ಕೊರಟಗೆರೆ: ಕೊಡಗದಾಲದ ಕಾಂತರಾಜುಗೆ ‘ಮಡಿವಾಳ ಮಾಚಿದೇವ ಶ್ರೀ ಪ್ರಶಸ್ತಿ’ ಪ್ರದಾನ- ಬೆಟ್ಟದಹಳ್ಳಿ ಗವಿಮಠದಲ್ಲಿ ಶ್ರೀಗಳ ಸಮ್ಮುಖದಲ್ಲಿ ಸನ್ಮಾನ
ಕೊರಟಗೆರೆ:-ವಿಧಾನ ಸಭಾ ಕ್ಷೇತ್ರದ ಕೊಡಗದಾಲ ಗ್ರಾಮದ ಶ್ರೀ ಮಹಾಮುನೇಶ್ವರಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಹಾಗೂ ತಾಲ್ಲೂಕು ಯುವ ಮಡಿವಾಳ ವೇದಿಕೆ ಅಧ್ಯಕ್ಷ ಶ್ರೀ ಲಕ್ಷ್ಮೀಕಾಂತ ಡಿ. ಕಾಂತರಾಜು (ರಾಜಹುಲಿ) ಅವರಿಗೆ ಪ್ರತಿಷ್ಠಿತ ‘ಮಡಿವಾಳ ಮಾಚಿದೇವ ಶ್ರೀ ಪ್ರಶಸ್ತಿ’ಯನ್ನು ಬೆಟ್ಟದಹಳ್ಳಿಯ ಗವಿಮಠದಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಗವಿಮಠದ ಶ್ರೀ ಶ್ರೀ ಶ್ರೀ ಚಂದ್ರಶೇಖರ್ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಅಲ್ಲಮ ಶ್ರೀ ಶರಣ ಶ್ರೀ ಮತ್ತು ಮಡಿವಾಳ ಮಾಚಿದೇವ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಸ್ವಾಮೀಜಿಗಳು ಕಾಂತರಾಜು ಅವರಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಿದರು.
ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಕಾಂತರಾಜು ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಯುವ ಮಡಿವಾಳ ವೇದಿಕೆಯ ಮೂಲಕ ಸಮುದಾಯದ ಸಂಘಟನೆ, ಯುವಕರನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿರುವ ಅವರ ಕಾರ್ಯ ಶ್ಲಾಘನೀಯವಾಗಿದೆ. ಈ ಸಂದರ್ಭದಲ್ಲಿ ಯುವ ಮಡಿವಾಳ ವೇದಿಕೆವತಿಯಿಂದ ಸನ್ಮಾನಿಸಿ ಗೌರವಿಸಾಲಾಯಿತು.

ಸಮಾರಂಭದಲ್ಲಿ ಸಮಾಜ ಸೇವಕ ಡಿ.ವಿ. ಶಿವಾನಂದ್, ಉಪನ್ಯಾಸಕ ಜಿ.ವಿ. ಮಂಜುನಾಥ್, ಶರಣೆ ಮಂಜುಳಕುಮಾರಿ ಸೇರಿದಂತೆ ಹಲವು ಗಣ್ಯರು, ಮಡಿವಾಳ ಸಮಾಜದ ಮುಖಂಡರು, ಭಕ್ತಾದಿಗಳು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ.
