ಕೊರಟಗೆರೆ :- ಎಐಟಿಎನ್ ನ್ಯಾಷನಲ್ ಸೀರೀಸ್ 12 ವರ್ಷದೋಳಗಿನ ಬಾಲಕರ ಟೆನ್ನಿಸ್ ಪಂದ್ಯಾವಳಿಗಳಲ್ಲಿ ಧನುಷ್ ಎಸ್ ಎಂ ಸಿಂಗಲ್ ಮತ್ತು ಡಬಲ್ಸ್ ಪ್ರಶಸ್ತಿ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.
ಕೊರಟಗೆರೆ ವಿಧಾನಸಭಾ ವ್ಯಾಪ್ತಿಯ ಸಂಕಾಪುರ ಗ್ರಾಮದ ಮಂಜುನಾಥ ಮತ್ತು ಕವಿತಾ ದಂಪತಿಗಳ ಮಗ ಧನುಷ್ ಇತ್ತೀಚೆಗೆ ಹೈದ್ರಾಬಾದ್ ನಲ್ಲಿ ನಡೆದ ಟೆನ್ನಿಸ್ ಪಂದ್ಯವಳಿಗಳಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಪಡೆದಿರುತ್ತಾನೆ, ಎಬಿನೆಜರ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಧನುಷ್ ಗೆ ತರಬೇತುದಾರ ಸೂರಜ್ ಚಿಕ್ಕಣ್ಣನವರ್ ರವರಿಂದ ತರಬೇತಿ ನೀಡುತ್ತಿದ್ದಾರೆ.
ಧನುಷ್ ಎಐಟಿಎಸ್ ಅಖಿಲ ಭಾರತದದ 12 ನೇ ವರ್ಷದ ಒಳಗಿನದಲ್ಲಿ ಶ್ರೇಯಾಂಕದಲ್ಲಿ 2 ಸ್ಥಾನದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ 1 ನೇ ಶ್ರಯಾಂಕವನ್ನು ಪಡೆದು ಕೊಂಡಿದ್ದಾನೆ, ಕ್ಷೇತ್ರ ಶಾಸಕರು ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ರವರು ಧನುಷ್ ನನ್ನು ಅಭಿನಂದಿಸಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ.
