ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ರಾಮನಹಳ್ಳಿಯ ಪ್ರಗತಿಪರ ರೈತರು, ರಂಗಭೂಮಿ ಕಲಾವಿದರು ಆದ ಶ್ರೀ ಪುಟ್ಟಸ್ವಾಮಿಗೌಡರಿಗೆ ಬೆಂಗಳೂರಿನ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ನೋಂ) ಇವರಿಗೆ ನಾಡಕೀರ್ತಿ ರಾಜ್ಯ ಪ್ರಶಸ್ತಿ ನೀಡಿ ಮೈಸೂರಿನಲ್ಲಿ ದಿನಾಂಕ 28-7-2026 ಭಾನುವಾರ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸನ್ಮಾನಿಸಲಾಗುವುದೆಂದು ಸಂಸ್ಥೆಯ ಆಯೋಜಕರು ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಇದರ ರಂಗಗೀತೆ ಗಾಯನ ರಂಗ ಸಂಗೀತ ವಿಭಾಗ ಹೊಳೆನರಸೀಪುರ ತಾಲೂಕಿನ ಸಂಚಾಲಕರಾದ ಶ್ರೀ ಪುಟ್ಟಸ್ವಾಮಿಗೌಡ್ರು, ಕಲಾವಿದರು,ಪ್ರಗತಿ ಪರ ರೈತರು, ಸಮಾಜ ಸೇವಕರು ಬಹುಮುಖಿ ಸಾಧನೆಯ ಇವರ ಸೇವೆ ಸಮಾಜಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಮಾಜಕ್ಕೆ ಲಭಿಸಲೆಂದು ಕರ್ನಾಟಕ ರಾಜ್ಯ ಬರಹ ಸಂಘ ರಾಜ್ಯಾಧ್ಯಕ್ಷರು, ಕಥೆಗಾರರು ಶ್ರೀ ಮಧು ನಾಯ್ಕ್ ಲಂಬಾಣಿ ಅವರು ಶುಭ ಹಾರೈಸಿದ್ದಾರೆ.
-ಗೋರುರು ಅನಂತರಾವ್
