ಹಾಸನ, ಜು. 2: ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ನಗರದ ವಿವಿಧ ಆಸ್ಪತ್ರೆಗಳ ವೈದ್ಯರನ್ನು ಸನ್ಮಾನಿಸಿ ಅವರ ಸಮಾಜಮುಖಿ ಸೇವೆಯನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜನಪ್ರಿಯ ಆಸ್ಪತ್ರೆಯ ವೈದ್ಯರು ಹಾಗೂ ರೋಟರಿ ಕ್ಲಬ್ನ ಗೌರವ ಸದಸ್ಯರಾದ ಡಾ. ಅಬ್ದುಲ್ ಬಶೀರ್, ವಿನಯ್ ಮಕ್ಕಳ ಆಸ್ಪತ್ರೆಯ ಡಾ. ವಿನಯ್ ಹಾಗೂ ಇಂಡಿಯನ್ ಆಸ್ಪತ್ರೆಯ ಡಾ. ಅನೂಪ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಲಬ್ನ ಪದಾಧಿಕಾರಿಗಳು, ವೈದ್ಯರು ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಸಮಾಜದ ಆರೋಗ್ಯ ಕಾಪಾಡುವ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಅವರ ಸೇವೆ ಸದಾ ಸ್ಮರಣೀಯವಾಗಿದೆ ಎಂದು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ನ ಅಧ್ಯಕ್ಷ ರೋ. ಕೆ.ಎಸ್. ಯೋಗೇಶ್, ಕಾರ್ಯದರ್ಶಿ ರೋ. ಬಿ.ಎಂ. ದರ್ಶನ್, ನಿಕಟ ಪೂರ್ವ ಅಧ್ಯಕ್ಷ ರೋ. ಎಚ್.ಡಿ. ವಜ್ರಕುಮಾರ್, ಖಜಾಂಚಿ ರೋ. ಶಶೀಂದ್ರನಾಥನ್ ಎಂ.ಡಿ., ಜಂಟಿ ಕಾರ್ಯದರ್ಶಿ ರೋ. ರಾಜೇಶ್ ಸೇರಿದಂತೆ ಕ್ಲಬ್ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
