ರಯ ನೀಡಿದೆ.ನೀವುಗಳ ಅದರ ಭಾಗವಾಗಿರುವುದು ಸಂತೋಷದ ವಿಚಾರ.ಈ ಮಣ್ಣಿನ ಸ್ವತವನ್ನು ಪಡೆದು, ಸಮಾಜದಲ್ಲಿ ಮೇಲ್ಮುಖವಾಗಿ ಬೆಳೆಯುವಂತೆ ಹರಿಸಿದರು. ಹಲವಾರು ಹಾಡುಗಳ ಮೂಲಕ ಯುವ ಮನಸ್ಸುಗಳನ್ನು ರಂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಎಂ.ದಕ್ಷಿಣ ಮೂರ್ತಿ ಮಾತನಾಡಿ, ಕಳೆದ 10 ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ಸಂಸ್ಥಾಪಕರ ದಿನ ಮತ್ತು ಸ್ಫೂರ್ತಿ ಕಾರ್ಯಕ್ರಮವನ್ನು ಒಟ್ಟಿಗೆ ಆಚರಿಸಿಕೊಂಡು ಬರುತ್ತಿದ್ದೇವೆ.ಒಂದೆಡೆ ಭಕ್ತಿ, ಇನ್ನೊಂದೆಡೆ ಸಂಸ್ಕöÈತಿ ಎರಡನ್ನು ಮೈಳೆಸಿದ ಕಾರ್ಯಕ್ರಮ ಇದಾಗಿದೆ.ಇದುವರೆಗೂ ಸಿದ್ಗಗಂಗಾ ಶ್ರೀಗಳ ಕುರಿತು 6 ಪ್ರಬಂಧಗಳು ಮಂಡನೆಯಾಗಿ ಪಿಹೆಚ್ಡಿ ಪದವಿ ಲಭ್ಯವಾಗಿವೆ.ಇನ್ನೂ ಸಾವಿರಾರು ಪ್ರಬಂಧಗಳನ್ನು ಮಂಡಿಸುವಷ್ಟು ಅಕರ ನಮ್ಮ ಶ್ರೀಶಿವಕುಮಾರ ಸ್ವಾಮೀಜಿಗಳು.ಏಪ್ರಿಲ್ 29 ರಂದು ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ಸ್ಪರ್ಧೆಗಳಲ್ಲಿ ಕಾಲೇಜಿನ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸುವಂತೆ ಸಲಹೆ ನೀಡಿದರು.
ಡಾ.ಜಗದೀಶ್.ಎಂ. ರವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಪಾವನ.ಬಿ.ಎಸ್.ಕಾರ್ಯಕ್ರಮ ನಿರೂಪಿಸಿದರು.ವೇದಿಕೆಯಲ್ಲಿ ಶ್ರೀಮತಿ ಶೀಲಾ.ಕೆ.ಪಿ, ಶ್ರೀಮತಿ ಅಮೂಲ್ಯ.ಜೆ. ಯೋಗೀಶ್, ಹೇಮ.ಬಿ.ಸಿ ಅವರುಗಳು ಉಪಸ್ಥಿತರಿದ್ದರು
ವರದಿ : ಕೆ ಬಿ ಚಂದ್ರಚೂಡ್
