ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಎನ್.ಆರ್. ಹರೀಶ್ ಅವರು ವಿವಿಧ ಸಮಾಜ ಸೇವಾ ಕಾರ್ಯಗಳ ಮೂಲಕ ತಮ್ಮ 42ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಹಲವು ಗೆಳೆಯರು ಈ ಕಾರ್ಯದಲ್ಲಿ ಬೆಂಬಲಿಸಿದರು.
ಬೆಳಿಗ್ಗೆ ಸಿದ್ಧಗಂಗಾ ಮಠದಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.ನಂತರ ಶ್ರೀಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು.ಆನಂತರ ಬೆಳ್ಳಾವಿಯ ಕಾರದೇಶ್ವರ ಮಠದಲ್ಲಿ ಕಾರದ ವೀರಬಸವ ಸ್ವಾಮೀಜಿಗಳ ದರ್ಶನ ಮಾಡಿ ಆಶೀರ್ವಾದ ಪಡೆದರು.ಈ ಮಠದ ವಿದ್ಯಾರ್ಥಿಗಳಿಗೆ ಎನ್.ಆರ್.ಹರೀಶ್ ಅವರು ಮಠದಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಟ್ರಂಕ್ ಮತ್ತಿತರ ಪರಿಕರಗಳನ್ನು ವಿತರಿಸಿದರು.
ನಂತರ ನಗರದ ಸಾರ್ವಜಿನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ಹಂಚಿದರು.ಇದಲ್ಲದೆ ಅನಾಥ, ವಿಕಲಚೇತನ ಮಕ್ಕಳಿಗೆ ವಿವಿಧ ಸಾಮಗ್ರಿ ನೀಡಿ ನೆರವಾದರು.
ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿಮಹೇಶ್, ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಹಾಲನೂರುಅನಂತಕುಮಾರ್, ಉಮೇಶ್, ಪಾಲನೇತ್ರಯ್ಯ, ಹೆಬ್ಬೂರುರಾಘವೇಂದ್ರ, ಕುಪ್ಪೂರು ಪಣಗಾರ್ ಶಿವಕುಮಾರ್, ವಿಷ್ಣುವರ್ಧನ್, ಹಿರೇಹಳ್ಳಿ ತನ್ವೀರ್, ಪ್ರಕಾಶ್, ಸುಭಾಶ್ ಪಟೇಲ್, ಧನಂಜಯ, ಚೇತನ್, ಎನ್.ಹೆಚ್. ಪ್ರಭಾಸ್ ಮೊದಲಾದವರು ಭಾಗವಹಿಸಿದ್ದರು.
– ಚಂದ್ರಚೂಡ ಕೆ.ಬಿ.
