ತುಮಕೂರು : ಸುಮಾರು 25 ವರ್ಷಕ್ಕೂ ಹೆಚ್ಚಿನ ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿರುವ ಪ್ರಾಮಾಣಿಕ ಹಾಗೂ ನಿಷ್ಠೆಯ ಸೇವೆಗೆ, ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯಿಂದ 2026ನೇ ಸಾಲಿನಲ್ಲಿ ನೀಡಿರುವ “ವೈದ್ಯ ಚೇತನ” ಪ್ರಶಸ್ತಿಗೆ ಭಾಜನವಾಗಿರುವ ಡಾ|| ಕೆ.ಪಿ.ಸುರೇಶ್ಬಾಬು ರವರನ್ನು ತುಮಕೂರು ವೀರಶೈವ ಕೋ-ಆಪರೇಟಿವ್ ಬ್ಯಾಂಕ್ (ಲಿ) ವತಿಯಿಂದ ಅಭಿನಂದಿಸಲಾಯಿತು
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕೆ.ಜೆ.ರುದ್ರಪ್ಪ, ಉಪಾಧ್ಯಕ್ಷರಾದ ಹೆಬ್ಬಾಕಮಲ್ಲಿಕಾರ್ಜುನಯ್ಯ, ಕಾರ್ಯಕಾರಿ ಮಂಡಳಿ ನಿರ್ದೇಶಕರುಗಳು, ಸಿಇಒ ಶ್ರೀಮತಿ ಕಲ್ಪನ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
