ಹಾಸನ: ಶ್ರೀ ಶ್ರೀ ರವಿಶಂಕರ್ ಅವರ 70ನೇ ವರ್ಷದ ಹುಟ್ಟುಹಬ್ಬವನ್ನು ಹಾಸನದ ಆರ್ಟ್ ಆಫ್ ಲಿವಿಂಗ್ ಗುರುಭಕ್ತರು ವಿಶೇಷವಾಗಿ ಆಚರಿಸಿದರು.
ನಗರದ ಅರಸೀಕೆರೆ ರಸ್ತೆಯ ಬ್ಯಾಂಕ್ ಕಾಲೋನಿಯ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಮೇ 13, 2026ರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಗುರುಭಕ್ತರು ಶ್ರೀ ಶ್ರೀ ರವಿಶಂಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಕಾರ್ಯಕ್ರಮದ ಅಂಗವಾಗಿ ಗಣಪತಿ ದೇವಸ್ಥಾನದ ಆವರಣದಲ್ಲಿ ಗಿಡಗಳನ್ನು ವಿತರಿಸಿ, ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು. ಬಳಿಕ ಭಕ್ತರು ಭಜನೆ ಹಾಗೂ ಗುರುಸ್ತುತಿ ಹಾಡುಗಳನ್ನು ಹಾಡುವ ಮೂಲಕ ಭಕ್ತಿಭಾವ ಮೆರೆದರು.

ಕಾರ್ಯಕ್ರಮದ ನಂತರ ಆಗಮಿಸಿದ್ದ ಭಕ್ತರಿಗೆ ಶ್ರೀ ಗಣಪತಿ ಸೇವಾ ಸಂಸ್ಥೆಯ ವತಿಯಿಂದ ಪ್ರಸಾದ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ಯೋಗ ಶಾಲೆಯ ಶಿಕ್ಷಕರಾದ ಸುಬ್ರಮಣ್ಯ ಜಿ, ವೇದಾವತಿ, ಪ್ರಕಾಶ್ ಯಾಜಿ, ಕಟ್ಟಾಯ ಶಿವಕುಮಾರ್, ರಾಜು, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಪ್ರಭಾಕರ್, ಬ್ಯಾಂಕ್ ಶಿವಕುಮಾರ್, ಡಾ. ಮಂಜುನಾಥ್, ಡಾ. ರಾಜಗೋಪಾಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.
– ಶಿವಕುಮಾರ್ ಕಟ್ಟಾಯ.
