ಕೆ.ಆರ್.ಪೇಟೆ:ತಾಲ್ಲೂಕಿನ ಬಂಡಬೋವಿನಹಳ್ಳಿ ಗ್ರಾಮದ ಬಳಿ ಇರುವ ತೆರೆದ ಬಾವಿಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಮೃತ ಯುವಕ ಕೆ.ಆರ್.ಪೇಟೆ ತಾಲ್ಲೂಕು ಬೂಕನಕೆರೆ ಗ್ರಾಮದ ನಿವಾಸಿ ಹಾಗೂ ಜಿಮ್ ಮಾಸ್ಟರ್ ಆಗಿದ್ದ ಚಂದನ್(24) ಎಂದು ಗುರುತಿಸಲಾಗಿದೆ.ಚಂದನ್ ಅವರು ತಮ್ಮ ಸ್ನೇಹಿತರೊಂದಿಗೆ ಮಧ್ಯಾಹ್ನದ ವೇಳೆ ಬಂಡಬೋವಿನಹಳ್ಳಿ ಬಳಿ ಇರುವ ಬಸ್ ಶಂಕರೇಗೌಡರ ತೆರೆದ ಬಾವಿಗೆ ಈಜಲು ತೆರಳಿದ್ದರು.ಈಜುತ್ತಿದ್ದ ವೇಳೆ ಆಯತಪ್ಪಿ ಚಂದನ್ ಬಾವಿಯ ನೀರಿನಲ್ಲಿ ಮುಳುಗಿ ಮೃತಪಟ್ಟ ಜಾರಿ ಬಿದ್ದಿದ್ದಾರೆ ಹಿನ್ನೆಲೆ ಬಾವಿಯಲ್ಲೇ ಮುಳುಗಿ ಮೃತಪಟ್ಟಿದ್ದಾರೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಕೆ.ಆರ್.ಪೇಟೆ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು 3 ಗಂಟೆಗಳ ಕಾಲ ಬಾವಿಯೊಳಗೆ ಇಳಿದು ಶೋಧ ಕಾರ್ಯ ನಡೆಸಿದರು. ಕೊನೆಗೂ ಅಗ್ನಿಶಾಮಕ ಸಿಬ್ಬಂದಿಗಳ ತೀವ್ರ ಕಾರ್ಯಾಚರಣೆಯಿಂದ ಮೃತದೇಹವನ್ನು ಹೊರಕ್ಕೆ ತೆಗೆಯಲಾಯಿತು.ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಶಾಸಕ ಹೆಚ್.ಟಿ.ಮಂಜು, ಹಾಗೂ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ರೈತ ಮೋರ್ಚಾ ಅಧ್ಯಕ್ಷ ಹುಲ್ಲೇಗೌಡ ಬೇಟಿ ನೀಡಿ ಬಾವಿಯಿಂದ ನೀರನ್ನು ಹೊರಗೆ ಪಂಪ್ ಮಾಡಿ ನಂತರ ಶವವನ್ನು ಮೇಲೆತ್ತಿಸಿ ವಾರಸುದಾರರಿಗೆ ಹಸ್ತಾಂತರ ಮಾಡಿ ಮೃತ ಚಂದನ್ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಸಾವಿರಾರು ಮಂದಿ ಸಾರ್ವಜನಿಕರು ಸಾಗರೋಪಾದಿಯಲ್ಲಿ ಸ್ಥಳದಲ್ಲಿ ಭಾಗವಹಿಸಿ, ಜಿಮ್ ಮಾಸ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಚಂದನ್ ಅವರ ಅಕಾಲಿಕ ಸಾವಿಗೆ ದುಃಖ ವ್ಯಕ್ತ ಪಡಿಸಿದರು.
