ತುಮಕೂರು: ಕ್ಯಾತಸಂದ್ರದ ನಿವಾಸಿ ಉತ್ತಮ ಸಂಘಟಕ, ಸಂಘಟಕ, ಸಂಘಟನಾ ಚತುರ, ಉತ್ತಮ ವಾಗ್ಮಿ, ಹಿಂದುತ್ವವಾದಿ ಹಾಗೂ ಭಗತ್ ಸೇನೆಯ ರಾಜ್ಯ ಅಧ್ಯಕ್ಷರಾದ ಕೃಷ್ಣ ಶಾನುಭೋಗ (48 ವರ್ಷ) ಮಂಗಳೂರಿನ ಸೇಂಟ್ ಮಿಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಕೆಲವು ವರ್ಷಗಳಿಂದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು ಅವರು ಕೆಲವು ದಿನಗಳಿಂದ ಕುಟುಂಬದೊಂದಿಗೆ ಧಾರ್ಮಿಕ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಹಠಾತ್ ಆರೋಗ್ಯದಲ್ಲಿ ಏರುಪೇರು ಆದಕಾರಣ ಅವರನ್ನ ಮಂಗಳೂರಿನ ಸೆಂಟ್ ಮಿಲ್ಲರ್ ಆಸ್ಪತ್ರೆಗೆ ಸೇರಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಮೃತರಿಗೆ ಅವರ ತಾಯಿ, ಪತ್ನಿ ವಕೀಲರಾದ ಭವ್ಯಕೃಷ್ಣಶಾನುಭೋಗ್, ಇಬ್ಬರು ಗಂಡುಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಸ್ನೇಹಿತರನ್ನ ಅಗಲಿದ್ದಾರೆ.
ನಗರದ ಗಾರ್ಡನ್ ರಸ್ತೆಯಲ್ಲಿರುವ ಚಿತಾಗಾರದಲ್ಲಿ ಬ್ರಾಹ್ಮಣ ಸಾಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳಲ್ಲಿ ಅಗ್ನಿ ಸ್ಪರ್ಶದೊಂದಿಗೆ ಅಂತ್ಯಕ್ರಿಯೆ ಇಂದು ನಡೆಯಿತು.
ಮೃತರ ನಿಧನಕ್ಕೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ,ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿಮಹೇಶ್,ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್,ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ,ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಹೆಬ್ಬಾಕರವಿಶಂಕರ್,ಕೇಂದ್ರಸಚಿವ ವಿ.ಸೋಮಣ್ಣ,ಮಾಜಿ ಶಾಸಕ ಡಾ||ಎಸ್.ರಫೀಕ್ ಅಹಮದ್,ಶ್ರೀ ಸಿದ್ಧಗಂಗಾ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ,ಬ್ರಾಹ್ಮಣ ಸಭಾ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು,ಪದಾಧಿಕಾರಿಗಳು ತೀವ್ರ ಶೋಕ ವ್ಯಕ್ತಪಡಿಸಿದರು.
– ಕೆ.ಬಿ.ಚಂದ್ರಚೂಡ
