ತುಮಕೂರು: ಜಿಲ್ಲಾಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ಅಹಮದ್ ಮಾತನಾಡಿ,ದೇಶದ ಸ್ವಾತಂತ್ರ, ಅಭಿವೃದ್ದಿಗೆ ತಮ್ಮ ತನು, ಮನ, ಧನ ಹಾಗೂ ಪ್ರಾಣವನ್ನು ಅರ್ಪಣೆ ಮಾಡಿದ ಕುಟುಂಬವೆಂದರೆ ಅದು ನೆಹರು ಮನೆತನ.ಅವರ ದೇಶ ಪ್ರೇಮವನ್ನು ಯಾರು ಅಲ್ಲಗಳೆಯಲು ಸಾಧ್ಯವಿಲ್ಲ.ಐಐಎಸ್ಸಿ, ಬಿಹೆಚ್ಇಎಲ್ ಸೇರಿದಂತೆ ನವರತ್ನ ಕಂಪನಿಗಳನ್ನು ಹುಟ್ಟು ಹಾಕಿ ದೇಶವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯದ ನೆಹರು ಅವರ ನಡೆ ವಿಶ್ವಕ್ಕೆ ಮಾದರಿ. ಇಂದು ಎಸ್.ಐ.ಆರ್. ಎಂಬ ಭೂತ ನಮ್ಮೆಲ್ಲರನ್ನು ಕಾಡುತ್ತಿದೆ.
ಪ್ರತಿ ಬೂತ್ನಲ್ಲಿಯೂ ನಾವು ಎಚ್ಚೆತ್ತಕೊಂಡು ಪ್ರತಿ ಮತದಾರರ ಹಕ್ಕನ್ನು ರಕ್ಷಿಸುವ ಕೆಲಸ ಆಗಬೇಕು. ಈಗಾಗಲೇ ಡಿಸಿಎಂ. ಸಿ.ಎಂ ನೇತೃತ್ವದಲ್ಲಿ ಸಭೆ ನಡೆದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು, ನಾವೆಲ್ಲರೂ ಸೈನಿಕರ ರೀತಿ ಕೆಲಸ ಮಾಡುವ ಮೂಲಕ ತಮ್ಮ ಹಕ್ಕಿನ ಜೊತೆಗೆ, ಇತರೆ ಮತದಾರರ ಹಕ್ಕನ್ನು ಕಾಪಾಡಬೇಕಿದೆ. ಶೀಘ್ರದಲ್ಲಿಯೇ ತುಮಕೂರಿನಲ್ಲಿ ಎಸ್.ಐ.ಆರ್.ಕುರಿತು ಕಾರ್ಯಾಗಾರ ನಡೆಯಲಿದ್ದು, ಎಲ್ಲಾ ಕಾರ್ಯಕರ್ತರು, ಮುಂಚೂಣಿ ಘಟಕಗಳ ಮುಖಂಡರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಿಸಿಸಿ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪಂಡಿತ ಜವಹರಲಾಲ್ ನೆಹರು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಾಜಿ ಶಾಸಕ ಡಾ.ಎಸ್.ಷಪಿ ಅಹಮದ್ ಮಾತನಾಡಿ,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮೊದಲು ಪಕ್ಷದ ಹುಟ್ಟಿ, ಬೆಳೆದು ಬಂದ ಇತಿಹಾಸವನ್ನು ಅರಿಯಬೇಕಾಗಿದೆ.ಕಾಂಗ್ರೆಸ್ ಬಡವರ ಪರವಾಗಿ ಇರುವ ಪಕ್ಷ.ಅಧಿಕಾರಕ್ಕೆ ಅಂಟಿಕೊಂಡ ಪಕ್ಷವಲ್ಲ. ಎಸ್.ಐ.ಆರ್. ಮೂಲಕ ಕಾಂಗ್ರೆಸ್ಪಕ್ಷದ ಸಂಪ್ರದಾಯಕ ಮತಗಳಿಗೆ ಕಡಿವಾಣ ಹಾಕಲು ಹೊರಟಿದೆ.ಎಚ್ಚೆತ್ತುಕೊಂಡು ಕೆಲಸ ಮಾಡದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.2026-2027- 2028 ಮತ್ತು 2028 ಚುನಾವಣಾ ವರ್ಷ. ಮೈಮರೆತರೇ ಪಕ್ಷ ಅಧಿಕಾರ ಬರುವುದು ಮರೀಚಿಕೆಯಾಗಲಿದೆ.ರಾಜ್ಯ ಗೃಹ ಸಚಿವರು ಆಗಿರುವ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕೆಂದು ತುಮಕೂರು ಜಿಲ್ಲಾ ಕಾಂಗ್ರೆಸ್ ನಿಂದ ನಿರ್ಣಯ ಮಾಡಿ ಎಐಸಿಸಿಗೆ ಕಳುಹಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಜಿ.ಚಂದ್ರಶೇಖರ್ಗೌಡ ಮಾತನಾಡಿ,ಭಾರತ ಪ್ರಗತಿಶೀಲ ರಾಷ್ಟವಾಗಲು ನೆಹರು ಹಾಕಿಕೊಟ್ಟ ಬುನಾಧಿಯೇಕಾರಣ.ತಮ್ಮ ಶಕ್ತಿ, ಸಾಮರ್ಥ್ಯವನ್ನುದೇಶಕ್ಕಾಗಿಧಾರೆಎರೆದವರು. ಇಂದುಎಸ್.ಐ.ಆರ್.ಮೂಲಕ ಇಡೀದೇಶಕ್ಕೆ ನುಸುಳುಕೋರರ ನೆಪದಲ್ಲಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳ ಮತಗಳನ್ನು ಕಸಿಯಲಾಗುತ್ತಿದೆ.ಕಾಂಗ್ರೆಸ್ನ 70 ವರ್ಷಗಳ ಆಡಳಿತದಲ್ಲಿ ಯಾರ ಹಕ್ಕನ್ನು ಕಸಿಯಲಿಲ್ಲ.ಆದರೆಅಧಿಕಾರದ ಆಸೆಗೆ ಜನರ ಹಕ್ಕು ಕಸಿಯಲು ಬಿಜೆಪಿ ಮುಂದಾಗಿದೆ. ಇದರ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಇರ್ಫಾನ್ಅಹಮದ್,ಕುಮಾರಸ್ವಾಮಿ, ಶಿವರಾಜು, ಉಮಾಶಂಕರ್, ಪಿ.ಶಿವಾಜಿ, ಮಂಜುನಾಥ್, ಸಂಜೀವಕುಮಾರ್, ಅಂಬರೀಷ್, ಸೈಯದ್ದಾದಾಪೀರ್, ಹದೀಬ್ ಅಹಮದ್, ಶ್ರೀನಿವಾಸಮೂರ್ತಿ, ಕೆಂಪಣ್ಣ, ಶಿವಪ್ರಸಾದ್,ಜಿಲ್ಲಾ ವಕ್ತಾರರು ಮತ್ತು ಪ್ರಧಾನ ಕಾರ್ಯದರ್ಶಿಗಳಾದಶ್ರೀಮತಿ ಕೆ.ಎಂ.ಸುಜಾತ,ಎಸ್.ಸಿ.ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಮುರಳೀಧರ್, ಲಕ್ಷ್ಮೀದೇವಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
