ಕೊರಟಗೆರೆ ;- ಕೊರಟಗೆರೆ ಪಟ್ಟಣದ ಪ್ರಧಾಸ ರಸ್ತೆಯಲ್ಲಿ ಹೊಂದಿಕೊಂಡಿರುವ ಇತಿಹಾಸ ಪ್ರಸಿದ್ದ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಸೇರಿದ 1.12 ಎಕರೆ ಜಮೀನು ಇದ್ದು ಖಾಸಗಿ ವ್ಯಕ್ತಿಗಳು ಅದನ್ನು ಪರಬಾರೆ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಉಚ್ಚನ್ಯಾಯಾಲಯ ಅದೇಶ ಮಾಡಿದರೂ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ ಎಂದು ದೇವಾಲಯದ ಟ್ರಸ್ಟ್ನ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಚಂದ್ರಮೌಳೇಶ್ವರಸ್ವಾಮಿ ಗೂಪ್ ಆಫ್ ಟೆಂಪಲ್ ಟ್ರಸ್ಟ್ ಪಧಾದಿಕಾರಿಗಳು ದೇವಾಲಯದ ಅವರಣದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟ್ನ ಉಪಾಧ್ಯಕ್ಷ ನಿವೃತ್ತ ತಹಶೀಲ್ದಾರ್ ಕೆ.ಆರ್.ವಾಸುದೇವರಾಜು ಮಾತನಾಡಿ ಇತಿಹಾಸ ಪ್ರಸಿದ್ದ ದೇವಾಲಯವಾದ ಚಂದ್ರಮೌಳೇಶ್ವರ ದೇವಾಲಯಕ್ಕೆ ಸುಮಾರು 1800 ವರ್ಷಗಳ ಇತಿಹಾಸವಿದ್ದು ಈ ದೇವಾಲಯಕ್ಕೆ ಸೇರಿದ 1.12 ಎಕರೆ ಜಮೀನು ಇದ್ದು ಸಾರ್ವಜನಿಕರು, ಭಕ್ತಾಧಿಗಳು ಅನೇಕ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಸಿಕೊಂಡು ಬರುತ್ತಿದ್ದು 1970 ರಲ್ಲಿ ದೇವಾಲಯದ ಜಮೀನಿನ ಮೇಲೆ ಕೆಟ್ಟ ಕಣ್ಣು ಬಿದ್ದು ದೇವಾಲಯಕ್ಕೆ ಸೇರಿದ ಜಮೀನಿನನ್ನು ನಕಲಿ ದಾಖಲೆಗಳನ್ನು ಸೃಷ್ಠಿಮಾಡಿ ಅನದಿಕೃತವಾಗಿ ಖಾತೆ ಮಾಡಿಸಿಕೊಂಡು ಪರಬಾರೆ ಮಾಡಿರುತ್ತಾರೆ, ಈ ಬಗ್ಗೆ ದೇವಾಲಯದ ಜಮೀನು ಉಳಿಸಿ ದೇವಾಲಯದ ಅಭಿವೃದ್ದಿಗೆ ಮುಂದಾದ ಟ್ರಸ್ಟ್ನ ಪದಾದಿಗಳು ಮತ್ತು ಊರಿನ ಹಿರಿಯರು ದೇವಾಲಯಕ್ಕೆ ಸೇರಿದ ಜಮೀನು ದೇವಾಲಯಕ್ಕೆ ಉಳಿಸುವ ದೃಷ್ಠಿಯಿಂದ ಜಿಲ್ಲಾ ನ್ಯಾಯಾಲಯದಲ್ಲಿ ಅನಧಿಕೃತ ಖಾತೆ ರದ್ದು ಮಡುವಂತೆ ದಾವೆ ಹೊಡಿದ್ದು ನ್ಯಾಯಾಲಯ ಅನಧಿಕೃತ ಖಾತೆ ರದ್ದುಮಾಡುವಂತೆ ಹಾಗೂ ಜಮೀನು ದೇವಾಲಯಕ್ಕೆ ಸೇರಿದ್ದು ಎಂದು ಆದೇಶ ಮಾಡಿದ್ದುರೂ ಸಹ ಪರಬಾರೆ ಮಾಡಿದ ವ್ಯಕ್ತಿಗಳು ಆದೇಶದ ವಿರುದ್ದ ಉಚ್ಚ ನ್ಯಾಯಾಲಯಕ್ಕೆ ಹೋಗುತ್ತಾರೆ ಉಚ್ಚ ನ್ಯಾಯಾಲಯವು ಸಹ ಪರಿಶೀಲಿಸಿ ಜಮೀನು ದೇವಾಲಯದ ಟ್ರಸ್ಟ್ಗೆ ಸೇರಿದ್ದು ಎಂದು ದೇವಾಲಯದ ಅಭಿವೃಧ್ದಿಗೆ 13 ಮಂದಿ ಟ್ರಸ್ಟಿಗಳನ್ನು ನೇಮಕ ಮಾಡಿ ಆದೇಶ ಮಾಡಿ ಜಿಲ್ಲಾಧಿಕಾರಿಗಳು ಅನಧಿಕೃತ ಖಾತೆ ದಾರರನ್ನು ತರೆವು ಗೊಳಿಸಿ ಎಂದು ಆದೇಶ ಮಾಡುತ್ತದೆ ಅದರೆ ಆಗಿನ ಜಿಲ್ಲಾಧಿಕಾರಿಗಳು ಯಾವ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಒಳಗಾಗಿ ತೆರವು ಕಾರ್ಯ ಮಾಡಲೇಇಲ್ಲ ಎಂದರು.
ನ್ಯಾಯಾಲಯ ನೇಮಕ ಮಾಡಿದ 13 ಮಂದಿ ದೇವಾಲಯದ ಟ್ರಸ್ಟ್ನ ಪಧಾಧಿಕಾರಿಗಳು ನ್ಯಾಯಾಲಯದ ಅದೇಶದಂತೆ ದೇವಾಲಯದ ಜಮೀನಿನಲ್ಲಿ ಅನಧಿಕೃತ ವಾಗಿ ನಡೆಯುತ್ತಿರುವ ಸಾ ಮೀಲ್ ಮತ್ತು ಅಗಂಡಿಗೆ ವಿದ್ಯುತ್ ಸರಬರಾಜು ಮತ್ತು ಸಾ ಮಿಲ್ಗೆ ನೀಡಿರುವ ಪರವಾನಗಿ ರದ್ದು ಮಾಡುವಂತೆ ಬೆಸ್ಕಾಂ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಯಾವುದೇ ಕ್ರಮ ಕೈಗೊಳ್ಳದೆ ಉಚ್ಚ ನ್ಯಾಯಾಲಯದ ಅದೇಶವನ್ನು ಉಲ್ಲಂಘನೆಮಾಡಿದ್ದಾರೆ ಎಂದು ತಿಳಿಸಿದ ಅವರು ನ್ಯಾಯಲಯ 12 ಮಂದಿ ಟ್ರಸ್ಟ್ ಪಧಾದಿಕಾಗಳಲ್ಲಿ ಉಪವಿಭಾಗಾಧಿಕಾರಿ ಗಳನ್ನು ಒಬ್ಬ ಬಟ್ ಟ್ರಸ್ಟ್ಯನ್ನಾಗಿ ನೇಮಕ ಮಾಡಿದರೂ ದೇವಾಲಯದ ಜಮೀನಿನಲಿರುವ ಸಾ ಮಿಲ್ ತೆರವು ಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದ ಅವರು ದೇವಾಲಯದ ಆಸ್ತಿ ರಕ್ಷಣೆಗೆ ಬಾರದೆ ಯಾವ ಪ್ರಭಾವಿ ವ್ಯಕ್ತಿಯ ಅಡ್ಡಿ ಪಡಿಸುವ ವ್ಯಕ್ತಿಗಳು ಇದ್ದಾರೆ ಎಂಬುದು ಪ್ರಶ್ನೆಯಾಗಿದೆ ಎಂದು ತಿಳಿಸಿದ ಅವರು ನ್ಯಾಯಾಲಯದ ಅದೇಶದಂತೆ ದೇವಾಲಯದ ಅಭಿವೃದ್ದಿಗೆ ಈಗಲಾದರೂ ಸಂಬಂದಿಸಿದ ಅಧಿಕಾರಿಗಳು ಅನಧಿಕೃತ ವ್ಯಕ್ತಿಗಳನ್ನು ತೆರವುಗೊಳಿಸಿ ದೇವಾಲಯದ ಜಮೀನು ಉಳಿಸಲು ಮುಂದಾಗುವರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟ್ನ ಅಧ್ಯಕ್ಷ ಹೆಚ್.ವೀರಣ್ಣ, ಕೆ.ಎನ್.ರಮೇಶ್, ಉಮಾದೇವಿ, ದಾಕ್ಷಾಯಿಣಿದೇವಿ, ಕೆ,ಎನ್,ಪ್ರಭಾಕರ್, ಆರ್.ಪದ್ಮನಾಭನ್, ಸೀತಾಲಕ್ಷ್ಮಿ, ಕೆ.ಜೆ.ಚಂದ್ರಕಲಾಲಕ್ಷ್ಮಿ, ಕೆ.ಆರ್.ವಾಸುದೇವರಾಜು, ಕೆ.ಎಸ್.ರಾಧಾಕೃಷ್ಣ, ಪುನೀತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ
