ಚನ್ನರಾಯಪಟ್ಟಣ: ತಾಲೂಕಿನ ಪತ್ರಕರ್ತರಾದ ಐ.ಕೆ. ಮಂಜುನಾಥ್ ಹಾಗೂ ಎ.ವೈ. ಸರಿತಾ ಅವರ ಪುತ್ರ, ಚನ್ನರಾಯಪಟ್ಟಣದ ಶ್ರೀ ವಿವೇಕಾನಂದ ಅಂತರಾಷ್ಟ್ರೀಯ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಮಾಸ್ಟರ್ ಸಿದ್ದಾರ್ಥ್ ಎಂ. ಚಕ್ರವರ್ತಿ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕೃಷ್ಣರಾಜಪೇಟೆಯಲ್ಲಿ ನಡೆದ ರಾಜ್ಯ ಮಟ್ಟದ ಕಾವೇರಿ ಓಪನ್ ಕರಾಟೆ ಚಾಂಪಿಯನ್ಶಿಪ್–2026ರಲ್ಲಿ ಭಾಗವಹಿಸಿದ್ದ ಸಿದ್ದಾರ್ಥ್ ಎಂ. ಚಕ್ರವರ್ತಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಈ ಮೂಲಕ ತಮ್ಮ ಕರಾಟೆ ಗುರುಗಳಾದ ಮಾಲತೇಶ್, ತಾವು ವಿದ್ಯಾಭ್ಯಾಸ ಮಾಡುತ್ತಿರುವ ಶ್ರೀ ವಿವೇಕಾನಂದ ಅಂತರಾಷ್ಟ್ರೀಯ ಶಾಲೆ ಹಾಗೂ ಪೋಷಕರಾದ ಎ.ವೈ. ಸರಿತಾ ಮತ್ತು ಐ.ಕೆ. ಮಂಜುನಾಥ್ ಅವರಿಗೆ ಕೀರ್ತಿ ತಂದಿದ್ದಾರೆ.
ಸಿದ್ದಾರ್ಥ್ ಅವರ ಸಾಧನೆಗೆ ಶ್ರೀ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ರಾಜ್ಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಿದ್ದಾರ್ಥ್ ಅವರ ಕರಾಟೆ ಪ್ರತಿಭೆಗೆ ಸಾರ್ವಜನಿಕ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
* ಮಂಜುನಾಥ್ ಐ.ಕೆ
