“ಕನ್ನಡ ಚಿತ್ರರಂಗಕ್ಕೆ ಕನ್ನಡಿಗರು ಬರ್ತಿಲ್ಲ” ಎಂಬ ಟೀಕೆಗಳಿಗೆ ಉತ್ತರವಾಗಿ ಮೂಡಿ ಬಂದಿರುವ ಸಿನಿಮಾ “ಲೋ ನವೀನ” ಇದೀಗ ರಾಜ್ಯಾದ್ಯಂತ ಸಿನಿಪ್ರೇಮಿಗಳ ಮನ ಗೆಲ್ಲುತ್ತಿದೆ. ನಾಡಿನ ಸಂಸ್ಕೃತಿ, ಹೃದಯಾಳದ ಕನ್ನಡ ಭಾಷೆ, ಸ್ನೇಹ, ಹುಡುಗಾಟ, ಪ್ರೀತಿ ಹಾಗೂ ಜವಾಬ್ದಾರಿಯ ಬದುಕನ್ನು ನೈಜವಾಗಿ ತೆರೆ ಮೇಲೆ ತಂದಿರುವ ಈ ಸಿನಿಮಾ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆಯುತ್ತಿದೆ.
ಹಳ್ಳಿ ಹೈದನ ಜೀವನ ಹೋರಾಟ, ಕುಟುಂಬದ ಮೌಲ್ಯಗಳು ಮತ್ತು ಗ್ರಾಮೀಣ ಸೊಗಡನ್ನು ಜೀವಂತವಾಗಿ ಚಿತ್ರಿಸಿರುವ “ಲೋ ನವೀನ” ಇಡೀ ಕನ್ನಡ ಚಿತ್ರರಂಗ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಕುಟುಂಬ ಸಮೇತರಾಗಿ ಕೂತು ನಕ್ಕು-ಸಂಭ್ರಮಿಸುವ ಮನರಂಜನಾ ಚಿತ್ರವೆಂಬ ಹೆಗ್ಗಳಿಕೆಯನ್ನು ಸಹ ಈ ಸಿನಿಮಾ ಪಡೆದುಕೊಂಡಿದೆ.

ಬೆನ್ ಚಿಕ್ಕಸ್ವಾಮಿ ಬೆನಮನಹಳ್ಳಿ ಹಾಗೂ NS ಸ್ಟುಡಿಯೋಸ್ ನಿರ್ಮಾಣದಲ್ಲಿ, ಧನುರ್ ದಾರಿ ಪವನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ನವೀನ್ ಸಜ್ಜು, ವರ್ಷ ಗಿರಿಧರ್, ರೇಷ್ಮಾ V ಗೌಡ, ಪ್ರಕಾಶ್ ತುಮ್ಮಿನಾಡು, ಅಪೂರ್ವಶ್ರೀ, ಅಭಿಜಿತ್ ಗೌಡ, ಮಲ್ಲರಾಜು ಮಾರಸಿಂಗನಹಳ್ಳಿ ಸೇರಿದಂತೆ ಹಲವಾರು ಹಳ್ಳಿ ಪ್ರತಿಭೆಗಳು ಅಭಿನಯಿಸಿದ್ದಾರೆ.
ಚಿತ್ರಕ್ಕೆ ಸಾರ್ವಜನಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, “ಕುಟುಂಬ ಸಮೇತ ನೋಡಬಹುದಾದ ಉತ್ತಮ ಕನ್ನಡ ಸಿನಿಮಾ” ಎಂಬ ಸರ್ಟಿಫಿಕೇಟ್ ಕೂಡ ಲಭಿಸಿದೆ. ಇದರ ಭಾಗವಾಗಿ ಚಿತ್ರತಂಡ ಇದೀಗ ಕರ್ನಾಟಕದಾದ್ಯಂತ ವಿಜಯೋತ್ಸವ ಕಾರ್ಯಕ್ರಮಗಳನ್ನು ಆರಂಭಿಸಿದೆ.

ಗ್ರಾಮೀಣ ಸೊಗಡು, ನೈಜ ಅಭಿನಯ ಮತ್ತು ಮನಸಿಗೆ ಹತ್ತಿರವಾದ ಕಥಾಹಂದರದ ಮೂಲಕ “ಲೋ ನವೀನ” ಕನ್ನಡ ಸಿನಿರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಕನ್ನಡ ಸಿನಿಪ್ರೇಮಿಗಳ ಬೆಂಬಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಇನ್ನೂ ವಿಜಯೋತ್ಸವ ಪ್ರಾರಂಭಿಸಿರುವ ಸಿನಿ ತಂಡ, ಮಂಡ್ಯ , ಮದ್ದೂರು ಶ್ರೀರಂಗಪಟ್ಟಣ, ಬನ್ನೂರು ಕೆ ಎಮ್ ದೊಡ್ಡಿ , ಅರಕೆರೆ, ಮೈಸೂರು ಹಾಸನ ಚಿಕ್ಕಮಗಳೂರು , ಸಕಲೇಶಪುರ, ದಾವಣಗೆರೆ, ಹುಬ್ಬಳ್ಳಿ ಯಲ್ಲಿ ಸಂಭ್ರಮಿಸಲು ತಮ್ಮ ಪಯಣವನ್ನು ಪ್ರಾರಂಭಿಸಿದ್ದಾರೆ.
ಸಂದೀಪ ಶನಿವಾರಸಂತೆ
