ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕುಂದನಹಳ್ಳಿ ಬೈರಯ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷೆ ಲಲಿತಮ್ಮ ಸಣ್ಣಯ್ಯ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕುಂದನಹಳ್ಳಿ ಬೈರಯ್ಯ ಅವರೊಬ್ಬರೇ ನಾಮಪತ್ರ ಸಲ್ಲಿಕ್ಕೆ ಯಾಗದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿ ಪಿ.ಡಿ.ಓ ಶೈಲಜಾ ನೂತನ ಅಧ್ಯಕ್ಷ ಬೈರಯ್ಯ ಅವಿರೋಧವಾಗಿ ಆಯ್ಕೆನ್ನು ಘೋಷಿಸಿದರು.
ನೂತನ ಅಧ್ಯಕ್ಷ ಬೈರಯ್ಯ ಮಾತನಾಡಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿ ವಿಶ್ವಾಸ ತೋರಿದ ನನ್ನ ಯಲ್ಲ ಸರ್ವ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ನಾನು ಚಿರಋಣಿ. ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಮದ ಮೂಲಭೂತ ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ, ಬೀದಿ ದೀಪ, ಚರಂಡಿ ವ್ಯವಸ್ಥೆ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ. ಸರ್ಕಾರದ ಎಲ್ಲಾ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ನನ್ನದು ಎಂದು ನೂತನ ಅಧ್ಯಕ್ಷ ಕುಂದನಹಳ್ಳಿ ಬೈರಯ್ಯ ತಿಳಿಸಿದರು.
ಆಯ್ಕೆಯ ವಿಷಯ ತಿಳಿಯುತ್ತಿದ್ದಂತೆ ಬೆಂಬಲಿಗರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಜ್ಯೋತಿ ಹರೀಶ್,ಮಂಜೇಗೌಡ ಎಂ.ಆರ್ ಮಂಜೇಗೌಡ,ಕಾಯಿ ಮಂಜುನಾಥ,ಯೋಗೇಶ್,ಕರೋಟಿ ಅನಿಲ್,ವರಪ್ರತಾಪ್ ,ಸುಜಾತಾ,ವಿ.ಡಿ ಮಂಜುನಾಥ ಲಲಿತಮ್ಮ ಸಣ್ಣಯ್ಯ,ಸವಿತಮ್ಮ ರಾಮೇಗೌಡ,ಕುಮಾರ್ ಆರ್ ,ಸಾಕಮ್ಮ,ವೀಣಾ ಅಶೋಕ್,ಶೀಲಾ,ಜೆಡಿಎಸ್ ಮುಖಂಡರಾದ ಅಲೋಕ್ ,ಚೆಲುವರಾಜು ಹೆಗ್ಗಡಹಳ್ಳಿ,ಮಂಜು ಕೋಳಿ,ವೆಂಕಟೇಶ್,ಕುಂದನಹಳ್ಳಿ ನಂಜಯ್ಯ,ಉಪಸ್ಥಿತರಿದ್ದರು.
