ನಟ ನವೀನ್ ಸಜ್ಜು ಅವರ ಪ್ರತಿಯೊಂದು ಹೆಜ್ಜೆಯಲ್ಲೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲವಾಗಿ ನಿಂತಿದ್ದ ದಿವಂಗತ ನಟ ಪುನೀತ್ ರಾಜ್ಕುಮಾರ್, ನವೀನ್ ಅವರನ್ನು ಸ್ವಂತ ತಮ್ಮನಂತೆ ಕಾಣುತ್ತಿದ್ದರು ಎನ್ನುವುದು ಹಲವರಿಗೆ ತಿಳಿದ ವಿಚಾರ. ಈಗ ಅದೇ ಆತ್ಮೀಯತೆಯನ್ನು ಮುಂದುವರಿಸಿರುವ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು, ನವೀನ್ ಸಜ್ಜು ಅಭಿನಯದ ಚೊಚ್ಚಲ ಸಿನಿಮಾ ‘ಲೋ ನವೀನ’ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

![]()
ಸಾಮಾನ್ಯ ಪ್ರೇಕ್ಷಕರಂತೆ ಸಿನಿಮಾ ನೋಡಿ ಸಂತಸಗೊಂಡ ಅಶ್ವಿನಿ ಅವರು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ವಿಶೇಷವಾಗಿ ಬರೆದುಕೊಂಡಿದ್ದಾರೆ.
“Lo Naveena ಸಿನಿಮಾ ತುಂಬಾ ಮನರಂಜನಾತ್ಮಕವಾಗಿದ್ದು, ಬಹಳ ದಿನಗಳ ನಂತರ ಒಳ್ಳೆಯ ಫೀಲ್-ಗುಡ್ ಸಿನಿಮಾ ನೋಡಿದ ಅನುಭವವಾಯಿತು. ನವೀನ್ ಸಜ್ಜು ಅವರ ಅಭಿನಯ ಹಾಗೂ ನಿರ್ದೇಶನ ತಂಡದ ಕೆಲಸ ಶ್ಲಾಘನೀಯ,” ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಈ ಮೆಚ್ಚುಗೆಗೆ ನವೀನ್ ಸಜ್ಜು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ‘ಲೋ ನವೀನ’ ಚಿತ್ರದ ಬಗ್ಗೆ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ.
