ಕೆ.ಆರ್.ಪೇಟೆ: ಹಾಲಿನ ಗುಣಮಟ್ಟ ಹೆಚ್ಚಿಸುವ ಜವಾಬ್ದಾರಿ ರೈತರದ್ದಾಗಿದೆ. ಹಾಲು ಉತ್ಪಾದಕರು ಡೈರಿಗಳಿಗೆ ಹಾಕುವ ಹಾಲಿನ ಗುಣಮಟ್ಟ ಉತ್ತಮವಾಗಿ ಇದ್ದಲ್ಲಿ, ಉತ್ಪಾದಕರಿಗೆ ಉತ್ತಮ ಬೆಲೆ ಸಿಗುತ್ತದೆ ಎಂದು ಮನ್ಮುಲ್ ನಿರ್ದೇಶಕರಾದ ಡಾಲು ರವಿ ಹೇಳಿದರು.
ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಗುಡುಗನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ನೂತನ ಕಟ್ಟಡ ಉದ್ಘಾಟಿಸಿ ಹಾಗೂ ಹೆಮ್ಮನಹಳ್ಳಿ 2025-26ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಕುರಿತು ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಹಾಗೂ ಗ್ರಾಮದ ಹಿರಿಯರ ಮಾರ್ಗದರ್ಶನದಲ್ಲಿ ಹೆಮ್ಮನಹಳ್ಳಿ ಗ್ರಾಮದಲ್ಲಿ ನೂತನ ವಿಶಾಲ ಸುಂದರ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಗೊಂಡಿದೆ. ಇದನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು,ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಹಾಕಿದರೆ ಮಾತ್ರ ಸಂಘ ಮತ್ತು ಉತ್ಪಾದಕರ ಆದಾಯ ಹೆಚ್ಚುವುದರ ಜೊತೆಗೆ ಸಂಘಕ್ಕು ಒಳ್ಳೆಯ ಹೆಸರು ಬರುತ್ತದೆ.

ಆ ನಿಟ್ಟಿನಲ್ಲಿ ಸಂಘ ಸ್ಥಾಪಿತಗೊಂಡು ಎಂಟು ವರ್ಷದ ಒಳಗೆ ಸಂಘದ ಹಣಕಾಸು ವಿಚಾರದಲ್ಲಿ ಪಾರದರ್ಶಕವಾಗಿ ನಡೆದುಕೊಂಡು ಗುಣಮಟ್ಟದ ಹಾಲು ಕೂಡ ಸರಬರಾಜು ಮಾಡುತ್ತಿದೆ ಮತ್ತಷ್ಟು ಗುಣಮಟ್ಟದ ಹಾಲನ್ನು ಹಾಕುವುದಕ್ಕೆ ಹಸುಗಳ ಆರೋಗ್ಯ ಮುಖ್ಯವಾಗಿರುತ್ತದೆ.ತಾಲೂಕಿನಲ್ಲಿ ಅತಿ ಹೆಚ್ಚು ರೈತರು ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವುದರಿಂದ ನಮ್ಮ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿ ಇದೆ ಎಂದರು.

ಸಂಘದ ಅಧ್ಯಕ್ಷೆ ಗೌರಮ್ಮ ಮಹೇಶ್ ಸಂಘದ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಹೆಮ್ಮನಹಳ್ಳಿ ಡೈರಿಗೆ ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ಹಾಲು ಉತ್ಪಾದಕರಿಗೆ ಸನ್ಮಾನಿಸಿ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾರ್ಗ ವಿಸ್ತರಣಾಧಿಕಾರಿ ನಾಗಪ್ಪ ಅಲ್ಲಿಬಾದಿ,ತಾ.ಪಂ ಮಾಜಿ ಸದಸ್ಯ ರಾಯಪ್ಪ, ಗ್ರಾ.ಪಂ ಮಾಜಿ ಸದಸ್ಯ ಶ್ರೀನಿವಾಸ್,ಕೃಷ್ಣೆಗೌಡ, ಗುಡುಗನಹಳ್ಳಿ ಡೈರಿ ಉಪಾಧ್ಯಕ್ಷೆ ಲಲಿತ ಶಂಕರಶೆಟ್ಟಿ, ನಿರ್ದೇಶಕರಾದ ಪುಷ್ಪಲತಾ, ಕಲಾವತಿ, ಸುಜಾತ, ಕಾಂತಮಣಿ, ಅಶ್ವಿನಿ, ಜ್ಯೋತಿ, ಪಲ್ಲವಿ, ಸವಿತ, ಹೆಮ್ಮನಹಳ್ಳಿ ಡೈರಿ ಅಧ್ಯಕ್ಷೆ ಯೋಗಮ್ಮ, ಉಪಾಧ್ಯಕ್ಷ ಗಿರಿಜಾ, ನಿರ್ದೇಶಕರಾದ ಅರುಣ, ರಮ್ಯ, ಶಶಿಕಲಾ, ಮೀನಾಕ್ಷಿ, ರುಕ್ಮಿಣಿ, ಜಯಮ್ಮ, ಶಾರದಮ್ಮ, ಲಕ್ಷಮ್ಮ,ಗುಡುಗನಹಳ್ಳಿ ಕಾರ್ಯದರ್ಶಿ ಸೌಮ್ಯ ಚಂದ್ರೇಶ್, ಹೆಮ್ಮನಹಳ್ಳಿ ಕಾರ್ಯದರ್ಶಿ ಕಾವ್ಯ ಉಮೇಶ್, ಹಾಲು ಪರೀಕ್ಷಕಿ ಹರೀಶ್, ಮಂಜುಳ, ಸೇರಿದಂತೆ ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ*
