ಬೆಂಗಳೂರು : ವತಿಯಿಂದ ಮೇ 16ರಂದು ಕನ್ನಡದ ಹಿರಿಯ ಲೇಖಕಿ, ಅನುವಾದಕಿ ಹಾಗೂ ಶಿಕ್ಷಣ ತಜ್ಞೆ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ ಹಾಗೂ ಅವರ ಬದುಕು-ಬರಹ ಕುರಿತ ಸಂವಾದವನ್ನು ಆಯೋಜಿಸಲಾಗಿತ್ತು.
ಕೋಣನಕುಂಟೆಯ ಶ್ರೀನಿಧಿ ಲೇಔಟ್ನಲ್ಲಿರುವ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಪಾರ್ವತಿ ಐತಾಳ್ ಅವರು ತಮ್ಮ ಸಾಹಿತ್ಯ ಪಯಣ ಹಾಗೂ ಜೀವನಾನುಭವಗಳನ್ನು ಹಂಚಿಕೊಂಡರು.
“ಜೀವನದಲ್ಲಿ ವಿದ್ಯಾಭ್ಯಾಸದಿಂದ ಕಲಿಯುವುದಷ್ಟೇ ಮುಖ್ಯವಲ್ಲ, ಪ್ರಕೃತಿ ಮತ್ತು ಅನುಭವದಿಂದ ಕಲಿಯುವ ಪಾಠಗಳೂ ಮಹತ್ವದ್ದಾಗಿವೆ” ಎಂದು ಅವರು ತಿಳಿಸಿದರು. ಕನ್ನಡದ ಹಿರಿಯ ಸಾಹಿತಿ ಅವರನ್ನು ಮೊದಲ ಫೆಮಿನಿಸ್ಟ್ ಅಥವಾ ಸ್ತ್ರೀವಾದಿ ಲೇಖಕ ಎಂದು ಬಣ್ಣಿಸಿದರು.
ಲೇಖಿಕಾ ಸಾಹಿತ್ಯ ವೇದಿಕೆಯ ಸಾಹಿತ್ಯಿಕ ಚಟುವಟಿಕೆಗಳನ್ನು ಶ್ಲಾಘಿಸಿದ ಅವರು, ಮಹಿಳಾ ಸಾಹಿತ್ಯಿಕರಿಗಾಗಿ ಇಂತಹ ವೇದಿಕೆಗಳ ಅಗತ್ಯತೆಯನ್ನೂ ಒತ್ತಿಹೇಳಿದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ರಾಜೇಶ್ವರಿ ಜಯಕೃಷ್ಣ, ವಿಭಾ ಪುರೋಹಿತ್, ವಿದ್ಯಾಶಿರಹಟ್ಟಿ, ವೀಣಾ ರಮೇಶ್ ಮರವಂತೆ, ಮಧುರಾ ಕರ್ಣಂ ಹಾಗೂ ವೀಣಾ ರಾವ್ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಸಾಹಿತ್ಯ ಪ್ರಧಾನ ತ್ರೈಮಾಸಿಕ ಪತ್ರಿಕೆ “ಸಾಹಿತ್ಯ ಸಖಿ” ವಾರ್ಷಿಕ ವಿಶೇಷಾಂಕವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಚಾಲಕಿ ಉಪಸ್ಥಿತರಿದ್ದರು. ಅತಿಥಿಗಳನ್ನು ರಾಜೇಶ್ವರಿ ಜಯಕೃಷ್ಣ ಸ್ವಾಗತಿಸಿದರು. ಮಧುರಾ ಕರ್ಣಂ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿದ್ಯಾಶಿರಹಟ್ಟಿ ವಂದನಾರ್ಪಣೆ ಸಲ್ಲಿಸಿದರು.
ಈ ಕಾರ್ಯಕ್ರಮದ ಆಯೋಜನೆ ಹಾಗೂ ನಿರ್ವಹಣೆಯನ್ನು ಲೇಖಿಕಾ ಸಾಹಿತ್ಯ ವೇದಿಕೆಯ ಸಂಚಾಲಕಿ ಶೈಲಜಾ ಸುರೇಶ್ ನೆರವೇರಿಸಿದರು.
ವರದಿ : ವಿಭಾ ಪುರೋಹಿತ್
