ರಾಮನಾಥಪುರ – ಇಲ್ಲಿಯ ಕಾವೇರಿ ನದಿಯಲ್ಲಿ ಗ್ರಾಮೀಣ ಭಾಗದಿಂದ ಬರುವ ಭಕ್ತರು ನದಿಯಲ್ಲಿ ದೇವರ ತಂದು ಇಲ್ಲಿ ದೇವರ ಪೂಜೆಗೆ ತರುವ ಮಾವಿನಸೊಪ್ಪು, ಬಾಳೆಕಂದು, ಹೂವು, ಬಟ್ಟೆ ಮತ್ತಿತರ ತ್ಯಾಜ್ಯಗಳನ್ನು ಪೂಜೆಯ ನಂತರ ನದಿಯಲ್ಲಿಯೇ ಬಿಡುವ ವಾಡಿಕೆಯಾಗಿದೆ. ಇನ್ನೂ ಮುಂದೆಯಾದರೂ ದೇವರ ಪೂಜೆಗೆ ತರುವ ತ್ಯಾಜ್ಯಗಳನ್ನು ನದಿಯ ದಂಡೆಯಲ್ಲಿರುವ ತೊಟ್ಟಿಗೆ ಹಾಕುವಂತೆ ಕಾವೇರಿ ನದಿ ಸ್ವಚ್ಚತಾ ಅಂದೋಲನ ಸಮಿತಿ ತಾಲ್ಲೂಕು ಅಧ್ಯಕ್ಷರು ಸಿದ್ದರಾಜು ಮನವಿ ಮಾಡಿದ್ದಾರೆ.

ರಾಮನಾಥಪುರದ ಕಾವೇರಿ ನದಿ ಸ್ವಚ್ಚತಾ ನಂತರ ಮಾತನಾಡಿದ ಅವರು ಕಾವೇರಿ ನದಿಯಲ್ಲಿ ಹಾಕುತ್ತಿರುವ ತ್ಯಾಜ್ಯಗಳನ್ನು 151 ತಿಂಗಳ ಹುಣ್ಣಿಮೆ ದಿವಸ ಹಾಗೂ ಇತರೆ ದಿವಸಗಳಲ್ಲಿ ಸ್ಚಚ್ಚತೆ ಮಾಡಿಕೊಂಡು ಬರುತ್ತಿದ್ದೇವೆ. ಅದರೂ ಸಹ ಇಲ್ಲಿಗೆ ಬರುವ ಭಕ್ತರು ನದಿಯಲ್ಲಿ ತ್ಯಾಜ್ಯಗಳನ್ನು ಹಾಕಿ ಮಲೀನ ಮಾಡಿಹೋಗುತ್ತಿದ್ದಾರೆ ಎಂದರು.
ಅಲ್ಲದೇ ಇಲ್ಲಿಯ ದಂಡೆಯಲ್ಲಿರುವ ಅಶ್ವತ್ ಕಟ್ಟೆಯಲ್ಲಿರುವ ನಾಗರ ಕಲ್ಲುವಿಗೆ ಇಲ್ಲಿಗೆ ಬರುವ ಭಕ್ತರು ಹಾಲು, ಮೊಸರು, ತುಪ್ಪ, ಬೆಣ್ಣೆ, ಉಪ್ಪು ತಂದು ಹಾಕಿತ್ತಿದ್ದು ಇದರಿಂದ ಇಲ್ಲಿಯ ಅಶ್ವತ್ ಕಟ್ಟೆ ನಾರುತ್ತಿದೆ. ಇದರಿಂದ ಇಲ್ಲಿಗೆ ಬರುವ ಭಕ್ತರು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡಬೇಕಾಗಿದೆ.
ರಾಮನಾಥಪುರದ ಕಾವೇರಿ ನದಿ ಆಶ್ವತ್ ಕಟ್ಟೆ ಗೋಗರ್ಭ ಕುಮಾರಧಾರ, ಹತ್ತಿರ ಮುಂತಾದ ಕಡೆಗಳಲ್ಲಿ ಊಟದ ಎಲೆ ಮತ್ತು ಇನ್ನಿತರ ತ್ಯಾಜ್ಯ ವಸ್ತುಗಳನ್ನು ನದಿಯ ದಂಡೆಯಲ್ಲಿ ಹಾಕುತ್ತಿದ್ದಾರೆ. ಗ್ರಾಮೀಣ ಪ್ರದೇಶದಿಂದ ದೇವರು ತಂದವರು ಭಕ್ತರು ಬಾಳೆಕಂದು ಮಾವಿನ ಸೊಪ್ಪು, ಬಟ್ಟೆ ಮುಂತಾದ ತ್ಯಾಜ್ಯಗಳನ್ನು ನದಿಯಲ್ಲಿ ಬಿಸಾಕಿರುವುದನ್ನು ಕಾವೇರಿ ನದಿ ಸ್ವಚ್ಚತಾ ಅಂದೋಲನ ಸಮಿತಿ ಅಧ್ಯಕ್ಷರು ಸಿದ್ದರಾಜು ದೂರಿದರು. ಈ ಸಂದರ್ಭದಲ್ಲಿ ಕಾವೇರಿ ನದಿ ಸ್ವಚ್ವತಾ ಅಂದೋಲನ ಸಮಿತಿ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ, ಕಾರ್ಯದರ್ಶಿ ಕಾಳಬೋಯಿ, ಖಜಾಂಚಿ ರಘು, ಸಂಘಟನಾ ಕಾರ್ಯದರ್ಶಿ ಪಿ.ಎನ್.ಟಿ. ಶಿವಪ್ಪ, ತಾಲ್ಲೂಕು ಖಜಾಂಚಿ ಕೇಶವ ಮುಂತಾದವರು ಸ್ವಚ್ಚತೆ ಮಾಡಿದರು.
ವರದಿ : ಕುಮಾರಸ್ವಾಮಿ ಎಂ, ಎನ್ ರಾಮನಾಥಪುರ
