ಕುಂದಾಪುರ, ಜೂನ್ 28: ರಾಷ್ಟ್ರೀಯ ಪಲ್ಸ್ ಪೋಲಿಯೋ ದಿನದ ಅಂಗವಾಗಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಬಾಶಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದಲ್ಲಿ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ತಂಡ ಸಕ್ರಿಯವಾಗಿ ಭಾಗವಹಿಸಿತು.
ಈ ಸಂದರ್ಭದಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯದಲ್ಲಿ ಆರೋಗ್ಯ ಸಿಬ್ಬಂದಿಯೊಂದಿಗೆ ಕೈಜೋಡಿಸಿದ ರೋಟರಿ ಸದಸ್ಯರು, ಮಕ್ಕಳಿಗೆ ಸಿಹಿ ವಿತರಿಸಿ ಲಸಿಕಾ ಅಭಿಯಾನಕ್ಕೆ ಸಹಕಾರ ನೀಡಿದರು.

ಕಾರ್ಯಕ್ರಮದಲ್ಲಿ ಕುಂಬಾಶಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಘವೇಂದ್ರ, ಕುಂಬಾಶಿ ಅಂಗನವಾಡಿ ಕೇಂದ್ರದ ಸಿಬ್ಬಂದಿ ಹಾಗೂ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಅಧ್ಯಕ್ಷ ರೋ. ವಜ್ರಕುಮಾರ್ ಎಚ್.ಡಿ., ಅಧ್ಯಕ್ಷರಾಗಿ ಆಯ್ಕೆಯಾದ ಹಾಗೂ ಕಾರ್ಯದರ್ಶಿ ರೋ. ಕೆ.ಎಸ್. ಯೋಗೇಶ್, ಖಜಾಂಚಿ ರೋ. ಗವಿಗೌಡ, ನಿರ್ದೇಶಕರಾದ ರೋ. ವಿಶ್ವನಾಥ್, ರೋ. ಸಿದ್ದನಂಜಪ್ಪ, ರೋ. ಭುವನೇಶ್, ಪಲ್ಸ್ ಪೋಲಿಯೋ ಸಮಿತಿ ಅಧ್ಯಕ್ಷ ರೋ. ರಾಜಣ್ಣ ಸೇರಿದಂತೆ ರೋ. ಗುರುಮೂರ್ತಿ, ರೋ. ವೇಣುಗೋಪಾಲ್, ರೋ. ಶಶೀಂದ್ರನಾಥನ್, ರೋ. ರಾಜೇಶ್, ರೋ. ಬುದೇಶ್, ರೋ. ಕೃಷ್ಣಮೂರ್ತಿ, ರೋ. ರಾಘವೇಂದ್ರ, ರೋ. ಲೋಕೇಶ್, ರೋ. ತುಕಾರಾಮ್, ರೋ. ಅನು ಪ್ರಸಾದ್, ರೋ. ಮೃತ್ಯುಂಜಯ ಹಾಗೂ ಇತರರು ಭಾಗವಹಿಸಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ವೈದ್ಯರು, ಆರೋಗ್ಯ ಸಿಬ್ಬಂದಿ, ಅಂಗನವಾಡಿ ಸಿಬ್ಬಂದಿ ಹಾಗೂ ರೋಟರಿ ಸದಸ್ಯರಿಗೆ ತಂಡದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
