ತುಮಕೂರು:ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಕಾಲೇಜಿಗೆ ಸುಮಾರು 75ಸಾವಿರ ವೆಚ್ಚದಲ್ಲಿ ವಿದ್ಯಾರ್ಥಿಗಳಿಗಾಗಿ ಶುದ್ಧಕುಡಿಯುವ ನೀರಿನ ಘಟಕವನ್ನು ದೇಣಿಗೆಯಾಗಿ ನೀಡಿದ್ದಾರೆ.
ಇಂದು ನಡೆದ ಸರಳ ಸಮಾರಂಭದಲ್ಲಿ ಸಂಘದ ಅಧ್ಯಕ್ಷರು ಮತ್ತು ಪ್ರಾಂಶುಪಾಲರಾದ ಡಾ||ಟಿ.ಬಿ.ನಿಜಲಿಂಗಪ್ಪನವರು ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಾ ಹಿರಿಯ ವಿದ್ಯಾರ್ಥಿಗಳ ಸಂಘವು ಸುಮಾರು 21 ವರ್ಷಗಳಿಂದ ಕಾಲೇಜಿಗೆ,ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಗಲು ರಾತ್ರಿ ಶ್ರಮ ವಹಿಸಿ ದುಡಿಯುತ್ತಿದೆ,ಸಂಘದ ಪದಾಧಿಕಾರಿಗಳ ದೂರದೃಷ್ಠಿತ್ವದಿಂದ ಪ್ರತಿ ವಿದ್ಯಾರ್ಥಿಯು ಆರೋಗ್ಯವಂತನಾಗಿರಬೇಕು.

ಆರೋಗ್ಯವಂತ ಯುವಕ,ಯುವತಿಯರು ಈ ದೇಶದ ನಿಜವಾದ ಆಸ್ತಿ ಎಂಬುದನ್ನು ಮನಗಂಡು 150 ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಾಕಿಸಿದ್ದು ಇಂದು ಇದನ್ನು ಉದ್ಘಾಟಿಸಿದ್ದು ನನ್ನ ಮನಸ್ಸಿಗೆ ತುಂಬಾ ಸಂತೋಷವನ್ನುಂಟು ಮಾಡಿದೆ ಎಲ್ಲ ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಂಡು ನೀರನ್ನು ವ್ಯರ್ಥ ಮಾಡದೆ ನೀರಿನ ಘಟಕವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ಬಿ.ಎಸ್.ಸೂರ್ಯನಾರಾಯಣಗುಪ್ತ,ಜಿ.ಎಂ.ದಿನೇಶ್,ಶ್ರೀಮತಿ ಕೆ.ಎಸ್.ಇಂದ್ರಾಣಿ,ಖಜಾಂಚಿ ಶ್ರೀಮತಿ ಆಶಾ,ಚೇತನ್,ಕಾರ್ಯದರ್ಶಿ ಪ್ರೊ.ಕೆ.ಎಸ್.ಲಿಂಗದೇವರಪ್ಪ, ಕೆ.ಬಿ.ಚಂದ್ರಚೂಡ, ಹೊನ್ನುಡಿಕೆನಾಗೇಶ್,ಪ್ರೊ.ಸಿ.ಎಸ್.ಸೋಮಶೇಖರಯ್ಯ,ಡಾ||ಹೆಚ್.ಎಸ್.ನಿರಂಜನಾರಾಧ್ಯ, ಡಾ||ಕಿಶೋರ್.ಆರ್, ಮತ್ತಿತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
