ಬೆಂಗಳೂರು: ರಾಜ್ಯ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ಮತ್ತು ಚಿಕ್ಕಬಳ್ಳಾಪುರ ಆಡಳಿತಾತ್ಮಕ ನ್ಯಾಯಮೂರ್ತಿ ಶ್ರೀ ಹಂಚಾಟೆ ಸಂಜೀವ್ ಕುಮಾರ್ ರವರು ಮೇ. 23 ರಂದು ಚಿಕ್ಕಬಳ್ಳಾಪುರ ಜಿಲ್ಲೆಗೆ ಜಿಲ್ಲಾ ನ್ಯಾಯಲಯಕ್ಕೆ ಭೇಟಿ ನೀಡುತ್ತಿದ್ದು ಪ್ರಧಾನಿ ನರೇಂದ್ರ ಮೋದಿರವರು ಪೆಟ್ರೋಲ್ ಡೀಸೆಲ್ ಕಡಿಮೆ ಖರ್ಚು ಮಾಡಬೇಕು ಆದಷ್ಟು ಸಾರ್ವಜನಿಕ ವಾಹನ ಬಳಸಬೇಕು ಎಂದು ದೇಶದ ಜನರಿಗೆ ಕರೆ ನೀಡಿದ್ದು, ಅವರ ಕರೆಗೆ ಓಗೊಟ್ಟು ಚಿಕ್ಕಬಳ್ಳಾಪುರ ಪ್ರವಾಸ ಸಂದರ್ಭದಲ್ಲಿ ತಮಗೆ ಯಾವುದೇ ಪೋಲೀಸ್ ಭದ್ರತೆ ಮತ್ತು ಎಸ್ಕಾರ್ಟ್ ವಾಹನ ನೀಡಬಾರದು ಎಂದು ನ್ಯಾಯಮೂರ್ತಿಗಳು ಮನವಿ ಮಾಡಿದ್ದು ಪ್ರಧಾನಿಗಳ ಮಾತನ್ನು ಅನುಸರಿಸುತ್ತಿರುವುದು ಮತ್ತು ಪೆಟ್ರೋಲ್ ಡೀಸೆಲ್ ಉಳಿಸಲು ನ್ಯಾಯಮೂರ್ತಿಗಳು ತೆಗೆದುಕೊಂಡ ಕ್ರಮದ ಬಗ್ಗೆ,ದೇಶದ ಬಗ್ಗೆ ನ್ಯಾಯಮೂರ್ತಿಗಳು ಇಟ್ಟಿರುವ ಕಾಳಜಿಗೆ,ನ್ಯಾಯಮೂರ್ತಿಗಳ ನಡೆಗೆ ಸಾರ್ವಜನಿಕರು ರಾಜ್ಯಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
– ಕೆ.ಬಿ.ಚಂದ್ರಚೂಡ

