ಕೊರಟಗೆರೆ :- ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಯುವಕ ಬಸವರಾಜ ಕೆಂಪವಾಡ ದೇಶದ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ಕೊರಟಗೆರೆ ತಾಲೂಕಿನ ಮಾವತ್ತೂರು ಶ್ರೀ ಅರಸೇಶ್ವರಿ (ಮಾವತ್ತೂರಮ್ಮ) ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಮುದಾಯ ಭವನವನ್ನು ಭೇಟಿ ನೀಡಿ ಪರಿಶೀಲನೆ ನೆಡೆಸಿ ನಂತರ ತುಮಕೂರು ಉಪ್ಪರಹಳ್ಳಿಯ ಪಿ ಎನ್ ಕೆ ಟೌನ್ ಶಿಪ್ ನ ಕಚೇರಿಯಲ್ಲಿ ಬಸವರಾಜು ಕೆಂಪನವಾಡ ಅವರಿಗೆ ಸಮಾಜ ಸೇವಕರು ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಪಿ ಎನ್ ಕೃಷ್ಣಮೂರ್ತಿಯವರು ಸ್ನೇಹಿತರುಗಳೊಂದಿಗೆ ಸನ್ಮಾನಿಸಿ ಗೌರವಿಸಿದರು.
ಬಸವರಾಜ ಕೆಂಪವಾಡ UPSC ಭಾರತೀಯ ಅರಣ್ಯ ಸೇವೆ (IFoS) ಪರೀಕ್ಷೆಯಲ್ಲಿ ಆಲ್ ಇಂಡಿಯಾ ಪ್ರಥಮ ರ್ಯಾಂಕ್ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ, ಇವರು ಕೃಷಿಕ ಕುಟುಂಬದಲ್ಲಿ ಜನಿಸಿ ಅವರ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಯಶಸ್ಸಿನ ಶಿಖರ ಏರಿದ್ದಾರೆ ಎಂದು ಕೃಷ್ಣಮೂರ್ತಿ ಅವರು ಅಭಿಪ್ರಾಯಪಟ್ಟರು .

ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲೇ ಪೂರ್ಣಗೊಳಿಸಿ.
ಬಳಿಕ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ.
ಶಿರಸಿಯಲ್ಲಿ ಅರಣ್ಯ ವಿಜ್ಞಾನದಲ್ಲಿ ಬಿಎಸ್ಸಿ ಪದವಿ ಪಡೆದರು. ಬೆಂಗಳೂರಿನಲ್ಲಿ ಸ್ವಯಂ ಅಧ್ಯಯನದ ಮೂಲಕ UPSC ಪರೀಕ್ಷೆಗೆ ಸಿದ್ಧತೆ ನಡೆಸಿದರು.
ಮೊದಲ ಪ್ರಯತ್ನದಲ್ಲಿ ವಿಫಲವಾದರೂ ಹಿಂಜರಿಯದೆ ಮತ್ತೆ ಪ್ರಯತ್ನಿಸಿ
ತಪ್ಪುಗಳನ್ನು ವಿಶ್ಲೇಷಿಸಿ ಶಿಸ್ತುಬದ್ಧ ಅಧ್ಯಯನದಿಂದ ಎರಡನೇ ಪ್ರಯತ್ನದಲ್ಲಿ ದೇಶದ ಮೊದಲ ಸ್ಥಾನ ಪಡೆದಿದ್ದಾರೆ.
ಬಸವರಾಜ ಕೆಂಪವಾಡ ಮಾತನಾಡಿ
ಪ್ರಕೃತಿ, ಅರಣ್ಯ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಇರುವ ಆಸಕ್ತಿ ಸಾಧನೆಗೆ ಪ್ರೇರಣೆಯಾಯಿತು, ಯುವ ಸಮೂಹ ಉನ್ನತ ವ್ಯಾಸಂಗದ ಸಂದರ್ಭದಲ್ಲಿ ಒಂದಷ್ಟು ಹಿನ್ನಡೆಯಾದರೆ ಅದಕ್ಕೆ ಕುಗ್ಗದೆ ಗುರಿ ಇಟ್ಟು ಸಾಧನೆಗೈದರೆ ಯಶಸ್ವಿ ತಾನಾಗಿ ಒಲಿಯಲಿದೆ ಎಂದು ಯುವಕರಿಗೆ ಕಿವಿಮಾತು ಹೇಳಿದರು.

ಸಮಾಜ ಸೇವಕರು ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ.ಎನ್. ಕೃಷ್ಣಮೂರ್ತಿ ಅವರು ಬಸವರಾಜರನ್ನು ಸನ್ಮಾನಿಸಿ ಗೌರವಿಸಿದರು, ಈ ಸಾಧನೆ ಯುವಕರಿಗೆ ಸ್ಪೂರ್ತಿದಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಸವದಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
ಗ್ರಾಮೀಣ ಪ್ರತಿಭೆಗೆ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ.
– ಶ್ರೀನಿವಾಸ್ ಕೊರಟಗೆರೆ.
