ಕೊರಟಗೆರೆ : ಬಡ ಜನರ ಆರೋಗ್ಯ ಸುಧಾರಣೆಗಾಗಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಸಮಾಜ ಸೇವಕ ಸದಾನಂದ ತಿಳಿಸಿದರು.
ನಗರದ ಕಾಳಿದಾಸ ಬಡವಾಣೆ ನಯಾಜ್ ನ್ಯಾಯಬೆಲೆ ಮುಂಭಾಗದಲ್ಲಿ ಸಮಾಜ ಸೇವಕ ಸದಾನಂದ ಮತ್ತು ನಯಾಜ್ ಆಹಮದ್ ಸಹಕಾರದಿಂದ ವೆಡ್ಸ್ ಎನ್ಜಿಒ ಸಂಸ್ಥೆ ಮತ್ತು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆ ವೈದ್ಯರ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೆಡ್ಸ್ ಎನ್ಜಿಒ ಸಂಸ್ಥೆ ಮತ್ತು ಕೊರಟಗೆರೆ ಸರ್ಕಾರಿ ಆಸ್ಪತ್ರೆ ವೈದ್ಯರ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯುತ್ತಿದೆ. ವೈದ್ಯರ ಪರೀಕ್ಷೆಯ ನಂತರ ನೀಡಿರುವ ಔಷಧಿಯನ್ನು ಸಮಯಕ್ಕೆ ಸರಿಯಾಗಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ರೋಗಿಗಳಿಗೆ ತಿಳಿಸಿದರು.
ಸಮಾಜ ಸೇವಕ ನಯಾಜ್ ಮಾತನಾಡಿ, ಕೊರಟಗೆರೆ ನಗರ ಪ್ರದೇಶದಲ್ಲಿ ಇಂದಿಗೂ ಕೂಲಿ ಕಾರ್ಮಿಕರು, ಬಡ ಜನರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ, ಅವರ ಆರೋಗ್ಯ ಸುಧಾರಣೆಗೆ ಅನುಕೂಲವಾಗಲೆಂದು ಆರೋಗ್ಯ ತಪಾಸಣೆ ಶಿಬಿರವನ್ನು ಪ್ರತಿವರ್ಷ ನಡೆಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.
ಈ ವೇಳೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪುರುಷೋತ್ತಮ್ ನಾಯಕ್ ಸೇರಿದಂತೆ ನಮ್ಮ ಕ್ಲಿನಿಕ್ ವೈದ್ಯರ ತಂಡ ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ.
