ರಾಮನಾಥಪುರ : ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರದನಹಳ್ಳಿ ಗ್ರಾಮದ ದಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ದೇವಾಲಯದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗಿದ್ದು, ಉತ್ಸವ ಹಾಗೂ ಪೂಜಾ ಕೈಂಕರ್ಯಗಳು ಗಮನ ಸೆಳೆದವು.

ಈ ಸಂದರ್ಭದಲ್ಲಿ ಮಾತನಾಡಿದ , ಗ್ರಾಮೀಣ ಪ್ರದೇಶಗಳ ದೇವಾಲಯಗಳಲ್ಲಿ ಸನಾತನ ಸಂಸ್ಕೃತಿ ಹಾಗೂ ಪರಂಪರೆಯ ಪೂಜಾ ಪದ್ಧತಿಗಳು ಇಂದಿಗೂ ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು. ಶಿರದನಹಳ್ಳಿ ದೇವಾಲಯದ ವ್ಯವಸ್ಥಾಪಕ ಅವರ ಕಾರ್ಯವನ್ನು ಮೆಚ್ಚಿದರು.

ಧಾರ್ಮಿಕ ಪೂಜಾ ಕೈಂಕರ್ಯಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ ಎಂದು ಅವರು ತಿಳಿಸಿದರು.

ಸಾಧಕರಿಗೆ ಗೌರವ
ಈ ಸಂದರ್ಭದಲ್ಲಿ ರಾಮನಾಥಪುರದ ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕ ವೇ. ಕನಕಾಚಾರ್ಯರು, ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಅರ್ಚಕ ಶ್ರೀನಾಥ್, ಸಮಾಜ ಸೇವಕರಾದ ಪಾಂಡುಚೇರಿ ಶ್ರೀ ಮಧು, ವಿಜಯಕುಮಾರ್, ಕಾವೇರಿ ನದಿ ಸ್ವಚ್ಛತಾ ಸಮಿತಿ ತಾಲೂಕು ಅಧ್ಯಕ್ಷ ಸಿದ್ದಾರಾಜು, ಕಾಂಟ್ರಾಕ್ಟ್ ಲೋಕೇಶ್ ಸೇರಿದಂತೆ ಹಲವು ಸಾಧಕರಿಗೆ ದೇವಾಲಯದ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.
– ಕುಮಾರಸ್ವಾಮಿ ಎಂ.ಎನ್
