ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ಜಿಲ್ಲಾ ಘಟಕಕ್ಕೆ ಸಂಘಟನೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಟ್ರಸ್ಟಿಗಳ ಸಭೆಯಲ್ಲಿ ಚರ್ಚಿಸಿ ಜಿಲ್ಲಾ ಘಟಕದ ಉಪಾಧ್ಯಕ್ಷರನ್ನಾಗಿ ಸಂಘಟಕ, ಕವಿ ಆರ್.ಬಿ. ರಂಗನಾಥ್ ಅರಕಲಗೂಡು ಹಾಗೂ ಸಂಘಟಕಿ, ಕವಯಿತ್ರಿ, ಸಾಮಾಜಿಕ ಹೋರಾಟಗಾರ್ತಿ ಎಚ್.ಎಸ್. ಭಾನುಮತಿ, ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ಪ್ರತಿಭಾ ಸುದರ್ಶನ್ ಹಾಗೂ ಕೋಶಾಧ್ಯಕ್ಷರನ್ನಾಗಿ ಸಂಘಟಕ, ಆರಕ್ಷಕರಾದ ನವೀನ ಎಸ್.ಬಿ., ನಿರ್ದೇಶಕಿಯಾಗಿ ಸಂಘಟಕಿ ರೂಪ ವೈ. ಅವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
