“Yes, we have a soul, but it is made by lots of tiny robots”.
Giulio Giorello (1997)
ತಂತ್ರದ ಮೂಲ ತತ್ವ ‘ತನ್’, ತನು ಅಥವಾ ಆತ್ಮ (Soul). ‘ತ್ರ’ ಅಂದರೆ ‘ಹಿಗ್ಗು’ ಅಥವಾ expand. ಮಾನವ ತನ್ನ ಆತ್ಮ ಚೌಕಟ್ಟಿನೊಳಗೇ ಇರದೆ ಬಂಧನ ಸಂಕೋಲೆಗಳಿಂದ ಹೊರ ಬಂದು ಮುಕ್ತಿ ಪಡೆಯುವ ಕ್ರಿಯೆಯನ್ನು ‘ತಂತ್ರ’ ಎಂದು ಕರೆಯುತ್ತಾರೆ.
ತಂತ್ರ ಸಿದ್ಧಾಂತದ ಅಡಿ ಮಾನವನ ಸೃಷ್ಟಿಯ ವಿವರಣೆ ಹೀಗಿದೆ..
“The designers design, designed to bring distinctive differences in the cosmic time and space”
ವಿನ್ಯಾಸಕಾರನಾದ ಸೃಷ್ಟಿಕರ್ತನು, ಕಾಲ ಮತ್ತು ಭೈರವರ ಜೊತೆಯಲ್ಲಿ ವಿಶಿಷ್ಟವಾದ ವೆತ್ಯಾಸವನ್ನು ಭೂ ಲೋಕದಲ್ಲಿ ತರಲು “ಮಾನವ” ಎಂಬ ಜೀವಿಯನ್ನು ರಚಿಸಿದ್ದಾನೆ. ಮಾನವ ಸಂಚಲನ ಮತ್ತು ಕ್ರಿಯಾಶೀಲ (Dynamic) ಜೀವಿ. ಎಂದೂ ನಿಲ್ಲುವನಲ್ಲ. ಅವನ ವಿನ್ಯಾಸದ ಹುಟ್ಟು ಪರಿವರ್ತಿಸಲು ಮತ್ತು ಪರಿವರ್ತನೆ ಆಗಲು. ಈ ತಾಂತ್ರಿಕತೆಯಿಂದ ಬದಲಾದ ಲಾಭ ಸಮಸ್ತ ಜೀವಿಗಳಿಗೆ ಅನುಕೂಲವಾಗಲಿ ಎಂಬುದೇ ವಿನ್ಯಾಸಕಾರನ ಗುರಿ. ಈ ಅನುಕೂಲಕ್ಕಾಗಿ ಮಾನವನಿಗೆ ಬೇಕಾದ ಉಪಕರಣಗಳನ್ನು ಸೃಷ್ಟಿಕರ್ತ ಬಳುವಳಿಯಾಗಿ ಕೊಟ್ಟು ಕಳಿಸಿದ್ದಾನೆ. ಇವುಗಳೇ ಮನಸ್ಸು, ಮಾತು, ಕೈ ಮತ್ತು ಕಾಲು. ಊಹಿಸಿ, ಈ ಎಲ್ಲ ಸಲಕರಣೆಗಳನ್ನು ಪ್ರಾಣಿಗಳಿಗೆ ನೀಡಿದ್ದರೆ? ನಮ್ಮನ್ನು ಬಿಡುತ್ತಿದ್ದವೇ? ಈ ಕಾರಣದಿಂದ ಅದಿ ಶಂಕರಾಚಾರ್ಯರು ಮಾನವನನ್ನು ಕುರಿತು “I am Supreme (ಅಹಂ ಬ್ರಹ್ಮಾಸ್ಮಿ)” ಎಂದಿದ್ದರು.
“ತಂತ್ರ” ಮಾನವನ ಭೌತಿಕ ಗುಣಮಟ್ಟಗಳನ್ನು ವೃದ್ಧಿಸುವ ಶಾಸ್ತ್ರ. ತಂತ್ರ ಜ್ಞಾನದ ಮುನ್ನುಡಿ ಗಣಿತ ಶಾಸ್ತ್ರ. ಗಣಿತ ಶಾಸ್ತ್ರ ಅಡಿ ಬರುವ ಅಂಕ ಮತ್ತು ರೇಖಾ ಗಣಿತಗಳು ಇಲ್ಲದೆ ಗಣಿತ ಪೂರ್ಣ ಆಗುವುದಿಲ್ಲ. ತಂತ್ರ ಸಿದ್ಧಾಂತದ ಚಿನ್ಹೆಗಳು, ಸಂಕೇತಗಳು ಹಾಗು ಲೋಗೊಗಳು ಸಮರೂಪತೆ ಅಥವಾ ಪ್ರಮಾಣ ಬದ್ಧತೆಯಲ್ಲಿ ವಿನ್ಯಾಸ ಮಾಡಲಾಗಿದೆ. ಇದೇ ತರಹ ಮಾನವನು ಸಹ ವಿನ್ಯಾಸಗೊಂಡಿದ್ದಾನೆ. “ತಂತ್ರ”ದ ಸಮೀಕರಣ, “ಯಂತ್ರ” ಮತ್ತು “ಮಂತ್ರ” ಗಳಿಂದ ಆಗಿದೆ. ಕೈಗಾರಿಕೆಯಲ್ಲಿ ಕಂಡುಬರುವ ಯಂತ್ರ ಒಂದು ನಿರ್ದಿಷ್ಟವಾದ ಕೆಲಸಕ್ಕೆ ಬಳಸುವಂತಾದ್ದು. ಅದರೆ ತಂತ್ರದಲ್ಲಿ ಬಳಸುವ ಯಂತ್ರವೇ ಬೇರೆ. ತಾಮ್ರ ಹಾಳೆಯ ಮೇಲೆ ಸಾಂಕೇತಿಕವಾಗಿ ಗೋಳಾಕಾರ ರೇಖೆಯ ಒಳಗೆ ತ್ರಿಕೋನ, ಚೌಕ, ಆಯಾಕಾ ಮತ್ತು ಸಂಖ್ಯೆಗಳ ಸಂಕೀರ್ಣವನ್ನು ಮುದ್ರಿಸಿ ಶ್ರೀ ಲಕ್ಷ್ಮಿ ಚಕ್ರ, ಸುಬ್ರಹ್ಮಣ್ಯ ಚಕ್ರ, ಕಾಲ ಭೈರವ ಚಕ್ರ, ಇತ್ಯಾದಿ ಎಂದು ಪೂಜಿಸುತ್ತಾರೆ. ಪೂಜೆಗೆ ಒಳಗಾದವನ ಬಲ ವೃದ್ಧಿಸಲೊ, ಚೈತನ್ಯ ನಿಡಲೊ, ವಶೀಕರಣ ಮಾಡಲೊ ಜನರು ಯಂತ್ರವನ್ನು ಪೂಜಿಸುತ್ತಾರೆ ಮತ್ತು ಕೆಲವರು ಇವರಿಂದ ಮೋಸ ಹೋಗುತ್ತಾರೆ. ಇರಲಿ ಅವರವರ ನಂಬಿಕೆಗಳು ಮತ್ತು ಅವರವರ ಭಾವನೆಗಳು.
ಮೂಲ ತಂತ್ರ ವಿಚಾರದಲ್ಲಿ ಎರಡು ಪಥಗಳಿವೆ. ಮೊದಲನೆಯದು “ವಾಮಾಚಾರ (Black Magic)”, ಶಕ್ತಿ ಲಭಿಸಲು, ಮಾಟಮಂತ್ರ, ವಶೀಕರಣದಂತ ಆರಾಧನೆಗಳು. ಬೀಜಾಕ್ಷರಗಳಿಂದ ರಚಿಸಿಲಾದ ಮಂತ್ರೋಚ್ಚಾರಣೆ ಮಾಡಿ, ತಯಾರು ಮಾಡಿದ ಯಂತ್ರ ಅಥವ ಚಕ್ರವನ್ನು ಪ್ರತಿಷ್ಠಾಪಿಸಿ, ನಂತರ ಪೂಜಿಸಿದ ಮೇಲೆ ಮೂಲಾಧಾರ (pelvis) ಚಕ್ರವು ಬಲಗೊಂಡು ಸಹಸ್ರಧಾರ (brain) ಚಕ್ರಕ್ಕೆ ಅಸಾಧಾರಣ ಶಕ್ತಿಯನ್ನು ನೀಡುತ್ತೆ ಎಂಬುದು ತಾಂತ್ರ ಶಾಸ್ತ್ರದಲ್ಲಿ ಹೇಳಲಾಗಿದೆ.
ಎರಡನೆಯದು “ಸಂಸಾರ, ತಂತ್ರ ಯೋಗ ಮತ್ತು ತಂತ್ರಜ್ಞಾನ”. ಇವುಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆಯನ್ನು ನೀಡುವ ಪ್ರಯತ್ನ ನನ್ನದು. ತಂತ್ರ ಸಿದ್ಧಾಂತದ ಸಂಸಾರ ಪ್ರೀತಿಯ ಸಂಕೇತ. ಕಾಮಕ್ಕೆ ಇಲ್ಲಿ ಆಸ್ಪದ ನೀಡುವುದಿಲ್ಲ. ತಂತ್ರ ವಿಚಾರದಲ್ಲಿ”ಮಿಥುನ” ಗಂಡು ಮತ್ತು ಹೆಣ್ಣಿನ ನಡುವಿನ ಸುಖಾನುಭವದ ಸಂಬಂಧ. ನೈಸರ್ಗಿಕವಾದ ಸಂಸಾರ ಕ್ರಿಯಾಶೀಲ ಜೀವಿಯ ಹುಟ್ಟಿಗೆ ಕಾರಣ. ಇದರಿಂದ ಕುಲ ವರ್ಧನೆ. ಕುಲ ನಿಂತರೆ ಪ್ರಪಂಚವೇ ಸ್ಥಬ್ದ. ಆಗ ಯಾರನ್ನೂ ಯಾರೂ ಅರಿಯಲು ಸಾಧ್ಯವಾಗುವುದಿಲ್ಲ. ಆದುದರಿಂದ ಸಾಂಕೇತಿಕವಾಗಿ ಮಿಲನದ ಕ್ರಿಯೆಗೆ ಹಿಂದೂ ತಂತ್ರ ವಿಜ್ಞಾನದಲ್ಲಿ ದೈವತ್ವವನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ನಾನು Monk Saraha ರ ಅಭಿಪ್ರಾಯವನ್ನು ತಿಳಿಸುತ್ತೇನೆ. ಬೌದ್ಧ ಧರ್ಮದಲ್ಲಿ ಬುದ್ಧರ ನಂತರ ಅತಿ ಯಶಸ್ವಿ ಬೌದ್ಧ ಧರ್ಮ ಗುರುವಾಗಿ ನೇಮಕಗೊಂಡವರಲ್ಲಿ ಸಾರಾಹ ಒಬ್ಬರು. ಬೌದ್ಧಿಕವಾಗಿ ಸಾರಾಹ ಅಂದರೆ the one who shut the arrow. ಈ ವಾಕ್ಯದ ಅರ್ಥ, ಮಾನವ ಅಹಂಕಾರ ಮತ್ತು ವಸ್ತುವಿನ ಕೋಟೆಯ ಒಳಗೆ ಬದುಕುತ್ತಿದ್ದಾನೆ. ಇಂತಹ ಸಂಕೋಲೆಯ ಸರಪಳಿಗಳಿಂದ ಬಂಧಿತನಾಗಿ ಪ್ರೇಮ ಮರೆತಿದ್ದಾನೆ. ಇದರಿಂದ ಹೂರ ಬರಬೇಕಾದರೆ ತನ್ನ ಹರಿತವಾದ ಬಾಣ ತುದಿಯಿಂದ ಸಂಕೋಲೆಗಳ ಸರಪಳಿಯನ್ನು ತುಂಡರಿಸಿಬೇಕು ಹಾಗು ಕಟ್ಟಳೆಗಳು ಪ್ರೇಮವಾಗಿ ಪರಿವರ್ತನೆ ಆಗಬೇಕು.
ಆತ್ಮವನ್ನು ಪರಮಾತ್ಮನಲ್ಲಿ ಬೆರೆಸುವ ಕ್ರಿಯೆ (amalgamation process) ಗೆ “ಯೋಗ” ಎಂದು ಕರಯುತ್ತಾರೆ. ಹಿಂದೆ ಮಹಾತ್ಮ ಬುದ್ಧ ತನ್ನ ತಂತ್ರ ಮೌಲ್ಯ ಸಂಶೋಧನೆ ಮೂಲಕ ಮನೋ ಕಾರ್ಯನೀತಿಯನ್ನು ವಿಶ್ಲೇಷಿಸಿದ್ದರು. ತಾತ್ವಿಕವಾಗಿ ಮನಸ್ಸು ಹಲವು ಸಲಕರಣೆಗಳ ಸಂಕೀರ್ಣ. ಕಾರ್ಖಾನೆಯ ಯಂತ್ರವನ್ನು ಜೋಡಿಸಲು ಯಂತ್ರೋಪಕರಣಗಳು ಅಗತ್ಯ. ಹಾಗೆಯೇ ಮನಸ್ಸಿನ ಅಥವ ಮೆದುಳಿನ ಯಂತ್ರವನ್ನು ಅಳವಡಿಸಲು ಮತ್ತು ತನ್ನ ಕರ್ತವ್ಯ ನಿರ್ವಹಿಸಲು ಈ ತರಹದ ಯಂತ್ರೋಪಕರಣಗಳು (instruments for inner engineering) ಬೇಕಾಗುವುದು. ನಮಗೆ ಕಾಣದಂತಹ ಸಲಕರಣೆಗಳು ನೂರಾರು. ಕ್ರಮಬದ್ಧ ಮಾನವನಿಗೆ ಈ ಯಂತ್ರೋಪಕರಣಗಳು normal ಆಗಿ ಕೆಲಸ ಮಾಡುತ್ತಿರುತ್ತದೆ. ಮನೋಭ್ರಮೆ ಮತ್ತು ಮನೋಚಂಚಲತೆಗಳಲ್ಲಿ ಮೆದುಳಿನ ತುಕ್ಕು ಹಿಡಿದ ಯಂತ್ರಗಳಂತೆ ವರ್ತಿಸುತ್ತವೆ. ನಮ್ಮಲ್ಲೇ ಇರುವ ಸಲಕರಣೆಗಳನ್ನು (intelligence, skill, memory, discrimination etc) ಉಪಯೋಗಿಸಿ oil ಹಾಕಬೇಕು ಅಥವ nut ಮತ್ತು bolt ಗಳನ್ನು tight ಅಥವಾ lose ಮಾಡಬೇಕು. ಮಹಾನ್ ಬುದ್ಧ ಸುಲಭದ ಮೂರು ಸಲಕರಣೆ ವೃದ್ಧಿಸುವುದನ್ನು ತಿಳಿಸಿದ್ದರು. ಈ ವೃದ್ಧಿಯ ಕ್ರಿಯೆಯನ್ನು ಶಾಂತಿರೂಪಿ ಬುದ್ಧ ತಂತ್ರ ಜ್ಞಾನದ ಅಡಿ “ಯೋಗ” ಎಂದು ಕರೆದರು. ಈ ಯಂತ್ರೋಪಕರಣಗಳು perception (ಗ್ರಹಿಕೆ), conception (ಧಾರಣೆ) ಮತ್ತು execution (ಕಾರ್ಯ ನಿರ್ವಹಣೆ). ಈ ಮೂರು ಸಲಕರಣೆಗಳ ಹೊಂದಾಣಿಕೆಯ ಕೊರತೆ ಇದ್ದರೆ ಊಹಿಸಿ ನಮ್ಮ ಮನಸ್ಸು ಎನಾಗಬಹುದೆಂದು. ಈ ಹೊಂದಾಣಿಕೆಯ ಕ್ರಿಯಾಶೀಲತೆಯನ್ನು “ತಂತ್ರ ಯೋಗ” ಎಂದು ಬುದ್ಧ ಕರೆದಿದ್ದರು. ಅಂದರೆ ಯಾವುದೇ ಗ್ರಹಿಕೆಯನ್ನು ಸಮರ್ಪಕವಾಗಿ ಧಾರಣೆ ಮಾಡಿ, ಮಾಡಿದಮೇಲೆ ವಿವೇಕದಿಂದ ಮರ್ಧಿಸಿ ಕಾರ್ಯ ನಿರ್ವಹಣೆಯನ್ನು ರೂಪಿಸಿಕೊಳ್ಳಬೇಕೆಂಬದು.
ತಂತ್ರ ಜ್ಞಾನದ ಪ್ರಧಾನ ಬಿಂದು “ಚಿಹ್ನೆ”. ವಿಕಾಸದಿಂದ ಬಾಷೆ, ಲಿಪಿ ಮತ್ತು ಅನುವಾದ ಬಂದಿವೆ. ಸಾವಿರಾರು ವರ್ಷಗಳ ಹಿಂದೆ ಬಾಷೆ ಇದ್ದರೂ ಅರ್ಥವಾಗುತ್ತಿರಿಲಿಲ್ಲ. ಸಾವಿರ ವರ್ಷಗಳ ಹಿಂದೆ ಹಲವಾರು ಪಂಗಡಗಳ ಮಧ್ಯೆ ಮೂಖ ಮತ್ತು ಸಂಪರ್ಕ ಚಿಹ್ನೆಗಳ ಮುಖಾಂತರವೇ communication ಆಗುತಿತ್ತು. ತಾಂತ್ರಿಕ ಲಿಪಿ, ಸಂಖ್ಯೆ ಮತ್ತು ಚಿಹ್ನೆಗಳಿಂದ ಕೂಡಿದ್ದು ಸಹಸ್ರ ವರ್ಷಗಳ ಹಿಂದೆ ಬರದಿತ್ತು ಎನ್ನುವ ವಾದ ಇದೆ. ಈ ಲಿಪಿಯನ್ನು ಬೌದ್ಧ ಮತ್ತು ಕಾನ್ಫುಸಿಯಸ್ ಧರ್ಮ ಗ್ರಂಥಗಳಲ್ಲಿ ಮುದ್ರಿಸಲ್ಪಟ್ಟಿವೆ. ಇಂತಹ ಚಿಹ್ನೆಗಳು – ಸಮೀಕರಣ, ನಿಧಿ, ಅಜ್ಞಾತ, ರಹಸ್ಯ, ಗುಪ್ತ, ಸೂಪ್ತತೆ, ನಿಷೇಧಿತ ಇತ್ಯಾದಿಗಳಿಂದ ಒಳಗೊಂಡಿರುತ್ತವೆ. ಈ ಚಿಹ್ನೆಗಳನ್ನು ಕೆಲ ಪಂಡಿತರು ಭೇದಿಸುವರು. ಭೇದಿಸುವ ಮೂಲಕ ಅನೇಕ ಜಟಿಲ ಸಮಸ್ಯೆಗಳನ್ನು ಬಗೆಹರಿಸಿದ ಉದಾಹರಣೆಗಳು ಇವೆ. ಇಂದು ಸಂಖ್ಯೆಗಳನ್ನು ಗಣ ಯಂತ್ರಗಳಿಂದ ಎನಕ್ರಿಪ್ಟ ಮಾಡಿ software ತಯಾರಿಸುವರು. ಇವುಗಳನ್ನು computerಗೆ ಅಳವಡಿಸಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವೃದ್ಧಿಗೆ ಸಹಾಯಕವಾಗುವಂತೆ ಮಾಡುವರು. ಇವುಗಳ ಉಪಯೋಗವನ್ನು ಅನೇಕ ಕ್ಷೇತ್ರಗಳಲ್ಲಿ ಕಾಣಬಹುದಾಗಿದೆ. ಉದಾಹರಣೆಗೆ, Artificial intelligence (ಕೃತಕ ಬುದ್ದಿಮತೆ).
ಕೊನೆಯದಾಗಿ ನನ್ನದೆ ಆದ ಹತ್ತು ಮನೋ ತಾಂತ್ರಿಕ ಆಜ್ಞೆಗಳು ಅಥವಾ ಆಜ್ಞಾ ಪಾತ್ರೆಗಳನ್ನು ( Ten Commandments) ತಿಳಿಸುವೆ..
1) Self belief rather than believing somebody (ತನ್ನ ಆತ್ಮದ ಮೇಲೆ ನಂಬಿಕೆ ಇಡುವುದು)
2) Believing own deeds (ಮೌಲ್ಯ ಆಧಾರಿತ ಕೆಲಸಗಳಲ್ಲಿ ನಂಬಿಕೆ ಇಡುವುದು)
3) Finding a path of knowledge (ಜ್ಞಾನದಿಂದ ಪಾಂಡಿತ್ಯವನ್ನು ಹೆಚ್ಚಿಸಿಕೊಳ್ಳುವುದು)
4) Allowing time for adequate reasoning (ವಿವೇಕ ಬಲ ವರ್ಧನೆ ಮಾಡುವುದು)
5) Respecting the religion of humanity (ಮಾನವ ಧರ್ಮವನ್ನು ಪಾಲಿಸುವುದು)
6) Merging his consciousness with environment (ಪರಿಸರದ ಕಾಳಜಿ ವಹಿಸುವುದು)
7) Following ethos and norms of one country (ರಾಷ್ಟ್ರೀಯತೆಗೆ ಒತ್ತು ನೀಡುವುದು)
8) To give a second look to culture and practices (ಸಂಸ್ಕಾರ ಮತ್ತು ಪರಂಪರೆಯ ನಂಟು ಹೊಂದುವುದು)
9) Respecting living and nonliving objects alike (ನಿರ್ಜೀವ ವಸ್ತುಗಳಲ್ಲಿ ದೈವತ್ವವನ್ನು ಕಾಣುವುದು)
10) To find one’s own way to serve (ಪರೋಪಕಾರವನ್ನು ಮಾಡುವುದು)
ಈ ಆಜ್ಞೆಗಳನ್ನು ಮಾನವ ನೆರವೇರಿಸಿದ್ದಲ್ಲಿ “ಆತನು ನಿಜವಾದ ಧರ್ಮವನ್ನು ಪಾಲಿಸುತ್ತಿದ್ದಾನೆ” ಎನ್ನಬಹುದು”…
ಮುಗಿಯಿತು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

