ತುಮಕೂರು: ಅಭಿವ್ಯಕ್ತಿ ಎಂಬುದು ಮನಸ್ಸಿನ ಭಾವನೆಗಳನ್ನು ಇರುವ ಒಂದು ಸುಲಭದ ವಿಧಾನ.ಮನುಷ್ಯ ತನ್ನಲ್ಲಿರುವ ಭಾವನೆಗಳನ್ನು ತನಗೆ ತಿಳಿದ ಕಲೆ,ಸಾಹಿತ್ಯ ಸಂಗೀತ, ನೃತ್ಯ,ನಾಟಕ, ಭಾವಾಭಿನಯದ ಮೂಲಕ ವ್ಯಕ್ತಪಡಿಸಲಿದ್ದು, ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳ ಆನಾವರಣಕ್ಕೆ ಅಭಿವ್ಯಕ್ತಿ ಸೂಕ್ತ ವೇದಿಕೆಯಾಗಿದೆ ಎಂದು ಸಿದ್ದಗಂಗಾ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಡಾ.ಶಿವಕುಮಾರಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಸಿದ್ದಗಂಗಾ ಕಲಾ,ವಿಜ್ಞಾನ ಹಾಗು ವಾಣಿಜ್ಯ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಬಹುಮಾನ ವಿತರಣೆ ಅಭಿವ್ಯಕ್ತಿ-2026 ಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳ ಜ್ಣಾನ ಹೆಚ್ಚುವುದರ ಜೊತೆಗೆ ಸೃಜನಶೀಲತೆಯ ಜೊತೆಗೆ, ಆತ್ಮವಿಶ್ವಾಸನ್ನು ಹೆಚ್ಚಿಸಿ ನಿಮ್ಮನ್ನು ಸತ್ಪçಜೆಯಾಗಿ ರೂಪಿಸಲಿದೆ ಎಂದರು.
ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅಂತರರಾಷ್ಟ್ರೀಯ ಕಬ್ಬಡ್ಡಿ ತರಬೇತುದಾರ ರವೀಂದ್ರಶೆಟ್ಟಿ ಮಾತನಾಡಿ, ಕ್ರೀಡೆ ಮನುಷ್ಯನಲ್ಲಿ ಶಿಸ್ತು ಮತ್ತು ಸಮಯಪ್ರಜ್ಣೆ ಮೂಡಿಸುವುದರ ಜೊತೆಗೆ, ಕಡಿಮೆ ಅಂಕ ಪಡೆದು ಸಹ ಕ್ರೀಡೆಯ ಸಹಕಾರದಿಂದ ಬದುಕು ರೂಪಿಸಿಕೊಳ್ಳಬಹುದು. ಎಸ್.ಎಸ್.ಎಲ್.ಸಿ ಯಲ್ಲಿ ಶೇ 45 ರಷ್ಟು ಅಂಕ ಪಡೆದ ನಾನು ದಸರಾ ಕ್ರೀಡಾ ಕೂಟದ ಸದ್ಭಳಕೆ ಮಾಡಿಕೊಂಡು ಇಂದು ಅಂತರರಾಷ್ಟ್ರೀಯ ತರಬೇತುದಾರನಾಗಿ ಬೆಳೆದಿದ್ದೇನೆ.ದೃಢ ನಿರ್ಧಾರ ಮತ್ತು ಗುರಿ ತಲುಪುವ ಛಲ ನಿಮ್ಮಲ್ಲಿ ಇದ್ದರೆ,ಸಾಧನೆಗಳ ಮಹಾಪೂರವೇ ನಿಮ್ಮ ಬಳಿ ಬರಲಿವೆ ಎಂದರು.

ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್ ಮಾತನಾಡಿ, ವಿಧ್ಯಾರ್ಥಿ ದಿಸೆಯಲ್ಲಿ ನಾವು ರೂಢಿಸಿಕೊಳ್ಳುವ ಪಠ್ಯೇತರ ಚಟುವಟಿಕೆಗಳು ನಮ್ಮನ್ನು ಕಲಾವಿದರನ್ನಾಗಿ ರೂಪಿಸುತ್ತವೆ.ಕಲೆಗೆ ಇಂತಹದ್ದೇ ವಸ್ತು ಎಂಬುದಿಲ್ಲ. ಪ್ರತಿಯೊಂದರಲ್ಲಿಯೂ ಹಾಸ್ಯ ಹುಡುಕುವ ಮನಸ್ಸು ನಿಮ್ಮಲ್ಲಿಸ್ದರೆ, ನನ್ನಂತಯೇ ಹಾಸ್ಯ ಕಲಾವಿದರಾಗಿ ಬೆಳೆಯಬಹುದು. ನಿಮಗೆ ಸಿಕ್ಕಿರುವ ವೇದಿಕೆಯನ್ನು ಕಳೆದುಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ದಗಂಗಾ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಬಿ.ನಿಜಲಿಂಗಪ್ಪ ಮಾತನಾಡಿ, ಇಂದು ಕಾಲೇಜಿನಲ್ಲಿ ಸಂಭ್ರಮದ ದಿನ, ಎನ್.ಸಿ.ಸಿ,ಎನ್.ಎಸ್.ಎಸ್. ಕ್ರೀಡೆ,ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸುವುದರ ಜೊತೆಗೆ, ವಿವಿಯ ಮಟ್ಟದಲ್ಲಿ ಹೆಸರು ಮಾಡಿದ ಪ್ರತಿಭೆಗಳನ್ಬು ಗೌರವಿಸುವ ಕೆಲಸ ಆಗುತ್ತಿದೆ. ನಮ್ಮ ಕಾಲೇಜಿನಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಭಿವ್ಯಕ್ತಿಯ ಮೂಲಕ ವಿದ್ಯಾರ್ಥಿಗಳ ಒಟನೋಟಗಳಿಗೆ ವೇದಿಕೆ ಒದಗಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಡಾ.ಡಿ.ಎನ್.ಯೋಗೀಶ್ವರಪ್ಪ,ದೈಹಿಕ ಶಿಕ್ಷಣ ನಿರ್ದೇಶಕರಾದ ಉದಯಕುಮಾರ್, ಅಭಿವ್ಯಕ್ತಿಯ ಸಂಚಾಲಕರಾದ ಶ್ರೀ ಮತಿ ರತ್ನಮ್ಮ,ಸಹ ಸಂಚಾಲಕರಾದ ಶ್ರೀ ಮತಿ ಶ್ರೀವಲ್ಕಿ ಎನ್.ಸಿ.ಸಿ.ಅಧಿಕಾರಿಗಳಾದ ಲೆಪ್ಪಿನೆಂಟ್ ರಾಮಲಿಂಗಾರೆಡ್ಡಿ, ಲೆಫ್ಟಿನೆಂಟ್ ಶೃತಿ, ಎನ್.ಎಸ್.ಎಸ್.ಅಧಿಕಾರಿ ಕುಮಾರಸ್ವಾಮಿ, ಸ್ಕೌಟ್ ಅಧಿಕಾರಿ ಮೋಹನಕುಮಾರಿ ಮತ್ತಿತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
