ತುಮಕೂರು: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ.ರಾಜೀವ್ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮಾಜಿ ಪ್ರಧಾನಿ ದಿವಂಗತ ರಾಜೀವ್ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮಾತನಾಡಿದ ಮಾಜಿ ಶಾಸಕರು ಹಾಗೂ ಎಐಸಿಸಿ ಅಲ್ಪಸಂಖ್ಯಾತರ ಘಟಕದ ಸಂಚಾಲಕರಾದ ಡಾ.ರಫೀಕ್ ಅಹಮದ್,ಈದೇಶದ ಅಭಿವೃದ್ಧಿಗೆ ಶ್ರಮಿಸಿದ ಅಗ್ರಗಣ್ಯ ನಾಯಕರಲ್ಲಿ ದಿವಂಗತ ರಾಜೀವಗಾಂಧಿ ಅವರು ಒಬ್ಬರು. ಅತ್ಯಂತ ಕಿರಿಯ ವಯಸ್ಸಿನಲ್ಲಿ ದೇಶದ ಪ್ರಧಾನಿಯಾಗಿ, ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ದೇಶಕ್ಕೆ ಭದ್ರ ಬುನಾದಿ ಹಾಕಿದವರು.ದೇಶದ ಯುವಜನರು ಚುನಾವಣೆಯಂತಹ ಪ್ರಮುಖ ವಿಚಾರಗಳಲ್ಲಿ ಭಾಗಿಯಾಗಬೇಕು ಎಂಬ ಆಶಯದಿಂದ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದರು.ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ಮೂಲಕ ಪಂಚಾಯತ್ರಾಜ್ ವ್ಯವಸ್ಥೆಜಾರಿಗೆತಂದು, ದಲಿತರು, ಹಿಂದುಳಿದವರು,ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ರಾಜಕೀಯ ಅಧಿಕಾರ ದೊರೆಯಬೇಕೆಂಬ ಮಹಾದಾಸೆ ಹೊಂದಿದ್ದರು.ರಾಜೀವ್ಗಾAಧಿ ಅವರಂತಹ ನಾಯಕರ ಅವಶ್ಯಕತೆ ಈ ದೇಶಕ್ಕೆ ಇದೆ ಎಂದರು.
ರಾಜ್ಯ ಸರಕಾರದ ಮೂರು ವರ್ಷದ ಸಾಧನೆಯ ಸೇವೆಗಳ ಸಮರ್ಪಣಾ ಸಂಭ್ರಮ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರಿಗೆ ಮತ್ತು ಸಹಕರಿಸಿದ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಡಾ.ರಫೀಕ್ಅಹಮದ್, ಸರಕಾರ ಈ ವರ್ಷದ ಅಂತ್ಯದೊಳಗೆ ಗ್ರೆಟರ್ ಬೆಂಗಳೂರು ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ.ಹಾಗಾಗಿ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಕಾರ್ಯಕರ್ತರು, ಮುಖಂಡರು ಸಿದ್ದರಾಗುವಂತೆ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ಅಹಮದ್ ಮಾತನಾಡಿ,ಸಂಪ್ರದಾಯಕ ರೀತಿಯಲ್ಲಿ ನಡೆಯುತ್ತಿದ್ದ ದೇಶದ ಆಡಳಿತಕ್ಕೆ ತಂತ್ರಜ್ಞಾನದ ಮೂಲಕ ಅಧುನಿಕತೆಯ ವೇಗ ನೀಡಿದವರು ದಿ.ರಾಜೀವ್ಗಾಂಧಿ ಅವರು,ಫೈಲೆಟ್ ವೃತ್ತಿಯಿಂದ ಅನಿವಾರ್ಯ ಪರಿಸ್ಥಿತಿಯಲ್ಲಿ ದೇಶದ ಚುಕ್ಕಾಣಿ ಹಿಡಿದು ಇಡೀ ಪ್ರಪಂಚವೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದರು ಸ್ಯಾಮ್ ಪಿತ್ರೋಡ್ ಅವರ ಮೂಲಕ ಕಂಪ್ಯೂಟರ್ ಪರಿಚಯಿಸಿ ಅಭಿವೃದ್ಧಿಯ ವೇಗವನ್ನು ಮತ್ತಷ್ಟು ಚುರುಕುಗೊಳಿಸಿದರು.ಎಷ್ಯಾ ಖಂಡದಲ್ಲಿಯೇ ಶಾಂತಿ ನೆಲಸಬೇಕು ಎಂಬ ಉದ್ದೇಶದಿಂದ ನ್ಯಾಷನಲ್ ಶಾಂತಿಪಾಲನಾ ಪಡೆಯನ್ನು ಸ್ಥಾಪಿಸಿ,ನೆರೆಯ ಶ್ರೀಲಂಕಾ ದೇಶಕ್ಕೆ ಕಂಟಕ ಪ್ರಾಯರಾಗಿದ್ದ ಎಲ್.ಟಿ.ಟಿ.ಇಯನ್ನು ಉಪಟಳಕ್ಕೆ ಕಡಿವಾಣ ಹಾಕಿದರು.ಆದರೆ ಇದೇ ಅವರಿಗೆ ಮುಳುವಾಗಿ, ಮಾನವ ಬಾಂಬ್ಗೆ ಬಲಿಯಾಗಿ ಹುತಾತ್ಮರಾದರು.ಈ ವಿಚಾರವನ್ನು ನಾವು ಜನತೆ ತಿಳಿಸಿ, ಬಿಜೆಪಿಯ ಜನವಿರೋಧಿ ನೀತಿಗಳನ್ನು ಖಂಡಿಸುವ ಕೆಲಸವನ್ನು ಮಾಡಬೇಕೆಂದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ,ಪಂಡಿತ ಜವಹರ್ ನೆಹರು, ಇಂದಿರಾಗಾಂಧಿ, ರಾಜೀವ್ಗಾಂಧಿ ಅವರುಗಳು ಈ ದೇಶಕ್ಕೆ ಭದ್ರ ಬುನಾದಿ ಹಾಕಿದವರು.ತಮ್ಮ ಜೀವದ ಹಂಗು ತೊರೆದು ಆಪರೇಷನ್ ಬ್ಲೂಸ್ಟಾರ್ ಹಾಗು ಶ್ರೀಲಂಕಕ್ಕೆ ಭಾರತದ ಶಾಂತಿ ಪಾಲನ ಪಡೆ ಕಳುಹಿಸಿ,ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕಿದ್ದರು.ಆದರೆ ಕಳೆದ ಎರಡು ವರ್ಷಗಳಿಂದ ಮಣಿಪುರ ಹೊತ್ತಿ ಉರಿದರೂ ಪ್ರಧಾನಿ ಭೇಟಿ ನೀಡಿಲ್ಲ.ತಿಂಗಳಿಗೊಂದು ವಿದೇಶಿ ಪ್ರವಾಸ ಮಾಡುವ ಪ್ರಧಾನಿಗೆ ಮಣಿಪುರಕ್ಕೆ ಹೋಗಲು ಸಮಯ ಇಲ್ಲ.ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಯುವಜನರಿಗೆ ಭವಿಷ್ಯ ಹಾಳಾಗಿದೆ. ಇದುವರೆಗೂ ಸೌಜನ್ಯಕ್ಕೂ ಬಾಯಿ ಬಿಟ್ಟಿಲ್ಲ. ಇಂತಹ ಪ್ರಧಾನಿಯಿಂದ ಜನರು ಏನನ್ನು ನಿರೀಕ್ಷಿಸಲು ಸಾಧ್ಯ.ಬಿಜೆಪಿಯ ಅಪಪ್ರಚಾರಗಳಿಗೆ ತಕ್ಕ ಉತ್ತರವಾಗಿ ಕಾರ್ಯಕರ್ತರು, ಮುಖಂಡರು ನೀಡಬೇಕಾಗಿದೆ.ಸರಕಾರದ ಮೂರು ವರ್ಷಗಳ ಸಾಧನೆಯ ಸಮಾವೇಶ ಯಶಸ್ವಿಗೊಳಿಸಿದ ಕಾರ್ಯಕರ್ತರಿಗೆ ಅಭಿನಂದನೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರಸ್ ಅಧ್ಯಕ್ಷರಾದ ಮಹೇಶ್, ಫಯಾಜ್,ಮುಖಂಡರಾದ ಪಂಚಾಕ್ಷರಯ್ಯ, ಷಣ್ಮುಗಪ್ಪ, ಸೈಯದ್ದಾದಾಪೀರ್,ಅನಿಲ್ಕುಮಾರ್,ಸಂಜೀವಕುಮಾರ್,ಹಾಲನೂರು ವಿರೇಶಕುಮಾರ್,ಕೈದಾಳ ರಮೇಶ್,ಜಿಲ್ಲಾ ವಕ್ತಾರರಾದ ಶ್ರೀಮತಿ ಕೆ.ಎಂ.ಸುಜಾತ,ಸುಮ, ಕೆಂಪರಾಜು, ಇರ್ಫಾನ್, ಶಿವಾಜಿ, ಕುಮಾರಸ್ವಾಮಿ, ಶಿವರಾಜು, ನ್ಯಾತೇಗೌಡ ಮತ್ತಿತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
