ತುಮಕೂರು : ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಸ್.ಐ.ಆರ್ ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ನ ಮಂಚೂಣಿ ಘಟಕಗಳ ಅಧ್ಯಕ್ಷರುಗಳು, ವಿವಿಧ ವಿಭಾಗಗಳ ಅಧ್ಯಕ್ಷರುಗಳ ಸಭೆಯಲ್ಲಿ ಡಿಸಿಸಿ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿ.ಚಂದ್ರಶೇಖರಗೌಡ,ಭಾರತ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕೇವಲ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಿಗೆ ಅನ್ವಯವಾಗದೆ,ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಇದೇ ಮತದಾರರ ಪಟ್ಟಿ ಬಳಕೆ ಮಾಡುವುದರಿಂದ ಕಾಂಗ್ರೆಸ್ ಮುಖಂಡರು ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಒಂದೇ ಒಂದು ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಬೇಕಾಗಿದೆ.ಸರಕಾರ ನಮಗೇನು ಮಾಡಿಲ್ಲ ಎಂದು ನಿರ್ಲಕ್ಷ ತೋರಿದರೆ, ಪಕ್ಷದ ಜೊತೆಗೆ ನೀವು ಸಹ ಅಧಿಕಾರದಿಂದ ದೂರ ಉಳಿಯಬೇಕಾಗುತ್ತದೆ.ಹಾಗಾಗಿ ಎಸ್.ಸಿ, ಎಸ್.ಟಿ, ಓಬಿಸಿ,ಕಾರ್ಮಿಕ,ವಕೀಲರ ಸೆಲ್ಗಳ ಮುಖಂಡರು ಹಾಗೂ ಮಹಿಳಾ ವಿಭಾಗ,ರೈತ ವಿಭಾಗ,ನೆಹರು ಬಾಲಮಂಚ್ ಸೇರಿದಂತೆಎಲ್ಲಾ ಘಟಕಗಳ ಮುಖಂಡರುಗಳು ಮತ್ತು ಪದಾಧಿಕಾರಿಗಳು ಸಹ ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವಎಸ್.ಐ.ಆರ್. ಬಗ್ಗೆ ಗಮನಹರಿಸಿ, ಪಕ್ಷದಿಂದ ಅಧಿಕೃತವಾಗಿ ನೇಮಕವಾಗಿರುವ ಬಿಎಲ್ಓಗಳೊಂದಿಗೆ ನೇರ ಸಂಪರ್ಕದಲ್ಲಿದ್ದು, ಸರಿಯಾದದಾರಿಯಲ್ಲಿ ಎಸ್.ಐ.ಆರ್. ನಡೆಯುವಂತೆ ಮಾಡಬೇಕೆಂದು ಸಲಹೆ ನೀಡಿದರು.
ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ನಗರಪಾಲಿಕೆ, ವಿವಿಧ ನಗರಸಭೆಗಳು, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಜಿ.ಪಂ, ತಾ.ಪಂ.ಗಳ ಚುನಾವಣೆಗಳಿಗೆ ಕಾರ್ಯಕರ್ತರು ಸಿದ್ದರಾಗಬೇಕು.ಪಕ್ಷದ ಕೆಲಸದಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಹೆಚ್ಚು ಅವಕಾಶ ದೊರೆಯಲಿದೆ. ಹಾಗಾಗಿ ಹೆಚ್ಚು ಹೆಚ್ಚಾಗಿ ಸಂಘಟನೆಯಲ್ಲಿತೊಡಗುವಂತೆ ಡಿಸಿಸಿ ಅಧ್ಯಕ್ಷಚಂದ್ರಶೇಖರಗೌಡಕೋರಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್,ಆರ್.ರಾಮಕೃಷ್ಣ, ನರಸೀಯಪ್ಪ, ಬಿ.ಜಿ.ನಿಂಗರಾಜು, ಕುಮಾರಸ್ವಾಮಿ, ಅನಿಲ್ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರರಾದ ಶ್ರೀಮತಿ ಕೆ.ಎಂ. ಸುಜಾತ, ಭಾಗ್ಯಮ್ಮ, ಕೆಂಪಣ್ಣ, ಶಿವಪ್ರಸಾದ್, ಜಿ.ಎಲ್.ಗೌಡ, ಅಂಬರೀಷ್ ವಿವಿಧ ಮಂಚೂಣಿ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
