ಝಾನ್ಜೀಜೇ ಪಟ್ಟಣ ಪ್ರಸಿದ್ದ ಪ್ರೇಕ್ಷಣೀಯ ಸ್ಥಳ. ಇಲ್ಲಿಯ ಮೂಲ ಜನಸಂಖ್ಯೆ ಹದಿನೈದು ಲಕ್ಷ. ತಿಂಗಳಲ್ಲಿ ಸುಮಾರು ಹದಿನೈದು ಲಕ್ಷ ಪ್ರವಾಸಿಗರು ಈ ಪಟ್ಟಣಕ್ಕೆ ಬಂದು ಹೋಗುತ್ತಾರೆ. ಈ ಪಟ್ಟಣವನ್ನು ನಗರದಂತೆ ನಿರ್ಮಿಸಿದ್ದಾರೆ. ಈ ಪ್ರದೇಶ ಮೂರು ಕಾರಣಕ್ಕೆ ಫೇಮಸ್. ಮೊದಲನೆಯದು door to heaven, floating mountains ಮತ್ತು ಗಾಜಿನ ಸೇತುವೆ. ಈ ಗಾಜಿನ ಸೇತುವೆಯನ್ನು ಅಲ್ಲಿಯ ಬಹು ದೊಡ್ಡ ಕಣಿವೆ (valley) ಗೆ ಕಟ್ಟಿದ್ದಾರೆ. ಈ ಸೇತುವೆಯು ಅರ್ಧ ಕಿಲೋಮೀಟರ್ಸ ಉದ್ದವಿದೆ. ಈ ಕಂದಕದ ಎತ್ತರ ಸುಮಾರು ಸಾವಿರ ಅಡಿ. ಈ ಗಾಜನ್ನು steel glass ಇಂದ ತಯಾರಿಸಿದ್ದಾರೆ. ಇದರ ಮೇಲೆ ಹತ್ತು ತಾರ್ ಕಾರುಗಳನ್ನು (Mahindra thar SUV) ಒಂದೇ ಸಮಯದಲ್ಲಿ ಓಡಿಸಬಹುದು.

ನಾವು ಈ ಸೇತುವೆಯ ಮೇಲೆ ಇದ್ದಾಗ ಸುಮಾರು ಮೂರು ಸಾವಿರ tourists ವೀಕ್ಷಣಗೆ ಬಂದಿದ್ದರು. ಮೊದಲು ನೆಡೆಯುವುದಕ್ಕೆ ಸ್ವಲ್ಪ ಭಯ ಆದರೂ ಕ್ಷಣದಲ್ಲಿ ನಡೆಯಲು ಧೈರ್ಯ ಬಂದುಬಿಡುತ್ತದೆ. ಈ ಕಣಿವೆಯ ಸುತ್ತಮುತ್ತಲು ರಮಣೀಯ ದೃಶ್ಯಗಳು ಇವೆ. Karst carvings, ಜಲಪಾತ, ದಟ್ಟ ಕಾಡು, ಹರಿಯುವ ನದಿ ಹೀಗೆ. ಈ ಸೇತುವಿಗೆ ಬರುವ ಮುನ್ನ ನಾವು ಕೇಬಲ್ ಕಾರ್ ಮೂಲಕ ಆರು ಕಿಲೋಮೀಟರ್ಸ ದೂರ ಪ್ರಯಾಣ ಮಾಡಿ ಬಂದೆವು. ಪ್ರಯಾಣಿಸುವ ವೇಲೆ ಕೆಳಗಿನ ದೃಶ್ಯಗಳು ರೋಮಾಂಚನ ಮತ್ತು ಕಣ್ಣಿಗೆ ಹಬ್ಬ. ಇಳಿಯುವಾಗಲು ಕೇಬಲ್ ಕಾರ್ ಇಂದಲೇ ಇಳಿಯಬೇಕು.


ಟಿಯನ್ಮನ್ ಪರ್ವತಗಳ ಶ್ರೇಣಿ ಅಪರೂಪದ ಶ್ರೇಣಿ. ಇಲ್ಲಿಯ ಒಂದು ಪರ್ವತದ ಮಧ್ಯಭಾಗ ಬಾಯಿ ಬಿಟ್ಟುಕೊಂಡಿದೆ. ಇದನ್ನು ಟಿಯನ್ಮನ್ ರಂಧ್ರ ಗುಹೆ ಎಂದು ಕರೆಯುತ್ತಾರೆ. ಇದರ ಎತ್ತರ ಸುಮಾರು ಐದುನೂರು ಅಡಿ, ಅಗಲ ಇನ್ನೂರು ಅಡಿ ಮತ್ತು ದಪ್ಪ ಮತ್ತೆ ಇನ್ನೂರು ಅಡಿ. ಈ ಕೇಂದ್ರ extreme ಸ್ಪೋರ್ಟ್ಸ್ ಗೆ ಹೇಳಿ ಮಾಡಿಸಿದಂತಾ ಜಾಗ. ಭೌಗೋಳಿಕವಾಗಿ ಆದ ಈ ರಂಧ್ರದ ಮಧ್ಯೆ ಎರೆಡು ಸ್ಪೋರ್ಟ್ಸ್ ಜಟ್ ವಿಮಾನಗಳನ್ನು ನುಸುಳಿಸಿದ್ದರು ಎಂದು ಅಲ್ಲಿಯ ಜನ ಹೇಳುತ್ತಾರೆ. ಈ ಸ್ವರ್ಗಾಪಿ ಬಾಗಿಲಿಗೆ ಬರಲು ಸುಮಾರು ಏಳು ಕಿಲೋಮೀಟರ್ಸ ಕೇಬಲ್ ಕಾರ್ ಪ್ರಯಾಣ ಮಾಡ ಬೇಕು. ಕೇಬಲ್ ಕಾರ್ ಲ್ಲಿ ಕೂತಾಗ ನಮಗೆ ಮೋಡದ ಮಧ್ಯದಲ್ಲಿ ಹಾದು ಹೋಗುತ್ತಿದ್ದೇವೆ ಎಂಬ ಅನುಭವ. ಅಂದು ಮೋಡ ಕವಿದು ಜಡಿ ಮಳೆ ಬರುತ್ತಿದ್ದರಿಂದ ನಮಗೆ ನಿರಾಸೆ ಆಯಿತು. ಆ ರಂಧ್ರದ ಗುಹೆ ಪೂರ್ತಿ ಮೋಡದಿಂದ ಕವಿದಿತ್ತು. ಆ ರಂಧ್ರ ಅಥವಾ ಸ್ವರ್ಗದ ಹೆಬ್ಬಾಗಿಲನ್ನು ಕ್ಲಿಯರ್ ಆಗಿ ಕಾಣುವುದರಿಂದ ವಂಚಿತರಾದೆವು. ನಾವು ಅಲ್ಲಿ ಇರೋವರಿಗೂ ಮೋಡ ಅಥವಾ ಮಿಸ್ಟ್ ಹರಿಯಲೇ ಇಲ್ಲ.

ಈ ಹೆಬ್ಬಾಗಿಲು ಸಮುದ್ರ ಮಟ್ಟಕ್ಕಿಂತ ಸುಮಾರು 4500 ಅಡಿ ಮೇಲೆ ಇದೆ. ಅ ಪರ್ವತದ ತಪ್ಪಲಿಗೆ (foot hills) ಬಂದ ನಾವು ಈ ರಂಧ್ರ ಗುಹೆಯ ಹತ್ತಿರ ಹೋಗಲು 999 (ಚೀನಿಯರ lucky ಸಂಖ್ಯೆ) ಮೆಟ್ಟಿಲು ಹತ್ತಬೇಕು ಇಲ್ಲಾ ಅಂದರೆ ಇನ್ನೂರು ಅಡಿ ಉದ್ದದ ಹನ್ನೆರೆಡು escalators ಹತ್ತಬೇಕು. ನಾವು ಈ ಮಾರ್ಗವನ್ನು ಆಯ್ಕೆ ಮಾಡಿ ಕೊಂಡೆವು. ಹತ್ತಿದ ಮೇಲೆ ಆ ರಂಧ್ರದ ಪಕ್ಕ wood deck ಇದೆ. ಸುಮಾರು ಎರೆಡು ಕಿಲೋಮೀಟರ್ಸ ನೆಡೆದರೂ ಈ ರಂಧ್ರದ margins ನಮಗೆ ಕಾಣಲಿಲ್ಲ. ನಮ್ಮ ಜೂತೆ ಅಂದು ಅದೃಷ್ಟ ಇರಲಿಲ್ಲ. ಕಾರಣ ಅಂದು ಅಲ್ಲಿ ಅತಿ ದಪ್ಪನೆಯ ಮೋಡ ಕವಿದಿತ್ತು. ನಾವು ಮತ್ತೊಂದು ಕಡೆ escalator ಇಂದ ಇಳಿದು ರಂಧ್ರದ ಸಮೀಪ ಬಂದೆವು. ಇಲ್ಲಿ ಈ ರಂಧ್ರದ ಸೊಬಗನ್ನು ಪೂರ್ಣ ನೋಡದಿದ್ದರು ತಿಳಿಯಾಗಿ ರಂಧ್ರ ಗುಹೆಯ ಅರ್ಧ ಭಾಗ ಮಾತ್ರ ಮೋಡದ ಮಧ್ಯೆ ಕಾಣಿಸಿತಿತ್ತು. ನಾವು ನೋಡಿದ ಪಕ್ಕದಲ್ಲೇ ಚಿಕ್ಕ ಸರೋವರ ಇದ್ದು ಆ ನೀರನ್ನು ನಮ್ಮ ತಲೆ ಮೇಲೆ ಪ್ರೋಕ್ಷಣೆ ಮಾಡಿಕೊಂಡೆವು. ಆ ಸರೋವರದ ನೀರನ್ನು ಅಲ್ಲಿಯವರು mystic (ದೈವಿಕ ಅಥವ ನಮಗೆ ಗಂಗೆ) ನೀರು ಎಂದು ಹೇಳುತ್ತಾರೆ. ನಾವು ಅಷ್ಟು ಹತ್ತಿರ ಹೋದರು ಆ ಸ್ವರ್ಗದ ಹೆಬ್ಬಾಗಿಲನ್ನು ಸರಿಯಾಗಿ ನೋಡಲು ಆಗಲಿಲ್ಲ ಎನ್ನುವುದೇ ನಮ್ಮನ್ನು ಈಗಲೂ ಕಾಡುತ್ತಿದೆ.

Sci fi ಚಿತ್ರ “ಅವತಾರ್” ಇಲ್ಲಿಯ hallelujah ಅಥವಾ praise God ಲೈಮ್ ಕಾರ್ಸ್ಟ ಪರ್ವತ ಮತ್ತು ಶಿಖರಗಳ ಶ್ರೇಣಿಗಳಿಂದ ಪ್ರೇರಣೆಗೊಂಡು ತಯಾರಾದ black buster ಇಂಗ್ಲಿಷ್ ಚಿತ್ರ. ಚಿತ್ರದ exo planet ದೃಶ್ಯಗಳಲ್ಲಿ ಕಂಡುಬರುವ ನಾಗರಿಕರು ಶಾಂತಿ ಮತ್ತು ಪೃಕೃತಿ ಪ್ರಿಯರು. ಈ ಚಿತ್ರದ ದೃಶ್ಯಾವಳಿ ಕಂಡಾಗ ಅಲ್ಲಿಯ ಶಿಖರ ಮತ್ತು ಪರ್ವತಗಳು ಕಾಲ್ಪನಿಕವಾಗಿ ತೇಲಾಡುತ್ತಿರುತ್ತವೆ. ಆದುದರಿಂದ ಈ ಪರ್ವತ ಪ್ರದೇಶವನ್ನು floating mountains ಎಂದು ಕರೆಯುತ್ತಾರೆ. ಮತ್ತೊಮ್ಮೆ ಈ ಶ್ರೇಣಿಯ foothill ಗೆ ತಲುಪಲು ಕೇಬಲ್ ಕಾರ್ ಹಿಡಿಯ ಬೇಕು. ಅಲ್ಲಿಯ ಜಗತ್ಪ್ರಸಿದ್ಧ “Bailong” out side ಗಾಜಿನ ಲಿಫ್ಟ್ ಹಿಡಿದು ತುಟ್ಟ ತುದಿಯ ವುಡ್ ಡೆಕ್ ತಲುಪಬೇಕು. ಈ ಲಿಫ್ಟ್ ಒಂದು ಸಾವಿರ ಅಡಿ ಎತ್ತರವಿದ್ದು ಒಂದೇ ನಿಮಿಷದಲ್ಲಿ ಮೇಲೆ ಏರುತ್ತದೆ. ಹತ್ತುವಾಗ ಪರ್ವತ ಶ್ರೇಣಿಯನ್ನು ವೀಕ್ಷಿಸಿದ ನಮಗೆ ಮೈ ರೋಮಾಂಚನ ಆದ ಅನುಭವ. ಈ ಪರ್ವತಗಳಿಗೆ ಅಂಟುಕೊಂಡಂತೆ ವುಡ್ ಡೆಕ್ ಮೇಲೆ ಎರಡು ಮೂರು ಕಿಲೋಮೀಟರ್ಸ ನಡೆಯಬೇಕು. ಅಲ್ಲಿ 2000 ದಿಂದ ಹಿಡಿದು 3000 ಅಡಿಗಳ ನೂರಾರು lime karst ನೆಟ್ಟನೆಯ ಶಿಖರಗಳನ್ನು ನೋಡಬಹುದು. ಇಡೀ ಶಿಖರಗಳ ಶ್ರೇಣಿ ಅರ್ಧ ಮೋಡಗಳಿಂದ ಮುಚ್ಚಿರುವುದನ್ನು ನೋಡಿದರೆ ಅ ಪರ್ವತಗಳು ಆಕಾಶದಲ್ಲಿ ತೇಲುತ್ತಿರುವ ಹಾಗೆ ನಮಗೆ ಭಾಸ ಆಗುತ್ತಿತ್ತು. ಇಲ್ಲೂ ಸಹ ನಮಗೆ ಮಳೆ ಬಿಡಲಿಲ್ಲ. ಸಣ್ಣದಾಗಿ ಬರುತ್ತಲೇ ಇತ್ತು. ನಾವು ಹಿಂದಿರುಗುವಾಗ ಮತ್ತೆ ಕೇಬಲ್ ಕಾರ್. ಇಳಿಸುವಾಗ ನಾವು ಆಕಾಶದಿಂದ ಮೋಡಗಳ ಮಧ್ಯದಲ್ಲಿ ಇಳಿದ ಹಾಗೆ ನಮಗೆ ಅನುಭವ ಆಯಿತು.



ಝೆನ್ಜೀಜೇ ಪಟ್ಟಣಕ್ಕೆ ಭಾರತದಿಂದ ಬರುವ ಪ್ರವಾಸಿಗರು ಕಡಿಮೆ. ಕಾರಣ ಈ ಪ್ರದೇಶದಲ್ಲಿ ಭಾರತೀಯ vegetarian ಮತ್ತು non vegetarian ಅಹಾರ ಸಿಗದೆ ಇರುವುದರಿಂದ. ಇಲ್ಲಿ ಯಾವುದೇ ಹೊರ ಫಲಕಗಳಲ್ಲಿ ಇಂಗ್ಲಿಷ್ ಕಾಣುವುದಿಲ್ಲ ಮತ್ತು ಯಾರು ಸಹ ಇಂಗ್ಲಿಷಿನಲ್ಲಿ ಮಾತನಾಡುವುದಿಲ್ಲ. ವೆಜ್ ಚೈನೀಸ್ ಆಹಾರ ಸಿಗುತ್ತದೆ. ಸೋಯಾ ಅಡಿಗೆ ಎಣ್ಣೆ ಮತ್ತು ಸಾಸ್ ನಿಂದ ತಯಾರಾದ ಬೇಯಿಸಿದ ಬದನೆ ಕಾಯಿ, ಹಾಗಲ ಕಾಯಿ, ಬ್ರಕೋಲಿ, ಮುಶ್ರೂಮ್ಸ ಹೀಗೆ. ಆದರೆ sticky rice ಸಿಗುತ್ತದೆ. ಅಲ್ಲಿಯ ಅಡಿಗೆ ಮನೆ ನೋಡಲು ಚೆಂದ ಮತ್ತು ಸ್ವಚ್ಚ. ನಾವು ಊಟ ಮಾಡುವ ಟೇಬಲ್ ತಿರುಗುವ ಟೇಬಲ್, ಒಂದೇ ಸಾರಿಗೆ ಎಂಟು ಜನ ಕೂರಬಹುದು.
ಮುಂದುವರಿಯುವುದು…

