ಕೆ.ಆರ್.ಪೇಟೆ: ಇಂದು ರಾಜ್ಯದ್ಯಂತ ಸರ್ಕಾರಿ ಶಾಲೆಗಳ 2025-26ನೇ ಸಾಲಿನ ಪ್ರಾರಂಭೋತ್ಸವದ ದಿನದ ಅಂಗವಾಗಿ ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮ ಸರ್ಕಾರಿ ಪ್ರಾಥಮಿಕ ಶಾಲೆ ಪ್ರಥಮ ದಿನ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷರು,ಗ್ರಾಮಸ್ಥರು ಹಾಗೂ ಶಿಕ್ಷಕರು ಸಂಭ್ರಮದಿಂದ ಹೂ ಹಾಗೂ ಸಿಹಿ ನೀಡಿ ಸ್ವಾಗತಿಸಿದರು.
ಶಾಲಾ ಮಕ್ಕಳನ ಸ್ವಾಗತಿಸಿ ಮಾತನಾಡಿದ ಗ್ರಾ.ಪಂ ಸದಸ್ಯ ಕತ್ತರಘಟ್ಟ ಪರಮೇಶ್ ನಮ್ಮ ಗ್ರಾಮ ಇತಿಹಾಸವುಳ್ಳ ಶಾಲೆಯಾದರೂ ಕೂಡ ಶಾಲೆಯ ಚಾವಣಿ ಸೋರುತ್ತಿತ್ತು,ಮಳೆಗೆ ಮಕ್ಕಳು ಬೆಂಚ್ ಬಿಟ್ಟು ಮೂಲೆಗೆ ನಿಲ್ಲುತ್ತಿದ್ದರು ಆ ನೋವು ನೋಡಿ ಟೊಂಕ ಕಟ್ಟಿ ನಿಂತವರು ನಮ್ಮ ಗ್ರಾಮದಲ್ಲಿ ಜನಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆಯ ಮುಖ್ಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕೆ.ಪಿ.ಶಿವಕುಮಾರ್ ಅವರು ಸುಮಾರು 1.45 ಕೋಟಿ ರೂ. ವೆಚ್ಚದಲ್ಲಿ ತಮ್ಮ ಜಯಮ್ಮ ಪುಟ್ಟೇಗೌಡ ತಾಯಿ ತಂದೆ ಹೆಸರಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸ ಕಟ್ಟಡ ನಿರ್ಮಿಸಿ ಕೊಟ್ಟಿದ್ದಾರೆ.ಉತ್ತಮ ಕಟ್ಟಡದ ಜೊತೆಗೆ ವಾಹನ ಸೌಲಭ್ಯ ಕಲ್ಪಿಸಿದ್ದರಿಂದ ಮಕ್ಕಳ ದಾಖಲಾತಿ ಗಣನೀಯವಾಗಿ ಹೆಚ್ಚಾಗಿದೆ. ಹಿಂದೆ ಖಾಸಗಿ ಶಾಲೆಗೆ ಹೋಗುತ್ತಿದ್ದ ಮಕ್ಕಳು ಈಗ ಸರ್ಕಾರಿ ಶಾಲೆಯತ್ತ ಮರಳುತ್ತಿದ್ದಾರೆ. ಅದರ ಜೊತೆ ಹಳೆ ವಿದ್ಯಾರ್ಥಿ ಹಾಗೂ ದಾನಿಗಳ ಸಹಕಾರದಿಂದ ನಮ್ಮ ಶಾಲೆಗಳಿಗೆ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಿಂದ ಬರುವ ದೂರದ ಮಕ್ಕಳ ಅನುಕೂಲಕ್ಕಾಗಿ ವಾಹನ ಸೌಲಭ್ಯವು ಕೈಗೊಂಡಿದ್ದೇವೆ.ಈಗ ಹೊಸ ಕಟ್ಟಡ -ವಾಹನ ಸೌಲಭ್ಯದಿಂದ ನಮ್ಮ ಭಾಗದ ಮಕ್ಕಳಿಗೆ ತುಂಬಾ ಅನುಕೂಲವಾಗಿದೆ ಹಿಂದೆ ನಮ್ಮ ಶಾಲೆಯಲ್ಲಿ 39 ಮಕ್ಕಳು ದಾಖಲಾಗಿದ್ದ ಆದರೆ ಈ ಬೃಹತ್ ಕಟ್ಟಡ ಖಾಸಗಿ ಶಾಲೆಗಳು ನಾಚುವಂತೆ ಸೌಲಭ್ಯಗಳನ್ನ ನೋಡಿ ಈಗ 145 ಮಕ್ಕಳು ದಾಖಲೆಯಲ್ಲಿ ಮಕ್ಕಳು ನಮ್ಮ ಗ್ರಾಮದ ಶಾಲೆಗೆ ದಾಖಲಾಗುತ್ತಿದ್ದಾರೆ. ನಮ್ಮ ಗ್ರಾಮದ ಶಿವಕುಮಾರ್ ರವರ ಶಿಕ್ಷಣ ಕ್ರಾಂತಿ ಸಹಕಾರ ಚಿಂತನೆ ರಾಜ್ಯಕ್ಕೆ ಮಾದರಿಯಾಗಿ ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ಬೆಳಕಾಗಿದ್ದಾರೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕುಮಾರ್ ಬಹುತೇಕ ಜನರು ಉನ್ನತ ಸ್ಥಾನದಲ್ಲಿದ್ದರೂ ಸ್ವಾರ್ಥದಿಂದ ಬದುಕುತ್ತಿದ್ದಾರೆ ಅಂತವರಿಗೆ ನಮ್ಮ ಗ್ರಾಮದ ಸರ್ಕಾರಿ ಅಧಿಕಾರಿ ಶಿವಕುಮಾರ್ ಮಾದರಿಯಾಗಿದ್ದಾರೆ ಶಿವಕುಮಾರ್ ಅವರು ತನ್ನ ಪರಿಶ್ರಮದಿಂದ ಉನ್ನತ ಮಟ್ಟದ ಅಧಿಕಾರಿಯಾಗಿದ್ದಾರೆ ಅವರ ಮಾದರಿಯಲ್ಲಿ ತನ್ನ ಹುಟ್ಟೂರಿನ ಯುವ ಪೀಳಿಗೆಗೆ ಭವಿಷ್ಯ ಹಾಗೂ ಸದೃಢ ಸಮಾಜಕ್ಕಾಗಿ ತಮ್ಮ ತಂದೆ ತಾಯಿ ಹೆಸರಿನಲ್ಲಿ ಸುಮಾರು ಒಂದುವರೆ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಿ ಉಳ್ಳವರಿಗೆ ಮಾದರಿಯಾಗುವುದರ ಜೊತೆಗೆ ಶಿಕ್ಷಣ ಕ್ರಾಂತಿಗೆ ಸಹಕಾರಿಯಾಗಿ ನಿಂತಿದ್ದಾರೆ. ಸುಚಿತ ಕಟ್ಟಡ ಜೊತೆಗೆ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಳ್ಳಿ ಹಳ್ಳಿಗೂ ಮಕ್ಕಳ ಕರೆದೊಯ್ಯಲು ವಾಹನ ವ್ಯವಸ್ಥೆಯನ್ನು ಶಾಲಾ ಹಳೆ ವಿದ್ಯಾರ್ಥಿ ಬಳಗ ಹಾಗೂ ದಾನಿಗಳ ಸಹಕಾರದಿಂದ ಖಾಸಗಿ ಶಾಲೆಯ ಸೌಲಭ್ಯಗಳನ್ನು ಒಳಗೊಂಡ ಮಾದರಿಯಲ್ಲೇ ನಮ್ಮ ಗ್ರಾಮದ ನಮ್ಮ ಸರ್ಕಾರಿ ಶಾಲೆಯ ಕಂಡ
ಪೋಷಕರು ಖಾಸಗಿ ಶಾಲೆಗೆ ಫೀಸ್ ಕಟ್ಟೋಕಾಗದೇ ಪರದಾಡ್ತಿದ್ದ ಪೋಷಕರಿಗೆ ದೊಡ್ಡ ವರ ಸಿಕ್ತು. ದಾಖಲಾತಿ ಹೆಚ್ಚಳವಾಗಿದೆ ಎಂದು ನಮ್ಮೂರಿನ ಸುಪುತ್ರ ಶಿವಕುಮಾರ್ ಅವರ ದೊಡ್ಡ ಸಹಕಾರಕ್ಕೆ ನಮ್ಮ ಗ್ರಾಮ ಸದಾ ಚಿರಋಣಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಪರಮೇಶ್,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಕುಮಾರ್ ಉಪಾಧ್ಯಕ್ಷ ಶ್ರೀನಿವಾಸ್,ಶಶಿಕಲಾ, ರೇಖಾ, ಶ್ರೀನಿವಾಸ್, ಯೋಗೇಶ್,ನಿವೃತ್ತ ಶಿಕ್ಷಕ ರಾಮದಾಸ್,ಗ್ರಾ.ಪಂ ಸದಸ್ಯರಾದ ಸರೋಜಮ್ಮ, ವಿಜಯಮ್ಮ,ನಿವೃತ್ತ ಶಿಕ್ಷಕ ತಮ್ಮಣ್ಣೆಗೌಡ, ಜಯರಾಮೇಗೌಡ,ಶಾಲಾ ಮುಖ್ಯ ಶಿಕ್ಷಕಿ ಬೆಟ್ಟಮ್ಮ, ಸಹ ಶಿಕ್ಷಕಾರದ ಮಂಜುನಾಥ್,ಭಾರತಿ,ರಾಗಿಣಿ ಸಂಗೀತ, ಪ್ರಿಯ,ಗ್ರಾಮ ಮುಖಂಡರಾದ ರಾಮಚಂದ್ರ, ರಾಮು, ಜಗದೀಶ್, ಸತೀಶ್,ಕಾಯಿ ಮಹೇಶ್, ಚಂದ್ರಶೇಖರ, ಚನ್ನಕೇಶವ,ಗಣೇಶ್ ಗೌಡ,ವಿಶ್ವನಾಥ್ ಚಂದ್ರಶೇಖರ,ಡೈರಿ ಕಾರ್ಯದರ್ಶಿ ಅಧ್ಯಕ್ಷರು,ಸದಸ್ಯರು,ಸೇರಿದಂತೆ ಮಕ್ಕಳ ಪೋಷಕರು ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
