ತುಮಕೂರು : ಭೂಮಿಯ ಫಲವತ್ತತೆ ಕಾಪಾಡಲು ಕ್ರಿಮಿನಾಶಕ ಮತ್ತು ರಸಗೊಬ್ಬರಗಳ ಬಳಕೆ ಬದಲು ಸಾವಯವಗೊಬ್ಬರ ಬಳಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಕೃಷಿ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಟ್ಟು ಪರಿಸರಸ್ನೇಹಿ, ಸಾಂಪ್ರದಾಯಕ ಕೃಷಿ ಪದ್ಧತಿ ಅನುಸರಿಸಲು ಪ್ರೋತ್ಸಾಹಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಲಹೆ ಮಾಡಿದರು.
ನರೇಂದ್ರ ಮೋದಿಯವರು ಪ್ರಧಾನಿಯಾಗಿ 12 ವರ್ಷ ಪೂರೈಸಿದ್ದರ ಹಿನ್ನೆಲೆಯಲ್ಲಿ ತಾಲ್ಲೂಕಿನ ಹಿರೇಹಳ್ಳಿಯ ಕೃಷಿ ವಿಜ್ಞಾನಕೇಂದ್ರದಲ್ಲಿ ಬುಧವಾರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಹಮ್ಮಿಕೊಂಡಿದ್ದ ಖೇತ್ ಬಚಾವೋ ಅಭಿಯಾನ್ ಕಾರ್ಯಕ್ರಮದಲ್ಲಿ ನೈಸರ್ಗಿಕ ಕೃಷಿ ಉತ್ತೇಜಿಸುವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಶಾಸಕರು, ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುವುದನ್ನು ತಪ್ಪಿಸಲು ರೈತರು ನೈಸರ್ಗಿಕ ಕೃಷಿ ಪದ್ದತಿ ಆನುಸರಿಸಬೇಕು. ಸಾವಯವ ಕೃಷಿ ಪ್ರೋತ್ಸಾಹಿಸಲು ನರೇಂದ್ರ ಮೋದಿಯವರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆತಂದಿದೆ.ರೈತರು ಯೋಜನೆಗಳ ಪ್ರಯೋಜನ ಪಡೆದುದೇಶದಆಹಾರಧಾನ್ಯಉತ್ಪಾದನೆ ಹೆಚ್ಚಾಗಲು ಕೈ ಜೋಡಿಸಬೇಕುಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಪ್ರಧಾನಮಂತ್ರಿ ಮೋದಿಯವರ ಮಹತ್ವಾಕಾಂಕ್ಷೆಯ ನೈಸರ್ಗಿಕ ಕೃಷಿ ಪದ್ದತಿ ಅನುಸರಿಸಿ ಭೂಮಿಯ ಫಲವತ್ತತೆಯನ್ನು ರಕ್ಷಣೆ ಮಾಡಬೇಕು.ರೈತ ಮೋರ್ಚಾ ಮುಖಂಡರು, ಕಾರ್ಯಕರ್ತರು ರೈತರಲ್ಲಿ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಮೋರ್ಚಾ ಕಾರ್ಯಕರ್ತರೇ ನೈಸರ್ಗಿಕ ಕೃಷಿ ಅನುಸರಿಸಿ ರೈತರಿಗೆ ಪ್ರೇರಣೆಯಾಗಬೇಕು ಎಂದರು.
ರಸಗೊಬ್ಬರಗಳ ಬದಲು ಕೊಟ್ಟಿಗೆಗೊಬ್ಬರ, ಹಸಿರು ಗೊಬ್ಬರ, ಜೀವಾಮೃತ ಬಳಕೆಯನ್ನು ಹೆಚ್ಚು ಮಾಡಬೇಕು.ಆರಂಭದಲ್ಲಿ ಇಳುವರಿ ಕಡಿಮೆಯಾದರೂ ಭೂಮಿಯ ಫಲವತ್ತತೆ ಹೆಚ್ಚಾದಂತೆ ಇಳುವರಿಯೂ ಹೆಚ್ಚುತ್ತದೆ.ಎಲ್ಲಾ ಮಂಡಲಗಳಲ್ಲಿ, ನೈಸರ್ಗಿಕ ತೋಟಗಳಲ್ಲಿ ರೈತ ಮೋರ್ಚಾದಿಂದ ರೈತರ ಸಭೆಗಳನ್ನು ಆಯೋಜಿಸಿ ಪ್ರಚಾರ ಮಾಡಬೇಕುಎಂದು ಹೇಳಿದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಡಾ.ಎನ್. ಯೋಗಾನಂದನ್, ಡಾ.ದಿವಾಕರ್, ವೈ.ಹೆಚ್. ಹುಚ್ಚಯ್ಯ, ಶ್ರೀಮತಿ ಶಿವರತ್ನ, ಮತ್ತಿತರರು ಭಾಗವಹಿಸಿದ್ದರು.
