ಶ್ರೀ ಧರ್ಮಸ್ಥಳ ಟ್ರಸ್ಟ್ ವತಿಯಿಂದ ಅವಳಿ ದಿನಾಚರಣೆ
ಕೆ.ಆರ್.ಪೇಟೆ ತಾಲ್ಲೂಕಿನ ವಿಠಲಪುರದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಶ್ರೀ ಕಿಕ್ಕೇರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸೇವಾ ಟ್ರಸ್ಟ್ ವತಿಯಿಂದ ವಿಶ್ವ ತಂಬಾಕು ವಿರೋಧಿ ದಿನ ಹಾಗೂ ವಿಶ್ವ ಪರಿಸರ ದಿನಾಚರಣೆಗಳನ್ನು ಒಂದೇ ವೇದಿಕೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಇಲಾಖೆಯ ಪರೀಕ್ಷಕ ಸತೀಶ್ ತಂಬಾಕು, ಸಿಗರೇಟ್,ಗುಟ್ಕಾ, ಪಾನ್ ಮಸಾಲ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡಿದರು.ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕಾಯಿಲೆ, ಹೃದಯಾಘಾತ – ಎಲ್ಲದಕ್ಕೂ ತಂಬಾಕುವೇ ಮೂಲ. ಒಂದು ಬಾರಿ ಚಟಕ್ಕೆ ಬಿದ್ದರೆ ಜೀವನವೇ ಹಾಳು. ಯುವ ವಯಸ್ಸಿನಲ್ಲೇ ಇದನ್ನು ಬಿಡಬೇಕು ಎಂದು ಎಚ್ಚರಿಸಿದರು.
ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್ ಕಾರ್ಯಕ್ರಮದಲ್ಲಿ ಟ್ರಸ್ಟ್ನ ಪದಾಧಿಕಾರಿಗಳು ಮಾತನಾಡಿ, “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಪ್ರದೇಶದ ಆರೋಗ್ಯ ಹಾಗೂ ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ತಂಬಾಕು ಮುಕ್ತ ಯುವ ಪೀಳಿಗೆ ಮತ್ತು ಹಸಿರು ಭಾರತ ನಿರ್ಮಾಣವೇ ನಮ್ಮ ಗುರಿ ಎಂದು ತಿಳಿಸಿದರು.
ಶ್ರೀ ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟಿ ಗಂಜಿಗೆರೆ ಮಹೇಶ್ ಮಾತನಾಡಿ ಧೂಮಪಾನ ಹಾಗೂ ತಂಬಾಕು ಮಾನವ ಕುಲಕ್ಕೆ ಮಾರಕವಾಗುತ್ತಿದೆ ಇಂತಹ ಮಾದಕ ವಸ್ತುಗಳಿಂದ ಯುವ ಜನತೆ ದೂರ ಉಳಿದು ಸದೃಢ ಸಮಾಜಕ್ಕೆ ಸಹಕಾರಿಯಾಗಿ ನಿಲ್ಲಬೇಕು.ಮರಗಳನ್ನು ಕಡಿಯುತ್ತಿದ್ದೇವೆ,ಆದರೆ ಉಸಿರಾಡಲು ಆಮ್ಲಜನಕ ಬೇಕು.ಅಂತರ್ಜಲ ಕುಸಿತ,ಮಳೆ ಕೊರತೆ, ಜಾಗತಿಕ ತಾಪಮಾನ ಏರಿಕೆಗೆ ನಾವೇ ಕಾರಣ.ಇಂದಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು ಪ್ರತಿ ವಿದ್ಯಾರ್ಥಿ ವರ್ಷಕ್ಕೆ ಒಂದು ಸಸಿ ನೆಟ್ಟು,ಅದನ್ನು ಮಗುವಿನಂತೆ ಬೆಳೆಸಬೇಕು. ವಿಠಲಪುರ ಗ್ರಾಮವನ್ನೇ ಮಾದರಿ ಹಸಿರು ಗ್ರಾಮವನ್ನಾಗಿ ಮಾಡುವ ಕನಸು ನಮ್ಮದು ಎಂದು ಕರೆ ನೀಡಿದರು.
ದುಶ್ಚಟಗಳಿಗೆ ಬಲಿಯಾಗುವುದಿಲ್ಲ ಎಂದು ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಕಿಕ್ಕೇರಿ ಶ್ರೀ ಧರ್ಮಸ್ಥಳ ತಾಲೂಕು ಯೋಜನಧಿಕಾರಿ ಶ್ರೀ ಶ್ರೀನಿವಾಸ್, ಕಸಬಾ ಮೇಲ್ವಿಚಾರಕಿ ಪವಿತ್ರ ಎಂ.ಎಸ್, ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ್, ಶಾಲೆಯ ಮುಖ್ಯ ಶಿಕ್ಷಕ ಶಂಕರ್,ತಾಲೂಕು ರೈತರ ಸಂಘದ ಅಧ್ಯಕ್ಷ ರೋಹಿತ್, ರಾಜ್ಯ ಕಾರ್ಯದರ್ಶಿ ಗೋವಿಂದರಾಜು,ಸೇವಾ ಪ್ರತಿನಿಧಿಗಳು ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
“ಮನು ಕೆ.ಆರ್. ಪೇಟೆ”
