ತುಮಕೂರು : ನಗರದ ಅಮಾನಿಕೆರೆ ಪಾರ್ಕ್ ಆವರಣದಲ್ಲಿ ಸ್ವಾತಂತ್ರ್ಯ ಭಾರತದ ರಾಷ್ಟ್ರಗೀತೆಯ ಜನಕ ರವೀಂದ್ರನಾಥ ಠಾಗೂರ್ ರವರ ಜನ್ಮದಿನಾಚರಣೆ ಹಾಗೂ ಸಮಾನತೆಯ ಬುನಾದಿ ಹಾಕಿಕೊಟ್ಟಂತಹ ಶಾಹು ಮಹರಾಜ್ ರವರ ಪುಣ್ಯಸ್ಮರಣೆ ಕಾರ್ಯಕ್ರಮಗಳನ್ನು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಇಂದು ಆಚರಿಸಲಾಯಿತು.
ಇಬ್ಬರು ಮಹಾನಾಯಕರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಜಿಲ್ಲಾಧ್ಯಕ್ಷರಾದ ಎನ್.ಕೆ. ನಿಧಿಕುಮಾರ್ ಮಾತನಾಡುತ್ತಾ ನಮ್ಮ ಭಾರತ ದೇಶದ ಸಂಸ್ಕೃತಿ, ಕಲೆ, ಸಾಹಿತ್ಯ, ನದಿಗಳು, ಧರ್ಮಗಳನ್ನು ಒಗ್ಗೂಡಿಸಿ ನಾವೆಲ್ಲರೂ ಒಂದೇ ಭಾರತದ ಪ್ರಜೆಗಳು ಎಂಬ ಸಂದೇಶವನ್ನು ತೋರುವ ಗೀತೆಯನ್ನು ರಚಿಸಿದಂತಹ ಮಹಾನ್ ನಾಯಕ ರವೀಂದ್ರನಾಥ ಠಾಗೂರ್ ರವರು ಅವರ ಜನ್ಮದಿನಾಚರಣೆಯನ್ನು ನಾವು ಇಂದು ಆಚರಿಸುತ್ತಿದ್ದೇವೆ, ಇಂದು ಅವರು ನಮ್ಮೊಟ್ಟಿಗೆ ಇಲ್ಲ ಆದರೆ ಅವರು ರಚಿಸಿರುವ ರಾಷ್ಟ್ರಗೀತೆಗೆ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸಹ ಎದ್ದುನಿಂತು ಗೌರವ ಸೂಚಿಸುವಂತಹ ಕಾರ್ಯವನ್ನು ಮಾಡಿರುವ ಮೇರು ನಾಯಕನೆಂದರೆ ತಪ್ಪಾಗಲಾರದು ಎಂದು ತಿಳಿಸಿದರು.
ತುಮಕೂರು ಜಿಲ್ಲಾ ಅಟ್ರಾಸಿಟಿ ಕಮಿಟಿ ಸದಸ್ಯರಾದ ಗೋವಿಂದರಾಜು ಕೆ ಮಾತನಾಡುತ್ತಾ ಶಾಹು ಮಹರಾಜ್ ರವರ ಸ್ಮೃತಿದಿನದ ಅಂಗವಾಗಿ, ಸಮಾನತೆ, ಭ್ರಾತೃತ್ವ ಮತ್ತು ಪ್ರಬೋಧನೆಯ ಅವರ ಚಿಂತನೆಗಳನ್ನು ಮುಂದುವರಿಸುವ ಸಂಕಲ್ಪ ಮಾಡೋಣ. ಅನ್ಯಾಯ, ಅಸಮಾನತೆ ಮತ್ತು ಭೇದಭಾವಗಳ ವಿರುದ್ಧ ಹೋರಾಡುವ ಪ್ರೇರಣೆ ಅವರಿಂದ ಸದಾಕಾಲ ದೊರೆಯುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎನ್.ರವಿಕುಮಾರ್, ಲಕ್ಷ್ಮೀನಾರಾಯಣ.ಎಸ್, ಇಲಾಸ್ ಅಹಮ್ಮದ್, ರಂಗಸ್ವಾಮಯಕ್ಕೆ ಕೆ.ಎಸ್, ಗಂಗಾಧರ್ ಜಿ.ಆರ್, ಮೋಯಿನ್ ಅಹಮ್ಮದ್, ಹನುಮನರಸಯ್ಯ, ಮಾರ್ಕೆಟ್ ಮಣ್ಣಪ್ಪ, ತ್ಯಾಗರಾಜು, ಶಿವರಾಜ್, ಕಿರಣ್ ವೈ.ಎಸ್, ದಿಬ್ಬೂರು ಶ್ರೀನಿವಾಸ್, ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ
