ಕೆ.ಆರ್.ಪೇಟೆ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಆಡಳಿತ ಮಂಡಳಿಯ 15ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಸಿ.ಕೆ.ಶಿವರಾಮೇಗೌಡರ ಬಣದ 9ಮಂದಿ ಪ್ರಚಂಡ ಗೆಲುವು ಸಾಧಿಸಿದ್ದಾರೆ.
ಸಂಘದ ಒಟ್ಟು 15 ನಿರ್ದೇಶಕರ ಸ್ಥಾನಗಳ ಪೈಕಿ 5ಮಹಿಳಾ ಸ್ಥಾನಗಳಲ್ಲಿ 4ಸ್ಥಾನಗಳು ಹಾಗೂ ಪುರುಷರ 10ಸ್ಥಾನಗಳಲ್ಲಿ 5ಸ್ಥಾನಗಳು ಸೇರಿ ಬರೋಬ್ಬರಿ 9ಸ್ಥಾನಗಳಲ್ಲಿ ಸಿ.ಕೆ.ಶಿವರಾಮೇಗೌಡ ಮತ್ತು ಎಸ್.ಆರ್.ಆನಂದಕುಮಾರ್, ಡಿ.ರಮೇಶ್ ನೇತೃತ್ವದ ಜಯಬೇರಿ ಬಾರಿಸಿದ್ದಾರೆ. ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಪದ್ಮೇಶ್ ತಂಡದಿಂದ ಓರ್ವ ಮಹಿಳಾ ಅಭ್ಯರ್ಥಿ ಸೇರಿ 6ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಸಿ.ಕೆ.ಶಿವರಾಮೇಗೌಡ ನಾಯಕತ್ವದ ತಂಡದಿಂದ ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿವರ: ಎಸ್.ಆರ್.ಆನಂದ್ಕುಮಾರ್, ಎಸ್.ಕೆ.ರವಿಕುಮಾರ್, ಸಿ.ಕೆ.ಶಿವರಾಮೇಗೌಡ, ಕೆ.ಕೆ.ಶಿವಲಿಂಗೇಗೌಡ, ಜಿ.ಕೆ.ಯೋಗೇಶ್, ಎಂ.ಎಸ್.ಮೋಹನಕುಮಾರಿ, ಕೆ.ಆರ್.ಅನಿತಾರಮೇಶ್, ಎಂ.ಪಿ.ಕುಮಾರಿಶ್ರೀಧರ್, ಎನ್.ಅನಿತಾ, ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪದ್ಮೇಶ್ ತಂಡದ ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿವರ: ಎಲ್.ಎಸ್.ಧರ್ಮಪ್ಪ, ಸಿ.ಎಸ್.ಅಶೋಕ್, ಜಿ.ಎಸ್.ಮಂಜು, ಪದ್ಮೇಶ್, ಹೆಚ್.ಆರ್.ಪೂರ್ಣಚಂದ್ರತೇಜಸ್ವಿ, ಹಾಗೂ ಎ.ಬಿ.ಇಂದ್ರಾಣಿ ಗೆಲುವು ಸಾಧಿಸಿದ್ದಾರೆ.
ತಮ್ಮ ತಂಡವು ಅಭೂತಪೂರ್ವ ಜಯ ಸಾಧಿಸಿದ ವೇಳೆ ಮಾತನಾಡಿದ ಸಿ.ಕೆ.ಶಿವರಾಮೇಗೌಡ ಅವರು ಶಿಕ್ಷಕರ ಸಂಘದ ಚುನಾವಣೆಯು ಸೌಹಾರ್ಧಯುತವಾಗಿ ಮುಗಿದಿದೆ. ಮುಂದಿನ ದಿನಗಳಲ್ಲಿ ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೆ ಸ್ಪಂಧಿಸುವುದು ನಮ್ಮ ತಂಡದ ಜವಾಬ್ದಾರಿಯಾಗಿದೆ. ಶಿಕ್ಷಕರ ಯಾವುದೇ ಬೇಡಿಕೆ ಇರಲಿ ಅದರ ಬಗ್ಗೆ ಗಮನ ಹರಿಸುವ ಮೂಲಕ ಶಿಕ್ಷಕರ ಜೊತೆ ಸದಾ ಇದ್ದು ಅವರ ಕಷ್ಟ ಸುಖಗಳಿಗೆ ಸಮಾನವಾಗಿ ಭಾಗಿಯಾಗಿ ನಮ್ಮ ತಂಡಕ್ಕೆ ಮತ ನೀಡಿ ಅಧಿಕಾರ ನೀಡಿರುವ ತಾಲ್ಲೂಕಿನ ಎಲ್ಲಾ 750 ಮಂದಿ ಶಿಕ್ಷಕ ಬಂಧುಗಳಿಗೆ ನಮ್ಮ ತಂಡವು ಯಾವಾಗಲೂ ಚಿರಋಣಿಯಾಗಿರುತ್ತದೆ.
ನಮ್ಮ ತಂಡದಲ್ಲಿ ಸೋತಿರುವ 6ಮಂದಿ ನಮ್ಮ ಸಹಪಾಠಿಗಳಿಗೆ ಮುಂದೆ ನಡೆಯುವ ವಿವಿಧ ಚುನಾವಣೆಯಗಳಲ್ಲಿ ಅವಕಾಶ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಮ್ಮ ವಿರೋಧಿ ತಂಡದಲ್ಲಿ ಜಯಗಳಿಸಿರುವ 6ಮಂದಿ ಸದಸ್ಯರೂ ಸೇರಿದಂತೆ ಎಲ್ಲಾ 15ಮಂದಿ ನೂತನ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಿಕ್ಷಕರ ಸಂಘದ ಅಭಿವೃದ್ಧಿ ಪ್ರಾಮಾಣಿಕವಾಗಿ ಕೆಲಸ ಸ್ಪಂಧಿಸುವುದಾಗಿ ಸಿ.ಕೆ.ಶಿವರಾಮೇಗೌಡ ಭರವಸೆ ನೀಡಿದರು.
– ಶ್ರೀನಿವಾಸ್ ಆರ್.
